ಸೋಮವಾರಪೇಟೆ, ಆ. ೨೪: ಸೋಮವಾರಪೇಟೆ ಕಸಬಾ ಹೋಬಳಿ ಸೇರಿದಂತೆ ತಾಲೂಕಿನ ಇತರ ಹೋಬಳಿಗಳಲ್ಲಿ ಮಳೆ ದೂರವಾಗಿದೆ. ಮಳೆಗಾಲದ ವಾತಾ ವರಣ ದೂರವಾಗಿ ಬಿರುಬೇಸಿಗೆಯ ವಾತಾವರಣ ಉಂಟಾಗಿದೆ. ಜಲಮೂಲಗಳಲ್ಲಿ ನೀರಿನ ಪ್ರಮಾಣ ಇಳಿಕೆಯಾಗುತ್ತಿದ್ದು, ಬರಗಾಲದ ಛಾಯೆ ಕಂಡುಬರುತ್ತಿದೆ. ವಾಡಿಕೆ ಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದ್ದು, ಎಲ್ಲಿಯೂ ಜಲದ ಒರತೆ ಕಂಡುಬAದಿಲ್ಲ.

ಈ ನಡುವೆ ಕಳೆದ ಸಾಲಿಗೆ ಹೋಲಿಸಿದರೆ ಈವರೆಗೆ ಸೋಮ ವಾರಪೇಟೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ೪೦ ಇಂಚು ಮಳೆ ಕಡಿಮೆಯಾಗಿದೆ. ಕಳೆದ ವರ್ಷ ಜನವರಿಯಿಂದ ಈ ದಿನದವರೆಗೆ ೯೧.೪ ಇಂಚು ಮಳೆಯಾಗಿದ್ದರೆ, ಪ್ರಸಕ್ತ ಸಾಲಿನಲ್ಲಿ ೫೧.೬೮ ಇಂಚು ಮಳೆಯಾ ಗಿದೆ. ಇದರಲ್ಲಿ ಜುಲೈ ತಿಂಗಳೊA ದಲ್ಲಿಯೇ ೪೦.೯೦ ಇಂಚು ಮಳೆ ಸುರಿದಿದೆ. ಕಳೆದ ವರ್ಷ ವಾರ್ಷಿಕ ೧೦೬.೪೮ ಇಂಚು ಮಳೆಯಾಗಿತ್ತು.

ಕಳೆದ ವರ್ಷ ಆಗಸ್ಟ್ ೨೪ರ ನಂತರದಿAದ ಡಿಸೆಂಬರ್ ಅಂತ್ಯದ ವರೆಗೆ ೧೫ ಇಂಚು ಮಳೆಯಾಗಿತ್ತು. ಒಟ್ಟಾರೆ ಮಳೆಯ ಪ್ರಮಾಣ ೧೦೬.೪೮ ಇಂಚು ದಾಖಲಾಗಿತ್ತು. ಈ ವರ್ಷ ಅದರ ಅರ್ಧದಷ್ಟು ಮಳೆಯಾಗದಿ ರುವುದು ಆತಂಕ ಸೃಷ್ಟಿಸಿದೆ. ಸಾಧಾ ರಣವಾಗಿ ಜೂನ್, ಜುಲೈ ತಿಂಗಳಿನಲ್ಲಿ ಧಾರಾಕಾರ ಮಳೆಯಾಗಿ ಆಗಸ್ಟ್ ತಿಂಗಳಿನಲ್ಲಿ ಎಲ್ಲೆಲ್ಲೂ ಜಲದ ಒರತೆಗಳು ಕಂಡುಬರುತ್ತಿದ್ದವು. ಆದರೆ ಈ ವರ್ಷ ಎಲ್ಲಿಯೂ ಜಲದ ಒರತೆ ಕಂಡುಬAದಿಲ್ಲ. ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲೂ ಜಲದ ಒರತೆ ಮಾಯವಾಗಿರುವುದು ಹವಾಮಾನ ದೊಂದಿಗೆ ಕೃಷಿ ಕ್ಷೇತ್ರದ ಮೇಲೂ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯನ್ನು ದಟ್ಟವಾಗಿಸಿದೆ.

ತಾಲೂಕಿನ ಶನಿವಾರಸಂತೆ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೩೮.೪೩ ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಗೆ ೬೯.೭೯ ಇಂಚು ಮಳೆಯಾಗಿತ್ತು. ಕಳೆದ ವರ್ಷ ಒಟ್ಟಾರೆ ೮೯.೪೪ ಇಂಚು ಸುರಿದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ೩೧.೩೬ ಇಂಚು ಕಡಿಮೆ ಮಳೆಯಾಗಿದೆ.

ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೩೪.೮೦ ಇಂಚು ಮಳೆಯಾಗಿದೆ. ಕಳೆದ ವರ್ಷ ೭೪.೮೬ ಇಂಚು ಮಳೆಯಾಗಿತ್ತು. ೨೦೨೨ರ ಸಾಲಿನಲ್ಲಿ ಒಟ್ಟಾರೆ ೯೩.೫೧ ಇಂಚು ಮಳೆಯಾಗಿತ್ತು. ಈ ವರ್ಷ ಇಲ್ಲಿಯವರೆಗೆ ೪೦ ಇಂಚು ಕಡಿಮೆ ಮಳೆಯಾಗಿದೆ.

ಶಾಂತಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೯೨.೫೪ ಇಂಚು ಮಳೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ ೧೭೬.೨೯ ಇಂಚು ಮಳೆಯಾಗಿತ್ತು. ೨೦೨೨ರಲ್ಲಿ ಒಟ್ಟಾರೆ ೨೧೧.೦೧ ಇಂಚು ಮಳೆ ಸುರಿದಿತ್ತು. ಈ ವರ್ಷ ಇಲ್ಲಿಯವರೆಗೆ ಸುರಿದ ಮಳೆಯ ಪ್ರಮಾಣದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ೮೩.೭೫ ಇಂಚು ಕಡಿಮೆ ಮಳೆಯಾಗಿದೆ.

ಇನ್ನು ಅತೀ ಹೆಚ್ಚು ಮಳೆ ಯಾಗುವ ಸೂರ್ಲಬ್ಬಿ ವ್ಯಾಪ್ತಿಯಲ್ಲೂ ಈ ಬಾರಿ ಮಳೆ ಇಲ್ಲದಾಗಿದೆ. ಇಲ್ಲಿ ಅಳವಡಿಸಿರುವ ಮಳೆ ಮಾಪಕದ ಅನ್ವಯ ಈವರೆಗೆ ೨೧೨.೨೧ ಇಂಚು ಮಳೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ ೨೬೬.೪೨ ಇಂಚು ಮಳೆಯಾಗಿತ್ತು. ೨೦೨೨ರಲ್ಲಿ ಒಟ್ಟು ೨೯೩.೯೩ ಇಂಚು ಮಳೆಯಾಗಿತ್ತು. ಕಳೆದ ವರ್ಷ ಸುರಿದ ಮಳೆಗೆ ಹೋಲಿಸಿದರೆ ಈ ವರ್ಷ ಇಲ್ಲಿಯ ವರೆಗೆ ಸುರಿದ ಮಳೆಯಲ್ಲಿ ೫೪.೨೧ ಇಂಚು ಕಡಿಮೆಯಾಗಿದೆ. ಜುಲೈ ತಿಂಗಳೊAದಲ್ಲಿಯೇ ಸೂರ್ಲಬ್ಬಿ ವ್ಯಾಪ್ತಿಯಲ್ಲಿ ೧೫೫.೪೯ ಇಂಚು ಮಳೆ ಯಾಗಿದೆ. ಜುಲೈ ೨೩ರಂದು ೧೩ ಇಂಚು, ೨೪ರಂದು ೧೫ ಇಂಚು, ೨೫ರಂದು ೧೨.೮೮ ಇಂಚು ದಾಖಲೆಯ ಮಳೆ ಸುರಿದಿದೆ.

ಮಾದಾಪುರ ವ್ಯಾಪ್ತಿಯಲ್ಲಿ ಈವರೆಗೆ ೫೯.೪ ಇಂಚು ಮಳೆ ಸುರಿದಿದೆ. ಕಳೆದ ವರ್ಷ ೭೨.೧೮ ಇಂಚು ಮಳೆಯಾಗಿತ್ತು. ೨೦೨೨ರಲ್ಲಿ ಒಟ್ಟಾರೆ ೮೯.೫೫ ಇಂಚು ಮಳೆ ಸುರಿದಿತ್ತು.

