ಮಡಿಕೇರಿ, ಆ. ೨೪: ಕೊಡವ ಕೂಟಾಳಿಯಡ ಕೂಟದ ಮಾಸಭೆ ಹಾಗೂ ಆಡಳಿತ ಮಂಡಳಿಯ ಚುನಾವಣೆ ನಾಪೋಕ್ಲುವಿನ ಪುನಶ್ಚೇತನ ಚೇತನ ಚಾರಿಟೇಬಲ್ ಟ್ರಸ್ಟ್ ಸಭಾಂಗಣದಲ್ಲಿ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಿಮ್ಮಚಿರ ಪವಿತ ರಜನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ನೂತನ ಅಧ್ಯಕ್ಷರಾಗಿ ಚಂಗುಲAಡ ಸೂರಜ್, ಕಾರ್ಯದರ್ಶಿಯಾಗಿ ಚೆಟ್ಟೋಳಿರ ಶರತ್ ಸೋಮಣ್ಣ, ಉಪಾಧ್ಯಕ್ಷ ಕಾಂಗಿರ ಸಂತೋಷ್ ದೇವಯ್ಯ, ಸಹ ಕಾರ್ಯದರ್ಶಿ ನೂರೆರ ಸರಿತ ಅರುಣ್, ಖಜಾಂಚಿ ಕಬ್ಬಚ್ಚಿರ ರಶ್ಮಿ ಕಾರ್ಯಪ್ಪ ನಿರ್ದೇಶಕರಾಗಿ ಬಾಳೆಯಡ ದಿವ್ಯ ಮಂದಪ್ಪ, ಅಮ್ಮಾಟಂಡ ಚೇತನ್, ಕರ್ತುರ ರನ್ನು ಪೆಮ್ಮಯ್ಯ, ಕಾಳಮಂಡ ರಾಬಿನ್, ಬೊಜ್ಜಂಗಡ ಚೆಂಗಪ್ಪ ಅವರುಗಳು ನೇಮಕಗೊಂಡರು.

ಕಾರ್ಯಕ್ರಮದಲ್ಲಿ ಸಂಘಟನೆಯ ಗೌರವ ಸಲಹೆಗಾರರಾದ ಚೊಟ್ಟಂಡ ಪ್ರಭು ಸೋಮಯ್ಯ , ಸದಸ್ಯರಾದ ಕೊಟ್ಟಂಗಡ ಕವಿತ ವಾಸುದೇವ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭ ಪುನಶ್ಚೇತನ ಚಾರಿಟೇಬಲ್ ಟ್ರಸ್ಟ್ನ ವಿಶೇಷ ಮಕ್ಕಳಿಗೆ ಕೂಟದ ವತಿಯಿಂದ ಉಡುಗೊರೆ ನೀಡಲಾಯಿತು.