ಕೂಡಿಗೆ, ಆ. ೨೪: ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ ಮಾರುಕಟ್ಟೆ ಸಮೀಪದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ರೂ. ೧೦ ಲಕ್ಷ ವೆಚ್ಚದ ಅಕ್ಕಮಹಾದೇವಿ ಮಹಿಳಾ ಸಮಾಜದ ನೂತನ ಕಟ್ಟಡದ ಉದ್ಘಾಟನೆಯನ್ನು ಶಿರಂಗಾಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಸವರಾಜ್ ನೆರವೇರಿಸಿದರು. ಕಾರ್ಯಕ್ರಮ ಅಧ್ಯಕ್ಷತೆಯನ್ನು ಮಹಿಳಾ ಸಮಾಜ ಅಧ್ಯಕ್ಷೆ ಎಸ್.ಕೆ. ಪಾರ್ವತಮ್ಮ ವಹಿಸಿದ್ದರು. ಮಾಜಿ ಶಾಸಕ ಅಪ್ಪಚ್ಚು ರಂಜನ್ ಅವರ ೫ ಲಕ್ಷ ಅನುದಾನ ಸೇರಿದಂತೆ ಗ್ರಾಮದ ದೇವಾಲಯ ಸಮಿತಿಯ, ಸಹಕಾರ ಬ್ಯಾಂಕ್ ಸೇರಿದಂತೆ ವಿವಿಧ ದಾನಿಗಳ ಸಹಕಾರದೊಂದಿಗೆ ರೂ. ೧೦ ಲಕ್ಷ ವೆಚ್ಚದ ಕಟ್ಟಡ ನಿರ್ಮಾಣಗೊಂಡಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಟ್ಟಿಗಮ್ಮ ದೇವಾಲಯ ಸಮಿತಿಯ ಅಧ್ಯಕ್ಷ ಚಂದ್ರಶೇಖರ್, ಕಾರ್ಯದರ್ಶಿ ಗಣೇಶ್, ಕುಶಾಲನಗರ ಎಪಿಎಂಎಸ್‌ನ ನಿರ್ದೇಶಕ ಲೋಕೇಶ್, ಸಹಕಾರ ಸಂಘದ ಕಾರ್ಯದರ್ಶಿ ಜೀವನ್, ಬಸವಣ್ಣಯ್ಯ, ಕಳಿಂಗಪ್ಪ, ಮಹೇಶ್, ಶ್ರೀನಿವಾಸ್, ಪ್ರಸನ್ನ ಸೇರಿದಂತೆ ಗ್ರಾಮದ ಪ್ರಮುಖರು ಹಾಜರಿದ್ದರು. ಮಹಿಳಾ ಸಮಾಜ ಕಾರ್ಯದರ್ಶಿ ಲಲಿತ ವರದಿ ವಾಚನ ಮಂಡಿಸಿದರು. ಮಹಿಳಾ ಸಮಾಜ ನಿರ್ದೇಶಕರಾದ ರತ್ನಮ್ಮ, ಸುಲೋಚನ, ವನಜಾಕ್ಷಿ, ಗೀತಾ, ಜಯಮ್ಮ, ನಾಗಮ್ಮ ಗೌರಮ್ಮ, ಸುವಿತ್ರ ಉಮಾ, ವೀಣಾ, ವೇದ ಲೋಕೇಶ್, ರೇಣುಕಾ, ಪದ್ಮಮ್ಮ ಸೇರಿದಂತೆ ಗ್ರಾಮದ ನೂರಾರು ಮಹಿಳೆಯರು ಭಾಗವಹಿಸಿದ್ದರು.