ಕೂಡಿಗೆ, ಆ. ೨೪: ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳಿ, ಕುರಿ, ಮೀನು ಮಾರಾಟ ಅಂಗಡಿಗಳ ಮಾಲೀಕರು ಅಂಗಡಿ ತೆರೆಯಲು ಗ್ರಾಮ ಪಂಚಾಯಿತಿಯಿAದ ಪರವಾನಗಿ ತೆಗೆದುಕೊಳ್ಳದೆ ಅನಧಿಕೃತವಾಗಿ ಅಂಗಡಿಗಳನ್ನು ನಡೆಸುತ್ತಿರುವ ಪರಿಣಾಮ ಪಂಚಾಯಿತಿಗೆ ಆದಾಯ ಕಡಿಮೆಯಾಗಿದೆ. ಅಂಗಡಿ ಮಾಲೀಕರಿಗೆ ಅನೇಕ ಬಾರಿ ಈ ಬಗ್ಗೆ ತಿಳಿಸಿದರೂ ಇದುವರೆಗೂ ಪರವಾನಗಿ ಪಡೆದಿಲ್ಲ. ಅಂತಹ ಅಂಗಡಿಗಳನ್ನು ಮುಚ್ಚುವಂತೆ ಸರ್ವ ಸದಸ್ಯರು ಒತ್ತಾಯಿಸಿದರು. ಅದರಂತೆ ನಿರ್ಣಯ ಕೈಗೊಳ್ಳಲಾಯಿತು.

ನಂತರ ಸಭೆಯಲ್ಲಿ ೧೫ನೇ ಹಣಕಾಸು ಯೋಜನೆಗೆ ಸಂಬAಧಿಸಿದ ವಿವಿಧ ಕಾಮಗಾರಿ ಗಳನ್ನು ತೆಗೆದುಕೊಳ್ಳುವ ಹಿನ್ನೆಲೆಯಲ್ಲಿ ಕ್ರಿಯಾ ಯೋಜನೆಯನ್ನು ತಯಾರಿ ಸಲಾ ಯಿತು. ಸದಸ್ಯರು ತಮ್ಮ ವಾರ್ಡ್ ಅಭಿವೃದ್ಧಿಗೆ ಪೂರಕವಾದ ಅಂಶಗ ಳನ್ನು ಒಳಗೊಂಡAತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳುವ ಬಗ್ಗೆ ಸವಿಸ್ತಾರವಾಗಿ ಚರ್ಚೆಗಳು ನಡೆಸಿದರು.

ಅಧ್ಯಕ್ಷ ಕೆ. ಟಿ. ಗಿರೀಶ್ ಕುಮಾರ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯ ಉಪಗ್ರಾಮಗಳ ಅಭಿವೃದ್ಧಿ ಪೂರಕವಾದ ಯೋಜನೆಯನ್ನು ಈಗಾಗಲೇ ಕೈಗೊಳ್ಳಲಾಗಿದೆ. ಅದರ ಮೂಲಕ ಹಂತ ಹಂತವಾಗಿ ಅತ್ಯವಶ್ಯಕವಾದ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸುವ ಮೂಲಕ ಗ್ರಾಮದ ಪ್ರಗತಿಗೆ ಸಹಕಾರಿಗಳಾಗುವ ಎಂದರು.

ಅಭಿವೃದ್ಧಿ ಅಧಿಕಾರಿ ಸಿ.ಎಸ್. ಮಂಜುಳಾ ಸರಕಾರದ ಹೊಸ ಯೋಜನೆಯ ಮಾಹಿತಿಯನ್ನು ಸಭೆಗೆ ತಿಳಿಸಿದರು, ನಂತರ ಸಭೆಗೆ ಬಂದ ಸಾರ್ವಜನಿಕ ಅರ್ಜಿಗಳನ್ನು ವಿಲೇವಾರಿಗೆ ಸಂಬAಧಿಸಿದAತೆ ಸಭೆಗೆ ಮಂಡಿಸಿದರು

ಸಭೆಯಲ್ಲಿ ಉಪಾಧ್ಯಕ್ಷೆ ಜಯಶ್ರೀ, ಸದಸ್ಯರುಗಳಾದ ಟಿ. ಪಿ. ಹಮೀದ್, ಅನಂತ್ ಅರುಣ್ ರಾವ್, ಶಿವಕುಮಾರ್ ಚಂದ್ರು, ಮೋಹಿನಿ ತಮ್ಮಣೇಗೌಡ, ಮಂಗಳ, ರತ್ನಮ್ಮ, ಜಯಶೀಲಾ, ವಾಣಿ, ಲಕ್ಷಿö್ಮ, ಅಭಿವೃದ್ಧಿ ಅಧಿಕಾರಿ ಮಂಜುಳಾ, ಕಾರ್ಯ ದರ್ಶಿ ಪುನೀತ್ ಹಾಜರಿದ್ದರು.