ಇನ್ನು ಕುಶಾಲನಗರ ತಾಲೂಕಿಗೆ ಒಳಪಟ್ಟಿರುವ ಹೋಬಳಿಗಳಲ್ಲೂ ಮಳೆಯ ಪ್ರಮಾಣದಲ್ಲಿ ಇಳಕೆ ಯಾಗಿದೆ. ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೩೯.೪೬ ಇಂಚು ಮಳೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ ೬೨.೧೪ ಇಂಚು ಮಳೆಯಾಗಿತ್ತು. ಈ ವರ್ಷ ೨೨.೬೮ ಇಂಚು ಮಳೆ ಕಡಿಮೆಯಾಗಿದೆ. ೨೦೨೨ರಲ್ಲಿ ಒಟ್ಟಾರೆಯಾಗಿ ೭೬ ಇಂಚು ಮಳೆಯಾಗಿತ್ತು.

ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಈವರೆಗೆ ೨೪.೬೮ ಇಂಚು ಮಳೆಯಾಗಿದೆ. ಕಳೆದ ವರ್ಷ ಇಲ್ಲಿಯವರೆಗೆ ೪೨.೬೪ ಇಂಚು ಮಳೆಯಾಗಿತ್ತು. ೨೦೨೨ರಲ್ಲಿ ಒಟ್ಟಾರೆಯಾಗಿ ೫೦.೯೨ ಇಂಚು ಮಳೆ ಸುರಿದಿತ್ತು.

ಈ ವರ್ಷ ಬಹುತೇಕ ಕಡೆಗಳಲ್ಲಿ ವಾಡಿಕೆಗಿಂತಲೂ ಕಡಿಮೆ ಮಳೆಯಾಗಿದೆ. ಇದು ಕೃಷಿ ಕಾರ್ಯಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಭತ್ತವನ್ನು ಅತೀ ಹೆಚ್ಚು ಬೆಳೆಯುವ ಸೋಮವಾರಪೇಟೆ ತಾಲೂಕಿನಲ್ಲಿ ಈ ಬಾರಿ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿದೆ. ನೀರಾವರಿ ಸೌಕರ್ಯ ಇಲ್ಲದೇ ಮಳೆಯನ್ನೇ ನಂಬಿ ಕೃಷಿ ಕೈಗೊಂಡಿರುವವರು ಆಗಸದತ್ತ ಚಿತ್ತ ಹರಿಸಿದ್ದಾರೆ.

ಕಳೆದ ೨೦ ದಿನಗಳಿಂದ ನಿರೀಕ್ಷಿತ ಮಳೆ ಸುರಿದಿತ್ತ. ಬೇಸಿಗೆ ವಾತಾವರಣ ವಿದ್ದು, ಗದ್ದೆಗಳಲ್ಲಿ ನಿಲ್ಲಿಸಿರುವ ನೀರು ಕಡಿಮೆಯಾದರೆ ಭತ್ತದ ಪೈರಿನ ಬೆಳವಣಿಗೆಗೆ ತೊಡಕಾಗಲಿದೆ. ನೀರಿನ ಸೌಕರ್ಯ ಇರುವವರು ಪೈರು ಉಳಿಸಿಕೊಳ್ಳಬಹುದು, ಮಳೆಯನ್ನೇ ನಂಬಿರುವವರು ಕೃಷಿಯಲ್ಲಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಶಾಂತಳ್ಳಿ-ಗುಡ್ಡಳ್ಳಿಯ ಕೃಷಿಕ ಸಜನ್ ಮಂದಣ್ಣ ಅಭಿಪ್ರಾಯಿಸಿದ್ದಾರೆ.

ಸೋಮವಾರಪೇಟೆ ತಾಲೂಕಿನಲ್ಲಿ ೧೦ ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯುವ ಗುರಿ ಹೊಂದಲಾಗಿದ್ದು, ಉತ್ತಮ ಮಳೆಯಾಗಿದ್ದರೆ ಈವರೆಗೆ ೯,೫೦೦ ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಪೂರ್ಣಗೊಳ್ಳುತ್ತಿತ್ತು.

ಆದರೆ ಪ್ರಸಕ್ತ ವರ್ಷ ಮಳೆ ದೂರವಾದ ಹಿನ್ನೆಲೆ ೭,೫೦೦ ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಪೂರ್ಣಗೊಂಡಿದ್ದು, ಮುಂದಿನ ೧೫ ದಿನಗಳಲ್ಲಿ ಉತ್ತಮ ಮಳೆಯಾದರೆ ಇನ್ನೂ ೧ ಸಾವಿರ ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ಮಾಡಬಹುದಾಗಿದೆ.

ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ ಕೃಷಿಗೆ ಸದ್ಯದ ಮಟ್ಟಿಗೆ ಆತಂಕ ಇಲ್ಲ. ಹಾರಂಗಿ ಜಲಾಶಯ ದಿಂದ ನಾಲೆಗಳಿಗೆ ನೀರು ಹರಿಬಿಡಲಾ ಗಿದ್ದು, ಸುಮಾರು ೧೮೫೦ ಹೆಕ್ಟೇರ್‌ನಲ್ಲಿ ಭತ್ತ ಕೃಷಿಗೆ ನೀರಿನ ಸೌಲಭ್ಯ ಒದಗ ಲಿದೆ. ಅಂತೆಯೇ ೨೦೦ ಹೆಕ್ಟೇರ್‌ನಲ್ಲಿ ಮುಸುಕಿನ ಜೋಳ ಬೆಳೆಯಲಾಗು ತ್ತಿದ್ದು, ಸದ್ಯದ ಮಟ್ಟಿಗೆ ಸಮಸ್ಯೆಯಿಲ್ಲ. ಆದರೆ ಮುಂದಿನ ೧ ತಿಂಗಳೊಳಗೆ ಮಳೆಯಾದರೆ ಮಾತ್ರ ಫಸಲು ಉಳಿಸಿ ಕೊಳ್ಳಲು ಸಾಧ್ಯವಾಗಲಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಾದವ್ ಬಾಬು ತಿಳಿಸಿದ್ದಾರೆ.

ಹಾರಂಗಿ ಜಲಾನಯನ ಪ್ರದೇಶವನ್ನು ಹೊರತುಪಡಿಸಿದರೆ ಉಳಿದ ಭಾಗಗಳಲ್ಲಿ ಮಳೆಯಾಶ್ರಿತ ಕೃಷಿಯನ್ನೇ ನಂಬಿಕೊAಡಿದ್ದು, ಈ ಬಾರಿ ಮಳೆ ಕೈಕೊಟ್ಟಿರುವುದರಿಂದ ನಾಟಿ ಮಾಡಿರುವ ರೈತರು ಹೆಚ್ಚಿನ ಆತಂಕಕ್ಕೆ ಒಳಗಾಗಿದ್ದಾರೆ. ಮುಂದಿನ ೧೫ ದಿನಗಳ ಒಳಗೆ ಮಳೆಯಾಗದಿದ್ದರೆ ಗದ್ದೆಯಲ್ಲಿಯೇ ನಾಟಿ ಮಾಡಿರುವ ಪೈರು ಒಣಗಲಿದೆ.

ಹೊಳೆ, ಕೆರೆ, ಬೋರ್‌ವೆಲ್‌ಗಳ ಸೌಕರ್ಯ ಹೊಂದಿರುವವರು ಈಗಾಗಲೇ ಗದ್ದೆಗಳಿಗೆ ನೀರು ಹಾಯಿ ಸಲು ವ್ಯವಸ್ಥೆ ಮಾಡಿಕೊಳ್ಳುತ್ತಿದ್ದಾರೆ. ಮಳೆಯನ್ನೇ ನಂಬಿಕೊAಡು ನಾಟಿ ಮಾಡಿರುವ ಕೃಷಿಕರು ಆಗಸದತ್ತ ಮುಖ ಮಾಡುವಂತಾಗಿದೆ ಎಂದು ಹರಗದ ಗ್ರಾಮದ ಕೃಷಿಕ ಶರಣ್ ಗೌಡ ಅಭಿಪ್ರಾಯಿಸಿದ್ದಾರೆ.

ಇನ್ನು ಕಾಫಿ ಕೃಷಿಯ ಮೇಲೂ ಮಳೆಯ ಅಭಾವ ಪರಿಣಾಮ ಬೀರಿದೆ. ಕಾಫಿ ಗಿಡಗಳಲ್ಲಿ ಫಸಲು ತುಂಬಿದ್ದು, ಬೋರರ್‌ಗಳ ಹಾವಳಿ ಹೆಚ್ಚಾಗಿದೆ. ಮಳೆಯಿದ್ದರೆ ಬೋರರ್ ಹುಳುಗಳು ಹೆಚ್ಚಿನ ಕಾಟ ನೀಡುತ್ತಿರಲಿಲ್ಲ. ಇದೀಗ ಬೇಸಿಗೆಯ ವಾತಾವರಣ ಇರುವುದ ರಿಂದ ಕಾಫಿ ತೋಟಗಳಲ್ಲಿ ಬೋರರ್ ಹಾವಳಿ ಹೆಚ್ಚಾಗುತ್ತಿದೆ.

