*ಸಿದ್ದಾಪುರ, ಆ. ೨೪: ಅಭ್ಯತ್‌ಮಂಗಲ ಸರ್ಕಾರಿ ಶಾಲೆಯ ಆವರಣದಲ್ಲಿ ಅಳವಡಿಸಲಾಗಿರುವ ಹುತಾತ್ಮ ಯೋಧರ ಸ್ಮಾರಕ ಫಲಕವನ್ನು ಗ್ರಾ.ಪಂ ಪ್ರತಿನಿಧಿಗಳು ಉದ್ಘಾಟಿಸಿದರು.

ಪಂಚಾಯಿತಿ ಅಧ್ಯಕ್ಷೆ ಮಂಜುಳ, ಕಾರ್ಯದರ್ಶಿ ರವಿ, ಅಭಿವೃದ್ಧಿ ಅಧಿಕಾರಿ ಲೋಕೇಶ್, ಮಾಜಿ ಅಧ್ಯಕ್ಷ ಅಂಚೆಮನೆ ಸುಧಿ ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿ ಯೋಧರಿಗೆ ಗೌರವ ಸಲ್ಲಿಸಿದರು.