ಗುಡ್ಡೆಹೊಸೂರು, ಆ. ೨೬: ಸತತ ಪ್ರಗತಿಯತ್ತ ಸಾಗುತ್ತಿರುವ ನಂಜರಾಯಪಟ್ಟಣ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ. ೭೩.೪೧ ಲಕ್ಷಗಳ ಲಾಭ ಗಳಿಸಿದೆ. ಸಂಘದ ವ್ಯಾಪ್ತಿಗೆ ೯ ಗ್ರಾಮಗಳು ಸೇರಿದ್ದು, ೨೩೩೭ ಸದಸ್ಯರನ್ನು ಹೊಂದಿದ್ದು ಪಾಲು ಬಂಡವಾಳ ರೂ.೨೪೨.೫೬ ಲಕ್ಷ ಹೊಂದಿರುತ್ತದೆ.
೨೦೨೨-೨೩ನೇ ಸಾಲಿಗೆ ರೂ. ೧೯೮.೧೦ ಕೋಟಿಗಳ ವಹಿವಾಟು ನಡೆಸಿರುವ ಸಂಘವು ೧೩೧.೧೩ ಲಕ್ಷಗಳ ಕ್ಷೇಮನಿಧಿಯನ್ನು ೨೪೪.೩೩ ಇತರ ನಿಧಿಯನ್ನು ಹೊಂದಿರುತ್ತದೆ ಎಂದು ಸಂಘದ ಪ್ರಕಟಣೆ ತಿಳಿಸಿದೆ. ಸಂಘದ ವತಿಯಿಂದ ಸದಸ್ಯರಿಗೆ ವಿವಿಧ ಸಾಲಗಳನ್ನು ವಿತರಿಸಲಾಗುತ್ತಿದೆ. ೨೦೨೨-೨೩ರಲ್ಲಿ ರೂ. ೯೯೭ ಲಕ್ಷಗಳ ಕೆ.ಸಿ.ಸಿ ಸಾಲವನ್ನು, ರೂ. ೩೪೭.೬೦ ಲಕ್ಷಗಳ ಮಧ್ಯಮಾವಧಿ ಸಾಲವನ್ನು ರೂ. ೪೩೭.೧೦ ಲಕ್ಷಗಳ ಜಾಮೀನು ಸಾಲವನ್ನು ರೂ. ೫೪.೨೪ ಲಕ್ಷಗಳ ವಾಹನ ಸಾಲವನ್ನು ಸದಸ್ಯರಿಗೆ ವಿತರಿಸಲಾಗಿದೆ. ರೂ. ೩೦೪ ಲಕ್ಷಗಳ ಗೃಹಸಾಲ, ರೂ. ೧೯೯.೧೬ ಲಕ್ಷಗಳ ಆಭರಣ ಸಾಲ ವಿತರಿಸಲಾಗಿದೆ, ೧೧೬ ಸ್ವಸಹಾಯ ಸಂಘಗಳನ್ನು ಸಂಘದ ವತಿಯಿಂದ ರಚಿಸಿದ್ದು, ರೂ. ೪೧.೩೬ ಲಕ್ಷಗಳ ಠೇವಣಿ ಸಂಗ್ರಹಿಸಲಾಗಿದೆ ಎಂದು ಮಾಹಿತಿ ನೀಡಲಾಗಿದೆ.
ಸಂಘವು ನಂಜರಾಯಪಟ್ಟಣ, ವಾಲ್ನೂರು ಮತ್ತು ಗುಡ್ಡೆಹೊಸೂರು ಗ್ರಾಮಗಳಲ್ಲಿ ದಿನಸಿ ಶಾಖೆಗಳನ್ನು ಹೊಂದಿದ್ದು, ಶಾಖೆಗಳ ಮೂಲಕ ರಸಗೊಬ್ಬರ ಕ್ರಿಮಿನಾಶಕ, ಗ್ರಾಹಕರ ವಸ್ತುಗಳು, ಸಿಮೆಂಟ್, ಕೊಂಕಣ್ ಗ್ಯಾಸ್ ಮತ್ತು ಮದ್ದುಗುಂಡುಗಳ ಮಾರಾಟ ಮಾಡುತ್ತಿದ್ದು, ೨೦೨೨-೨೩ನೇ ಸಾಲಿನಲ್ಲಿ ೧೦೪೧.೯೭ ಲಕ್ಷಗಳ ವ್ಯಾಪಾರ ವಹಿವಾಟು ನಡೆಸಿ ರೂ. ೬೩.೩೨ ಲಕ್ಷಗಳ ಲಾಭಗಳಿಸಿದೆ. ಅಲ್ಲದೆ ಮೂರು ಶಾಖೆಗಳಲ್ಲಿ ಬ್ಯಾಂಕಿAಗ್ ವ್ಯವಹಾರ ನಡೆಯುತ್ತಿದೆ. ವಾಲ್ನೂರು ಶಾಖೆಯಲ್ಲಿ ಸಹಕಾರ ಸಭಾಂಗಣ ನಿರ್ಮಿಸಿದ್ದು, ಸದಸ್ಯರಿಗೆ ಮದುವೆ ಮುಂತಾದ ಶುಭಕಾರ್ಯಗಳಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ. ಸಂಘ ೨ ಟ್ರಾö್ಯಕ್ಟರ್ ಮತ್ತು ೧ ಲಾರಿಯನ್ನು ಹೊಂದಿದೆ. ಸಂಘದ ವತಿಯಿಂದ ರೈತಕೂಟವನ್ನು ರಚಿಸಲಾಗಿದೆ, ಸಂಘದ ಸದಸ್ಯರಿಗೆ ಆನೂಕೂಲವಾಗುವಂತೆ ನೂತನ ಸಹಕಾರ ಭವನವನ್ನು ದಿನಾಂಕ ೨೦.೮.೨೦೨೩ ರಂದು ಉಧ್ಘಾಟಿಸಲಾಯಿತು. ಸಂಘದ ವತಿಯಿಂದ ಮೋದಿಕೇರ್ ಮಳಿಗೆ ಮತ್ತು ಇ ಸ್ಟಾಂಪಿAಗ್ ವ್ಯವಸ್ಥೆ ನಡೆಯುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ.೨೭ ರಂದು (ಇಂದು) ನಡೆಯಲಿದೆ. ಮಹಾಸಭೆಯು ಸಂಘದ ಅಧ್ಯಕ್ಷ ಮುರುಳಿ ಮಾದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಉಪಾಧ್ಯಕ್ಷ ಬಿ.ಎಸ್. ಧನಪಾಲ್ ಮತ್ತು ನಿರ್ದೇಶಕರಾದ ಡಿ.ಎಲ್. ಮಹೆಶ್ಚಂದ್ರ, ಪಿ.ಬಿ. ಅಶೋಕ್, ಬಿ.ಎನ್. ಕಾಶಿ, ಕೆ.ಡಿ. ದಾದಪ್ಪ, ವಿ.ಎಸ್. ರಾಜಪ್ಪ, ಕೆ.ಜಿ. ಲೋಕನಾಥ್, ಎಸ್.ಕಮಲಮ್ಮ, ಎಸ್.ಬಿ. ಅನಿತ, ಆರ್.ಕೆ. ಚಂದ್ರ, ಹೆಚ್.ಜೆ. ಕೃಷ್ಣ ಭಾಗವಹಿಸಲಿದ್ದಾರೆ.