ವೀರಾಜಪೇಟೆ, ಆ. ೨೬ : ನಗರದ ಚಿಕ್ಕಪೇಟೆ ಛತ್ರಕೆರೆಯ ಬಳಿಯ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಸೆ. ೧ ರಂದು ಶ್ರೀ ರಾಘವೇಂದ್ರ ಸ್ವಾಮಿಯ ಆರಾಧನಾ ಮಹೋತ್ಸವ ನಡೆಯಲಿದೆ. ಅಂದು ಸ್ವಾಮಿಗಳಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆಗಳು, ಮಹಾಪೂಜೆ ಸ್ವಾಮಿಯ ಕೀರ್ತನೆ ಆರಾಧನಾ ಕಾರ್ಯಕ್ರಮಗಳು ನಡೆಯಲಿವೆ. ತದ ನಂತರ ಆಡಳಿತ ಮಂಡಳಿಯ ವತಿ ಯಿಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಲಿದೆ.