ಸುಂಟಿಕೊಪ್ಪ, ಆ. ೨೪: ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ಪಿ.ಆರ್. ಸುನಿಲ್ ಕುಮಾರ್ ಅವರನ್ನು ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್ಶಾಪ್ ಮಾಲೀಕರ ಹಾಗೂ ಕಾರ್ಮಿಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಸುಂಟಿಕೊಪ್ಪ ಮೋಟಾರ್ ವಾಹನ ವರ್ಕ್ಶಾಪ್ ಸಂಘದ ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಅವರನ್ನು ಸುಂಟಿಕೊಪ್ಪ ವರ್ಕ್ಶಾಪ್ ಮಾಲೀಕ ಸಂಘದ ಗೌರವಾಧ್ಯಕ್ಷರುಗಳಾದ ವಿ.ಎ. ಸಂತೋಷ್, ವಿನೋದ್, ಪಿ.ಆರ್. ಸುಕುಮಾರ್ ಅವರುಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಅವರನ್ನು ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಘದ ಅಧ್ಯಕ್ಷ ಕಳೆದ ೨೫ ವರ್ಷಗಳ ಹಿಂದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಮೊದಲ ಪ್ರೇರಣೆಯಾಗಿದ್ದು ವರ್ಕ್ಶಾಪ್ ಮಾಲೀಕರ ಸಂಘ ಎಂದರು. ಪಕ್ಷದಲ್ಲಿ ಅಧ್ಯಕ್ಷ ಸೇರಿದಂತೆ ಆನೇಕ ಹುದ್ದೆಗಳನ್ನು ನಿರ್ವಹಿಸಿದ್ದ ನನಗೆ ಊರಿನ ಅಧ್ಯಕ್ಷ ಪದವಿ ದೊರೆಯಲು ಈ ಸಂಘವೇ ಕಾರಣವಾಗಿದೆ ಎಂದರು.

ಸಮಾರಂಭದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಸಹಕಾರ್ಯದರ್ಶಿ ಜಿಬಿನ್, ಬಿ.ಎಸ್. ರಮೇಶ್, ತಂಗವೇಲು, ಜೇಸುದಾಸ್, ಪಿಲಿಪ್, ಸುರೇಶ್, ಹೂವೇಗೌಡ, ಕಿರಣ್, ಸತೀಶ ಮತ್ತಿತರರು ಇದ್ದರು. ಸುಂಟಿಕೊಪ್ಪ, ಆ. ೨೪: ಗದ್ದೆಹಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್. ಸುನಿಲ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಪಿ.ಆರ್. ಸುನಿಲ್ ಕುಮಾರ್ ಆಯ್ಕೆಯಾಗಿರುವ ನನ್ನನ್ನು ಶಾಲೆಯ ಶಿಕ್ಷಕ ಹಾಗೂ ವಿದ್ಯಾರ್ಥಿ ವೃಂದವು ಪ್ರಪ್ರಥಮವಾಗಿ ಗೌರವಿಸುವ ಮೂಲಕ ನನ್ನ ಮೇಲೆ ಇರಿಸಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದೇನೆ. ಮುಂದಿನ ದಿನಗಳಲ್ಲಿಯೂ ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿ ಆದ್ಯತೆಯನ್ನು ನೀಡುವ ಭರವಸೆಯನ್ನು ವ್ಯಕ್ತಪಡಿಸಿದರು.

ಈ ಸಂದರ್ಭ ಶಿಕ್ಷಕಿಯರಾದ ಶೈಲಾ ಜಾಯ್, ಮೀನಾ ಕುಮಾರಿ, ಅನಿತಾ, ಅಕ್ಷರ ದಾಸೋಹದ ಶ್ರೀಜಾ, ಹೀನ ಹಾಗೂ ವಿದ್ಯಾರ್ಥಿಗಳು ಇದ್ದರು.