ಒಂಟಿ ಮನೆಯದು., ವೃದ್ಧ ದಂಪತಿ ಮಾತ್ರವೇ ವಾಸ., ಮನೆಯಲ್ಲಿ ಧನ, ಕನಕ, ಸಂಪತ್ತಿಗೇನೂ ಕೊರತೆಯಿಲ್ಲ., ಹಾಗಾಗಿ ಒಬ್ಬ ಕಾವಲುಗಾರನಿದ್ದ. ಕಳ್ಳರ ಕಣ್ಣು ಒಂಟಿ ಮನೆ ಮೇಲೆ ಇದೆಯಾದರೂ ಕಾವಲುಗಾರನ ಕಣ್ತಪ್ಪಿಸಿ ಒಳ ಹೋಗೋದೇ ಕಷ್ಟವಾಗುತ್ತಿತ್ತು., ಅದೊಂದು ದಿನ ದಡ ಬಡ ಎಂದು ಕಳ್ಳರು ಮನೆಗೆ ನುಗ್ಗಿಯೇ ಬಿಟ್ಟರು, ಮನೆಯಲ್ಲಿದ್ದ ಧನ-ಕನಕವನ್ನೆಲ್ಲ ದೋಚಿ ಹೋದರು., ಗಾಬರಿಯಲ್ಲಿದ್ದ ದಂಪತಿಯಲ್ಲಿ ಆತಂಕ., ಇಷ್ಟೆಲ್ಲ ಆದರೂ ಕಾವಲುಗಾರನ ಸದ್ದಿಲ್ಲ., ಎಲ್ಲಿ ಹೋದನೆಂದು ಮನೆಯ ಸುತ್ತ ಹುಡುಕಾಡಿದಾಗ ಒಂದು ಬದಿಯಲ್ಲಿ ಕಾವಲುಗಾರ ಅಂಗಾತ ಮಲಗಿದ್ದ., ಅವನ ಉಸಿರು ನಿಂತೇ ಹೋಗಿತ್ತು..! ಕಳ್ಳರು ಅವನಿಗೆ ವಿಷಾಹಾರ ಕೊಟ್ಟು ಸಾಯಿಸಿ ತಮ್ಮ ಕೆಲಸ ಸಾದಿಸಿದ್ದರು. ದಂಪತಿಯ ದುಃಖದ ಕಟ್ಟೆ ಒಡೆಯಿತು., ಅತ್ತು ಗೋಳಾಡಿದರು., ಕಾವಲುಗಾರನನ್ನು ಅಪ್ಪಿಕೊಂಡು ಮರುಗಿದರು., ಧನ-ಕನಕ ಹೋಗಿದ್ದು, ಅವರನ್ನು ಕಾಡಲಿಲ್ಲ., ಮನೆ ಮಗನಂತಿದ್ದ, ಸ್ನೇಹಜೀವಿ ಕಾವಲುಗಾರನನ್ನು ಕಳೆದುಕೊಂಡಿದ್ದು ಸಹಿಸಿಕೊಳ್ಳಲಾಗುತ್ತಿಲ್ಲ., ಆ ಕಾವಲುಗಾರ ಬೇರೆ ಯಾರೂ ಅಲ್ಲ ಅವರು ಪ್ರೀತಿಯಿಂದ ಸಾಕಿದ್ದ ‘ನಾಯಿ..’..!

