ಮಡಿಕೇರಿ, ಆ. ೨೬: ಸ್ವಸಹಾಯ ಸಂಘಗಳಿAದ ಸದಸ್ಯರಿಗೆ ಸಾಲ ಕೊಡಿಸಿ ಬಳಿಕ ಸದಸ್ಯರುಗಳು ಮರುಪಾವತಿಸಿದ ಸಾಲದ ಹಣವನ್ನು ಬ್ಯಾಂಕ್‌ಗೆ ಪಾವತಿಸದೆ ವಂಚಿಸಿರುವ ಆರೋಪದಡಿ ಐವರು ಮಹಿಳೆಯರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
೨೦೨೦ ಸೆಪ್ಟೆಂಬರ್ ತಿಂಗಳಿನಿAದೀಚೆಗೆ ನಗರದ ಮಖಾನ್‌ಗಲ್ಲಿ ನಿವಾಸಿ ನಾಸಿರಭಾನು ಅವರ ಸಹಾಯಕರಾದ ರಾಜು ಸುಮಾ, ಝಾರ, ಫಾತಿಮಾ ಹಾಗೂ ರಮ್ಯಾ ಎಂಬವರುಗಳು ನಡೆಸುತ್ತಿರುವ ದ್ವೀಪ ಸ್ವಸಹಾಯ ಸಂಘದಲ್ಲಿ ಸದಸ್ಯರಾಗಿರುವ ಸುಕನ್ಯ ಹಾಗೂ ಸುಮಿತ್ರ ಎಂಬವರುಗಳಿಗೆ ತಲಾ ೨೫ ಸಾವಿರ, ಅಕ್ಷತಾ ಸಂಘದ ಸದಸ್ಯರಾದ ಎಸ್.ಪಿ. ವಿಘ್ನೇಶ್ ಎಂಬವರಿಗೆ ೪೦ ಸಾವಿರ, ಗಂಜೆಗೌಹರ್ ಸಂಘದ ಸದಸ್ಯರಾದ ಅಬ್ದುಲ್ ವಾಹಿದ್ ಎಂಬವರಿಗೆ ೨೮ ಸಾವಿರ, ಗಣಪತಿ ಸ್ವಸಹಾಯ ಸಂಘದ ಸದಸ್ಯರಾದ ಸಬೀನ, ಭಾಗಿರಥಿ, ಸುಮಯ್ಯ ಎಂಬವರುಗಳಿಗೆ ತಲಾ ೨೫ ಸಾವಿರ, ರಸೂಲ್ ಸ್ವಸಹಾಯ ಸಂಘದಿAದ ಸದಸ್ಯರಾದ ಕೆ.ಎಂ. ಹೇಮ, ಕೆ.ಎಂ. ನಿಶಾ ಎಂಬವರುಗಳಿಗೆ ತಲಾ ೨೫ ಸಾವಿರ ಹಣವನ್ನು ಬ್ಯಾಂಕ್‌ನಿAದ ಸಾಲವಾಗಿ ಕೊಡಿಸಿದ್ದು, ಸಾಲ ಪಡೆದವರೆಲ್ಲರೂ ಸಾಲದ ಹಣವನ್ನು ನಗದು ರೂಪದಲ್ಲಿ ಹಾಗೂ ಮೊಬೈಲ್ ಮೂಲಕ ಮರುಪಾವತಿ ಮಾಡಿದ್ದರೂ, ಈ ಹಣ ಬ್ಯಾಂಕ್‌ಗೆ ಪಾವತಿಸದೆ ವಂಚಿಸಲಾಗಿದೆ. ಅಲ್ಲದೆ ನಾಜಿನಿ, ಭವ್ಯಶ್ರೀ ಎಂಬವರುಗಳಿAದ ಬ್ಯಾಂಕ್ ಚೆಕ್ ಮತ್ತು ದಾಖಲೆಗಳನ್ನು ಪಡೆದು ತಲಾ ೨೫ ಸಾವಿರ ಹಣವನ್ನು ಬ್ಯಾಂಕ್‌ನಿAದ ಸಾಲಪಡೆದು ನಾಸಿರಬಾನು ಅವರೇ ಉಪಯೋಗಿಸಿ ಕೊಂಡಿದ್ದಾರೆ ಎಂದು ಎಸ್.ಪಿ. ವಿಘ್ನೇಶ್ ಎಂಬವರು ಮಡಿಕೇರಿ ನಗರ ಠಾಣೆಗೆ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.