ಪೊನ್ನಂಪೇಟೆ, ಆ. ೨೬: ಗೋಣಿಕೊಪ್ಪಲು ಕಾವೇರಿ ಕಾಲೇಜು ಎನ್ಎಸ್ಎಸ್ ಘಟಕದ ವತಿಯಿಂದ ನನ್ನ ಮಣ್ಣು ನನ್ನ ದೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಪ್ಪ ಮಾತನಾಡಿ, ನನ್ನ ಮಣ್ಣು ನನ್ನದೇಶ ಕಾರ್ಯಕ್ರಮ ದೇಶದ ರಕ್ಷಣೆಗೆ ಜೀವನವನ್ನು ಮುಡುಪಾಗಿಟ್ಟಿರುವಂತಹ ಯೋಧರನ್ನು ಸ್ಮರಿಸುವಂತಹ ಕಾರ್ಯಕ್ರಮವಾಗಿದೆ.
ಪ್ರತಿಯೊಬ್ಬ ಮನುಷ್ಯನು ದೇಶಾಭಿಮಾನವನ್ನು ಮೈಗೂಡಿಸಿ ಗೊಳ್ಳಬೇಕು, ಪ್ರತಿಯೊಬ್ಬರು ದೇಶಕ್ಕಾಗಿ ನನ್ನ ಕೊಡುಗೆ ಏನು ಎಂಬುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ದೇಶದಲ್ಲಿ ನಾವು ಸುರಕ್ಷತೆಯಿಂದ ವಾಸಿಸುತ್ತೇವೆ ಎಂದರೆ ಅದು ಯೋಧರ ಕೊಡುಗೆ ಎಂದು ತಿಳಿಸಿದರು. ಈ ಸಂದರ್ಭ ಎನ್ಎಸ್ಎಸ್ ಅಧಿಕಾರಿ ಎಂ.ಎನ್. ವನಿತ್ ಕುಮಾರ್, ಎನ್.ಪಿ. ರೀತಾ, ರಾಷ್ಟಿçÃಯ ಸೇವಾ ಯೋಜನೆ ಸ್ವಯಂ ಸೇವಕರು ಹಾಜರಿದ್ದರು.