ನಿಷ್ಠೆ, ನಿಯತ್ತು., ನಂಬಿಕೆಗೆ ಮತ್ತೊಂದು ಹೆಸರೇ ನಾಯಿ., ಪುಟ್ಟದಿರುವಾಗ ಕುಂಯ್ ಕುಂಯ್ ಅಂತ., ದೊಡ್ಡದಾದ ಮೇಲೆ ಬೌ ಬೌ ಅಂತ ಅಡಿಗಡಿಗೆ ಎಡತಾಕುತ್ತಾ ಪ್ರೀತಿ ತೋರುತ್ತಾ ಬೇಕು ಬೇಡಿಕೆಗಳನ್ನು ಈಡೇರಿಸಿಕೊಳ್ಳುವ ಮುಗ್ಧ ಪ್ರಾಣಿ., ಸಾಮಾನ್ಯವಾಗಿ ಎಲ್ಲರೂ ನಾಯಿ ಸಾಕುತ್ತಾರೆ., ಮನೆಯ ಕಾವಲಿಗಾಗಿ, ಏಕಾಂತ ಕಳೆಯಲು., ಸಂತೋಷಕ್ಕಾಗಿ., ಕೆಲವರು ಬೇಟೆಗಾಗಿ ನಾಯಿಗಳನ್ನು ಸಾಕಿದರೆ., ಇನ್ನೂ ಕೆಲವರಿಗೆ ನಾಯಿ ಸಾಕುವದೇ ಹವ್ಯಾಸವಾಗಿದೆ. ಮನೆಯಲ್ಲೆ ಸಾಕುವ ನಾಯಿಗಳು ಆ ಮನೆಯ ಒಂದು ಭಾಗವಾಗಿಬಿಡುತ್ತವೆ. ಆಟ., ಊಟದೊಂದಿಗೆ ಕೆಲವರಿಗೆ ವಾಯುವಿಹಾರಕ್ಕೆ ತೆರಳಲು ಸಂಗಾತಿಗಳಾದರೆ, ಇನ್ನೂ ಕೆಲವರಿಗೆ ಅಂಗಡಿಗಳಿAದ ಹಾಲು, ಪೇಪರ್, ಸಾಮಗ್ರಿಗಳನ್ನು ತರಲು ಸಹಚರರಾಗುತ್ತವೆ., ಬುದ್ಧಿ ಕಲಿಸಿದರೆ ಕೃಷಿ ಕಾರ್ಯಗಳಲ್ಲೂ ನೆರವಾಗುತ್ತವೆ. ಸೇನೆ., ಪೊಲೀಸ್ ಇಲಾಖೆಗಳಲ್ಲಿ ಪತ್ತೆದಾರನಾಗಿಯೂ ಕಾರ್ಯನಿರ್ವಹಿಸುತ್ತವೆ. ಮನುಷ್ಯನ ಅತ್ಯಂತ ಆತ್ಮೀಯ ಒಡನಾಡಿಗಳಲ್ಲೊಂದಾದ ಈ ನಾಯಿಯ ಬಗ್ಗೆ ಅರಿವು ಮೂಡಿಸುವದು, ಜಾಗೃತಿ ಮೂಡಿಸುವ ಸಲುವಾಗಿ ಆಗಸ್ಟ್ ೨೬ ರಂದು ವಿಶ್ವ ನಾಯಿ ದಿನವನ್ನು ಆಚರಿಸಲಾಗುತ್ತದೆ. ಅಮೇರಿಕಾದ ಪ್ರಾಣಿ ತಜ್ಞರಾದ ಕೊಲ್ನ್ ಪೈಗೆ ಎಂಬವರು ೨೦೦೪ರಲ್ಲಿ ನಾಯಿಯೊಂದನ್ನು ದತ್ತು ಪಡೆದು ಅದಕ್ಕೆ ಶೆಲ್ಟಿ ಎಂಬ ಹೆಸರನ್ನಿತ್ತು ಸಾಕಿ, ಸಲಹಿದ ಕುರುಹಾಗಿ ಈ ದಿನವನ್ನು ವಿಶ್ವ ನಾಯಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಮನುಷ್ಯ ಹಾಗೂ ನಾಯಿಗಳ ಸಂಬAಧ ಸಹಸ್ರಾರು ವರ್ಷಗಳ ಹಿಂದಿನದ್ದು. ಜಗತ್ತಿನಲ್ಲಿ ಮನುಜ ಮೊದಲು ಸಾಕಿದ ಪ್ರಾಣಿ ಎಂದರೆ ಅದು ನಾಯಿ ಎಂದು ಹೇಳಲಾಗುತ್ತದೆ. ಶಿಲಾಯುಗದ ಅವಧಿಯಲ್ಲೇ ಮಾನವ ನಾಯಿಗಳನ್ನು ಬೇಟೆಗಾಗಿ ಸಲಹುತ್ತಿದ್ದ ಎಂದು ತಿಳಿದು ಬರುತ್ತದೆ. ಬರ ಬರುತ್ತಾ ನಾಯಿ ಮನುಷ್ಯನ ಸಂಗಾತಿಯೇ ಆಗಿಬಿಟ್ಟಿದೆ ಎಂದರೆ ತಪ್ಪಾಗಲಾರದು. ಇತ್ತೀಚೆಗಂತೂ ನಾಯಿ ಸಾಕುವದೇ ಒಂದು ಶೋಕಿಯೂ ಆಗಿಬಿಟ್ಟಿದೆ. ಅದಕ್ಕೆ ತಕ್ಕಂತೆ ವಿವಿಧ ರೀತಿಯ ಚಂದದ ನಾಯಿಗಳ ತಳಿಗಳನ್ನು ಆವಿಷ್ಕಾರ ಮಾಡಲಾಗಿದೆ.

