ಸೋಮವಾರಪೇಟೆ, ಆ. ೨೪: ದಾನಿಗಳೇ ಸದಸ್ಯರಾಗಿರುವ ಸೋಮವಾರಪೇಟೆ ಪಟ್ಟಣದ ಶ್ರೀ ಗೌರಿ ಗಣಪತಿ ಸೇವಾ ಸಮಿತಿಯ ಸಭೆ ಇಲ್ಲಿನ ಪತ್ರಿಕಾಭವನದಲ್ಲಿ ನಡೆದು, ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಸಮಿತಿಯ ಅಧ್ಯಕ್ಷರಾಗಿ ದರ್ಶನ್ ಜೋಯಪ್ಪ, ಉಪಾಧ್ಯಕ್ಷರಾಗಿ ಸಾಗರ್, ಕಾರ್ಯದರ್ಶಿಯಾಗಿ ರಘು, ಖಜಾಂಚಿಯಾಗಿ ಚೇತನ್, ಗೌರವಾಧ್ಯಕ್ಷರಾಗಿ ಎಂ.ಬಿ. ಉಮೇಶ್ ಅವರುಗಳನ್ನು ನೇಮಿಸಲಾಯಿತು.

ಸಮಿತಿಯ ಗೌರವ ಸಲಹೆಗಾರರಾಗಿ ಕೆ.ಜಿ. ಸುರೇಶ್, ಸುಭಾಷ್ ತಿಮ್ಮಯ್ಯ, ಚಕ್ರವರ್ತಿ ಸುರೇಶ್, ಸಿ.ಸಿ. ನಂದಕುಮಾರ್, ಸುರೇಶ್ ಶೆಟ್ಟಿ, ಚಂದನ ಸುಬ್ರಮಣಿ, ಕಮಲ್ ಜಯಾನಂದ್, ರಂಗಸ್ವಾಮಿ, ಬಿ.ಆರ್. ಮಹೇಶ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ಇಲ್ಲಿನ ಖಾಸಗಿ ಬಸ್ ನಿಲ್ದಾಣದಲ್ಲಿ ಪೆಂಡಾಲ್ ಅಳವಡಿಸಿ, ಪ್ರಸಕ್ತ ಸಾಲಿನ ಗೌರಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.