*ಗೋಣಿಕೊಪ್ಪ, ಆ. ೨೬: ಮುಳಿಯ ಪ್ರತಿಷ್ಠಾನ ಮತ್ತು ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಳಿಯ ಜ್ಯುವೆಲ್ಸ್ನಲ್ಲಿ ಆಯೋಜಿಸಿದ್ದ ಕೊಡಗಿನ ಅಭರಣಗಳ ಚಿತ್ರಕಲೆ ಸ್ಪರ್ಧೆಯ ಬಹುಮಾನ ವಿತರಣೆ ನಡೆಯಿತು.

ಚಿತ್ರಕಲೆಯ ಪ್ರಾಥಮಿಕ ವಿಭಾಗದಲ್ಲಿ ಹೆಚ್. ಪ್ರಜ್ವಲ್ ಪ್ರಥಮ, ಬಿ.ಎಸ್. ಸ್ಪೂರ್ತಿ ದ್ವಿತೀಯ, ಪ್ರೌಢ ವಿಭಾಗದಲ್ಲಿ ಜೆ. ತೇಜಸ್ವಿನಿ (ಪ್ರ), ಕೆ..ಎಲ್. ತಶ್ವಿಯಾ (ದ್ವಿ), ಕಾಲೇಜು ವಿಭಾಗದಲ್ಲಿ ಚೆಪ್ಪುಡೀರ ಪಿ. ರೇವಾ (ಪ್ರ), ಸಿ.ಪಿ. ತುಷ್ಯಂತ್ (ದ್ವಿ) ಸ್ಥಾನ ಪಡೆದರು.

ಸುರಕ್ಷಾ ವೈಲಾಯ ಅವರಿಂದ ಭರತ ನಾಟ್ಯ, ಸೈಕ್ಲೋನ್ ತಂಡದ ನೃತ್ಯ, ಅನ್ವಿತ್‌ಕುಮಾರ್ ಹಾಡುಗಾರಿಕೆ, ಕುಟ್ಟಂಡ ತನಿಷಾ ಅವರಿಂದ ಕೊಡವ ಹಾಡು ಮೂಡಿ ಬಂತು. ಚನ್ನನಾಯಕ ನಿರೂಪಿಸಿದರು.

ಮುಳಿಯ ಮಾರುಕಟ್ಟೆ ವಿಭಾಗದ ಸಲಹೆಗಾರ ವೇಣುಶರ್ಮ, ಆನ್‌ಲೈನ್ ಸೇಲ್ಸ್ ವ್ಯವಸ್ಥಾಪಕಿ ಲತಾರಾಣಿ, ಗೋಣಿಕೊಪ್ಪ ವ್ಯವಸ್ಥಾಪಕ ಬಿ. ಎಸ್. ಕಿಶೋರ್, ಮಡಿಕೇರಿ ವ್ಯವಸ್ಥಾಪಕ ತೀತಿಮಾಡ ಸೋಮಣ್ಣ, ಪೊನ್ನಂಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಇದ್ದರು.