ಮಡಿಕೇರಿ, ಆ. ೨೪: ಕಾರ್ಯಕರ್ತರಿಲ್ಲದೆ ಹೇಗೆ ರಾಜಕೀಯ ಇಲ್ಲವೊ ಹಾಗೆ ಉತ್ತಮ ಸದಸ್ಯರಿಲ್ಲದೆ ಸೇವಾ ಸಂಸ್ಥೆಗಳನ್ನು ನಡೆಸಿಕೊಂಡು ಹೋಗುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಸೀನಿಯರ್ ಛೇಂಬರ್ ಇಂಟರ್ ನ್ಯಾಷನಲ್ ಸಂಸ್ಥೆಯ ರಾಷ್ಟಿçÃಯ ಅಧ್ಯಕ್ಷ ಪ್ರೊ. ವರ್ಗೀಸ್ ವೈದ್ಯನ್ ಹೇಳಿದರು.
ಇಲ್ಲಿನ ಕುಕೂನ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಅನೇಕ ಯುವಕ - ಯುವತಿಯರು ದುಶ್ಚಟಗಳಿಗೆ ಮಾರು ಹೋಗುತ್ತಿದ್ದಾರೆ. ಇವರುಗಳನ್ನು ಸರಿ ದಾರಿಗೆ ತರಲು ಸೇವಾ ಸಂಸ್ಥೆಗಳು ಮುಖ್ಯ ಭೂಮಿಕೆ ವಹಿಸಬೇಕಾಗಿದೆ. ಆ ನಿಟ್ಟಿನಲ್ಲಿ ಸೇವಾ ಸಂಸ್ಥೆಗಳು ಪ್ರಜ್ಞಾವಂತ ಹಾಗೂ ಸನ್ನಡತೆ ಉಳ್ಳಂತವರನ್ನು ಗುರುತಿಸಿ, ಸದಸ್ಯತ್ವ ಅಭಿಯಾನಕ್ಕೆ ಹೆಚ್ಚು ಮಹತ್ವ ನೀಡುವುದು ಸೂಕ್ತ ಎಂಬ ಅಭಿಪ್ರಾಯ ಹಂಚಿಕೊAಡರು.
ಗೋಣಿಕೊಪ್ಪ ಸಂಸ್ಥೆಯ ಅಧ್ಯಕ್ಷ ಶರತ್ ಮ್ಯಾಥ್ಯೂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಡಿ.ಬಿ. ರವಿ, ಖಜಾಂಚಿ ಅಂಥೊಣಿ, ಮಂಡೇಪAಡ ಸಚಿನ್ ಸಂಸ್ಥೆಯ ಸದಸ್ಯರು ಹಾಜರಿದ್ದರು.