ಚೆಟ್ಟಳ್ಳಿ, ಆ. ೨೪: ಕೊಡಗಿನ ಸಾಂಪ್ರದಾಯಿಕ ಕೈಲ್ ಪೊಳ್ದ್ ಹಬ್ಬ ವನ್ನು ಸೂರ್ಲಬ್ಬಿ ನಾಡಿನಲ್ಲಿ ಅಲ್ಲಿನ ಪದ್ಧತಿಯಂತೆ ಆಚರಿಸಲಾಯಿತು.
ಕೊಡವ ಕ್ಯಾಲೆಂಡರ್ ನ ಪ್ರಕಾರ ಆಗಸ್ಟ್ ತಿಂಗಳಲ್ಲಿ ಬರುವ ಚಿನ್ಯಾರ್ನ ಮೊದಲ ಮಂಗಳವಾರದAದು ವರ್ಷಂಪ್ರತಿ ಹಬ್ಬ ನಡೆಯುವುದು ವಾಡಿಕೆ. ಅದರ ಹಿಂದಿನ ಮಂಗಳ ವಾರ ನಾಡಿನ ತಕ್ಕಮುಕ್ಕಾಟಿಗಳೆಲ್ಲ ಸೇರಿ ಕಕ್ಕಡ ತಿಂಗಳಲ್ಲಿ ನಿಂತಿದ್ದ ನಿತ್ಯಪೂಜೆಯನ್ನು ಮಾಡಿದರು. ನಂತರ ಕೈಲ್ ಪೊಳ್ದ್ ಕಟ್ಟೆಯಲ್ಲಿ ಕುಳಿತು ಕಣಿಯರು ಕವಡಿಹಾಕಿ ಪ್ರತೀ ಕೇರಿಗೆ ಇಬ್ಬರಂತೆ ಪೊಳ್ದ್ದಾರರನ್ನು ಸೂಚಿಸಿ ಅದೇ ದಿನ ಮುಂದಿನ ವಾರ್ಷಿಕ ಯಾಕ ಪೊಳ್ದ್ ಮಾಡು ವುದು ನಾಡಿನ ಇತರೆ ಸಂಪ್ರದಾ ಯಗಳನ್ನು ಆಚರಿಸುವವರನ್ನು ನಿರ್ಧರಿಸಲಾಯಿತು.
ನಂತರ ಹಬ್ಬದ ದಿನದ ಸೋಮ ವಾರ ರಾತ್ರಿ ಈರ್ವ ಪೊಳ್ದ್ದಾರರು ಮಂದ್ನ ಚಿತ್ತಾಲ್ ಮರಕ್ಕೆ ಹೂಮಾಲೆ ಕಟ್ಟಿ ಬಂದು ಹಬ್ಬದ ಭೋಜನ ಸವಿದು ಮನೆಯ ನೆಲ್ಲಕ್ಕಿ ನಡುಬಾಡೆಯಲ್ಲಿ ಚಾಪೆಯಲ್ಲಿ ಮಲಗುವರು. ಮುಂಜಾನೆ ಎದ್ದು ಯಾರನ್ನು ಮಾತನಾಡಿಸದೆ ಮೌನವಾಗಿ ಸ್ನಾನ ಮುಗಿಸಿ ಕುಪ್ಯಚಾಲೆ ಧರಿಸಿ ಅಂಬುಬಿಲ್ಲು, ತೊಡಂಗ್, ಒಡಿಕತ್ತಿಯಾಗಿ ಮಂದ್ ಗೆ ತೆರಳಿ ಇಬ್ಬರು ಏಕಕಾಲದಲ್ಲಿ ಹೂಮಾಲೆ ಹಾಕಿದ ಚಿತ್ತಾಲ್ ಮರಕ್ಕೆ ಅಂಬು ಬಿಟ್ಟು ಕಿರಿಯರು ಹಿರಿಯರ ಕಾಲುಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆವರು. ನಾಡಿನ ತಲೆದೇವರಾದ ಸುಬ್ರಾಯ ದೇವಾಲ ಯಕ್ಕೆ ೫ ಕೇರಿಯ ಪೊಳ್ದ್ದಾರರು ತೆರಳಿ ಅಂಬುಬಿಲ್ಲು ಒಡಿಕತ್ತಿಯನ್ನು ದೇವನೆಲೆಯಲ್ಲಿಟ್ಟು ಮಹಾಪೂಜೆ ಮಾಡಿದರು. ತಮ್ಮ ಮನೆಗಳಿಗೆ ತೆರಳಿ ಹಿರಿಯರಿದ್ದರೂ ಪೊಳ್ದ್ದಾರ ಆಯುಧ ಪೂಜೆ ಬಲಿಪೂಜೆಯನ್ನು ಮಾಡಿ ಪೊಳ್ಧ್ದಾರ ತೆಂಗಿನ ಕಾಯಿಗೆ ಗುಂಡುಹೊಡೆದ ನಂತರ ಇತರೆ ಮನೆಯವರು ಗುಂಡು ಹೊಡೆಯು ವರು. ಊಟೊಪಚಾರದ ನಂತರ ಕುಟುಂಬಸ್ಥರೆಲ್ಲ ಪೊಳ್ದ್ದಾರನ ಮನೆಗೆ ತೆರಳಿ ಊರ್ಮಂದ್ಗೆ ಕರೆದೊಯ್ದರು. ತೆಂಗಿನಕಾಯಿಗೆ ಗುಂಡು ಹೊಡೆದು ತಗುಲಿಸಿದವನಿಗೆ ವಿಳ್ಯದೆಲೆ ನೀಡಿ ಗೌರವಿಸಿದರು. ನಂತರ ಪೊಳ್ದ್ದಾರರು ಅಂಬುಬಿಟ್ಟ ಚಿತ್ತಾರ ಮರದ ಸುತ್ತ ಮೂರುಸುತ್ತು ದೇವರನ್ನು ನೆನೆದು ಇನ್ನೊಂದು ಅಂಬನ್ನು ಕಾಡಿನ ಕಡೆಬಿಟ್ಟು ಮರ ದಲ್ಲಿ ಬಿಟ್ಟ ಅಂಬನ್ನು ಎಳೆಯುವ ಮೂಲಕ ಈ ಬಾರಿಯ ಸೂರ್ಲಬ್ಬಿ ನಾಡಿನ ಕೈಲ್ ಪೊಳ್ದ್ ಕೊನೆಗೊಳಿಸಲಾಯಿತು.
- ಪುತ್ತರಿರ ಕರುಣ್ ಕಾಳಯ್ಯ