ಮಳೆ ಬಿದ್ದ ಸಂದರ್ಭ ಯೂರಿಯಾ ಗೊಬ್ಬರಗಳನ್ನು ಹಾಕಿದ್ದರಿಂದ ಗಿಡಗಳಲ್ಲಿ ಉತ್ತಮ ಚಿಗುರು ಬಂದಿದೆ. ಆದರೆ ಮಳೆಯೇ ಮಾಯವಾಗಿರು ವುದರಿಂದ ಬೋರರ್ ಹಾವಳಿ ಹೆಚ್ಚಾಗಲು ಕಾರಣವಾಗಿದೆ ಎಂದು ಕೂತಿ ಗ್ರಾಮದ ಲಕ್ಷಿö್ಮÃಕಾಂತ್ ಆತಂಕ ವ್ಯಕ್ತಪಡಿಸಿದ್ದಾರೆ.

ಜುಲೈ ತಿಂಗಳ ಮಧ್ಯಮ ಭಾಗ ದಲ್ಲಿ ಸುರಿದ ಉತ್ತಮ ಮಳೆಯಿಂದ ಹೊಳೆ, ನದಿ, ತೋಡುಗಳಲ್ಲಿ ನೀರಿನ ಹರಿವು ಹೆಚ್ಚಿತ್ತು. ಕೆರೆಗಳಲ್ಲೂ ನೀರಿನ ಸಂಗ್ರಹ ಯತೇಚ್ಛವಾಗಿತ್ತು. ಇದೀಗ ಮಳೆ ದೂರಾದ ಹಿನ್ನೆಲೆ ಸಣ್ಣಪುಟ್ಟ ನದಿ ತೊರೆ, ಹೊಳೆಗಳಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ಹೀಗೆಯೇ ಮುಂದುವರೆದರೆ ಮುಂದಿನ ೧೫ ದಿನಗಳಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಳ್ಳುವ ಆತಂಕವೂ ಎದುರಾಗಿದೆ.

ಸಮೀಕ್ಷೆಯಲ್ಲಿ ನಷ್ಟದ ಅಂದಾಜು: ಜುಲೈ ತಿಂಗಳಿನಲ್ಲಿ ಸುರಿದ ಮಳೆ ಯಿಂದ ಕಾಫಿ, ಕರಿಮೆಣಸು, ಭತ್ತದ ಪೈರು ನಷ್ಟದ ಬಗ್ಗೆ ಕೃಷಿ, ತೋಟ ಗಾರಿಕೆ, ಕಂದಾಯ, ಕಾಫಿ ಮಂಡ ಳಿಯ ಅಧಿಕಾರಿಗಳು ಜಂಟಿ ಸರ್ವೆ ನಡೆಸಿದ್ದು, ಇದರಲ್ಲಿ ಫಸಲು ನಷ್ಟದ ಪ್ರಮಾಣ ಕಡಿಮೆಯಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಯಾವುದೇ ಪರಿಹಾರಕ್ಕೆ ಶೇ.೩೩ರಷ್ಟು ನಷ್ಟದ ಮಾನದಂಡವಿದೆ.

ಬರಗಾಲದ ಛಾಯೆ: ವಾಡಿಕೆ ಗಿಂತಲೂ ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕಳೆದ ವರ್ಷ ಸುರಿದ ಶೇ.೫೦ರಷ್ಟು ಮಳೆಯೂ ಆಗಿಲ್ಲ. ಸೋಮವಾರ ಪೇಟೆ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಿ, ಪರಿಹಾರ ಒದಗಿಸಬೇಕು. ಪ್ರಸ್ತುತ ಕೈಗೊಂಡಿ ರುವ ಕೃಷಿಯನ್ನು ಉಳಿಸಿಕೊಳ್ಳಲು ರೈತರಿಗೆ ಸರ್ಕಾರ ನೆರವು ನೀಡಬೇ ಕೆಂದು ಕಾಫಿ ಬೆಳೆಗಾರರ ಹೋರಾಟ ಸಮಿತಿ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಯಡೂರಿನ ಕೃಷಿಕ ದರ್ಶನ್, ದೊಡ್ಡ ಮನೆಕೊಪ್ಪದ ಬಬಿತ್ ಗೌಡ, ತೋಳೂರು ಶೆಟ್ಟ ಳ್ಳಿಯ ಕೆ.ಕೆ. ಸುಧಾ ಕರ್ ಸೇರಿದಂತೆ ಇತರರು ಒತ್ತಾ ಯಿಸಿದ್ದಾರೆ.

- ವಿಜಯ್ ಹಾನಗಲ್