ಕರುಣಾಮಯಿ

ಮಾಂಸಾಹಾರಿಯಾಗಿರುವ ನಾಯಿಗಳನ್ನು ಪ್ರೀತಿಯಿಂದ ಸಾಕಿ ಸಲಹಿದರೆ ಎಲ್ಲ ರೀತಿಯ ಆಹಾರವನ್ನೂ ಸೇವಿಸುತ್ತದೆ. ಉದ್ದ ಮೂತಿ, ಚೂಪಾದ ಕೋರೆ ಹಲ್ಲುಗಳನ್ನು ಹೊಂದಿರುವ ನಾಯಿಗಳಲ್ಲಿ ಕ್ರೂರತನವಿದ್ದರೂ ಅವುಗಳನ್ನು ಮುದ್ದಾಡುತ್ತಾ ಸಾಕಿದರೆ ಅವುಗಳಷ್ಟು ಕರುಣೆಯುಳ್ಳ ಜೀವ ಮತ್ತೊಂದಿಲ್ಲ. ‘ನಾವು ಮನೆಯಿಂದ ಹೊರ ಹೋದರೆ ವಾಪಸ್ ಬರುವವರೆಗೆ ಮನೆಯಲ್ಲಿ ಯಾರು ಕಾಯುತ್ತಿರುತ್ತಾರೋ ಗೊತ್ತಿಲ್ಲ. ಆದರೆ ಪ್ರೀತಿಯಿಂದ ಸಾಕಿದ ನಾಯಿ ವಾಪಸ್ ಬರೊವರೆಗೂ ಕಾಯುತ್ತಲೇ ಇರುತ್ತದೆ. ನಾವು ಮರಣ ಹೊಂದಿ ಬಾರದ ಲೋಕಕ್ಕೆ ಹೋಗಿದ್ದರೂ ಈ ನಾಯಿ ಮಾತ್ರ ಕಾಯುತ್ತಲೇ ಇರುತ್ತದೆ. ಯಾಕಂದ್ರೆ ಅದಕ್ಕೆ ನಾವು ವಾಪಸ್ ಬರಲ್ಲಾಂತ ಗೊತ್ತಿರಲ್ಲ..!’ ಇಂತಹ ಘಟನೆಗಳಿಗೆ ಜಗತ್ತಿನಲ್ಲಿ ಸಾಕಷ್ಟು ಉದಾಹರಣೆಗಳೂ ಇವೆ.

ಭಾವುಕ ಜೀವಿ

ನಾಯಿ ಭಾವುಕ ಜೀವಿಯೂ ಹೌದು., ತನ್ನನ್ನು ಸಲಹುತ್ತಿರುವ ಮಾಲೀಕನಿಗೆ ನೋವಾದರೂ ಈ ಜೀವ ಮರುಗುತ್ತದೆ., ಸ್ವಲ್ಪ ಬೈದರೂ ಸಹಿಸಿಕೊಳ್ಳಲ್ಲ, ಮನದಲ್ಲೇ ಕೊರಗುತ್ತದೆ, ಹುಷಾರಿಲ್ಲದಾದರೆ ಕೊರಗುತ್ತದೆ. ಬೀದಿ ನಾಯಿಗಳೂ ಇದರಿಂದ ಹೊರತಾಗಿಲ್ಲ. ನಿತ್ಯ ಬರುವ, ಮಾತನಾಡಿಸುವವರು ಒಂದು ದಿವಸ ಕಂಡಿಲ್ಲವೆAದರೆ ಅವುಗಳೂ ಭಾವುಕರಾಗಿಬಿಡುತ್ತವೆ. ಮತ್ತೊಂದು ದಿನ ಕಂಡಾಗ ಅವುಗಳು ಪಡುವ ಸಂತಸ ಹೇಳತೀರದು., ಕುಣಿದು ಕುಪ್ಪಳಿಸುತ್ತವೆ.

