*ಗೋಣಿಕೊಪ್ಪ, ಆ. ೨೪: ಪೊನ್ನಂಪೇಟೆ ವಲಯ ಮಟ್ಟದ ಕ್ರೀಡಾಕೂಟಕ್ಕೆ ಸಂತ ಅಂತೋಣಿ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ತಾಲೂಕು ಸಂಪನ್ಮೂಲ ವ್ಯಕ್ತಿ ವನಜಾಕ್ಷಿ ಕ್ರೀಡಾ ಜ್ಯೋತಿ ಬೆಳಗಿಸಿದರು. ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಡ್ಯಾನಿ, ವಲಯ ಸಂಪನ್ಮೂಲ ವ್ಯಕ್ತಿ ಜೀವನ್, ಸಂತ ಅಂತೋಣಿ ವಿದ್ಯಾಸಂಸ್ಥೆಯ ಸಂಚಾಲಕ ಫಾ. ಡೆವಿಡ್ ಸಗಾಯರಾಜ್, ಪ್ರಾಂಶುಪಾಲ ಶಂಭು ಕಾರ್ಯಪ್ಪ, ಮುಖ್ಯ ಶಿಕ್ಷಕಿ ರಜನಿ ಇದ್ದರು. ಪೊನ್ನಂಪೇಟೆ ವಲಯದ ೧೩ ತಂಡಗಳು ಥ್ರೋಬಾಲ್ ಮತ್ತು ಬಾಲ್ ಬ್ಯಾಡ್ಮಿಂಟನ್ಗಳಲ್ಲಿ ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ವಿವಿಧ ಶಾಲೆಯ ದೈಹಿಕ ಶಿಕ್ಷಕರು, ಕ್ರೀಡಾಪಟುಗಳು ಹಾಜರಿದ್ದರು.