ಎಚ್ಚರವಿರಬೇಕು

ಮೊದಲೇ ನಾಯಿಗಳು ಕ್ಯಾನಿಸ್ ಲುಪಸ್ ಫ್ಯಾಮಿಲಿಯ ತೋಳ ಜಾತಿಗೆ ಸೇರಿದವು. ಮೊನಚಾದ ಹಲ್ಲುಗಳು., ಬಲಿಷ್ಠ ಸ್ನಾಯುಗಳೊಂದಿಗೆ ಬೇಟೆಯಾಡುವ ಪ್ರಾಣಿ. ಎದುರಾಳಿಗಳನ್ನು ಕಂಡರೆ ಎಗರಿ ಬೀಳುವ ಜಾತಿ. ಹಾಗಾಗಿ ನಾಯಿಗಳ ಬಗ್ಗೆ ಸದಾ ಎಚ್ಚರವಿರಬೇಕು. ಸಾಮಾನ್ಯವಾಗಿ ಮನೆಯಲ್ಲಿ ಸಾಕಿದ ನಾಯಿಗಳು ತಮ್ಮ ಮನೆಯವರನ್ನು ಹೊರತು ಬೇರೆ ಯಾರೇ ಮನೆಗೆ ಬಂದರೂ ಸಹಿಸಲಾರವು. ಕಚ್ಚಿಬಿಡುತ್ತವೆ. ಹಾಗಾಗಿ ನಾಯಿ ಸಾಕಿದವರು ಈ ಬಗ್ಗೆ ಗಮನವಿರಿಸಬೇಕು. ಇನ್ನೂ ಬೀದಿ ನಾಯಿಗಳು ಎಂದರೆ ಎಲ್ಲರಿಗೂ ಒಂದು ರೀತಿಯ ತಾತ್ಸಾರವೇ., ನಾಯಿಗಳು ಅವುಗಳಾಗಿ ಬೀದಿಗೆ ಬರುವದಿಲ್ಲ, ಮನೆಯಲ್ಲಿ ಸಾಕಿದ ನಾಯಿ ಮರಿಗಳನ್ನು ಒಂದೋ ಅದು ಹೆಣ್ಣು ಮರಿ ಅಥವಾ ಅದಕ್ಕೆ ಹುಷಾರಿಲ್ಲದಿದ್ದರೆ ಅದನ್ನು ಸಾಕಿದವರೇ ಬೀದಿಗೆ ಬಿಡುತ್ತಾರೆ.

ಮನೆಯವರ ಪ್ರೀತಿ, ಅನುಕಂಪ ಕಳೆದುಕೊಳ್ಳುವ ಇಂತಹ ನಾಯಿಗಳು ಇತರರನ್ನು ಕಂಡಾಗ ದಾಳಿ ಮಾಡುತ್ತವೆ. ಕೆಲವೊಮ್ಮೆ ಆಹಾರ ಸಿಗದಿದ್ದಾಗ, ಸಂಭೋಗ ಪ್ರಕ್ರಿಯೆಯಲ್ಲಿರುವಾಗ ದಾಳಿ ಮಾಡುತ್ತವೆ. ಇಂತಹ ಸಂದರ್ಭಗಳಲ್ಲಿ ಎಚ್ಚರವಿರಬೇಕಾಗುತ್ತದೆ. ಕೆಲವೊಮ್ಮೆ ಅವುಗಳನ್ನು ಪ್ರೀತಿಯಿಂದ ಮಾತನಾಡಿಸಿದರೆ ಅಥವಾ ಗದರಿಸಿದರೆ ದೂರ ಹೋಗುತ್ತವೆ., ಹೆದರಿ ಓಡಿದರೆ ಅಟ್ಟಾಡಿಸುತ್ತವೆ. ನಾಯಿಗಳಿಗೆ ರೇಬೀಸ್ ಚುಚ್ಚುಮದ್ದು ಹಾಕಿಸುವದಲ್ಲದೆ, ನಾಯಿ ಕಚ್ಚಿದರೆ ನಾವೂ ಕೂಡ ಚುಚ್ಚುಮದ್ದು ಹಾಕಿಸಿಕೊಂಡು ನಮ್ಮ ಎಚ್ಚರದಲ್ಲಿ ನಾವಿರಬೇಕು.

ಕ್ರೀಡೆ-ಸ್ಪರ್ಧೆ

‘ಥೂ ನಾಯಿ..’ ಅಂತ ಆಗಾಗ್ಗೆ ಬಯ್ಯುವದನ್ನು ಸಾಮಾನ್ಯವಾಗಿ ಕಾಣುತ್ತೇವೆ. ಆದರೆ ನಾಯಿಗೂ ಸಮಾಜದಲ್ಲಿ ಗೌರವ, ಬೆಲೆಯೂ ಇದೆ.