ಮಾನವನ ಉಸಿರಾಟ, ಎದೆ ಬಡಿತ, ರಕ್ತ ಸಂಚಲನದAತಹ ಪ್ರಮುಖ ಹಾಗೂ ಸಹಜವಾಗಿರುವ ಜೈವಿಕ ಕ್ರಿಯೆಗಳನ್ನು ಸಹಸ್ರಾರು ವರ್ಷಗಳ ಕಾಲ ತಾತ್ಕಾಲಿಕವಾಗಿ ನಿಲ್ಲಿಸಿ ಬಳಿಕ ಮತ್ತೆ ಈ ಕ್ರಿಯೆಗಳನ್ನು ಪನರಾರಂಭಿಸುವ ಸಾಮರ್ಥ್ಯವನ್ನು ಹೊಂದಿರುವ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಶೀಥಲ ಕೇಂದ್ರಗಳು (ಕ್ರೆöÊಯೋಜೆನಿಕ್ ಸ್ಲೀಪ್ ಮಾಡ್ಯೂಲ್) ಹಲವಾರು ಆಂಗ್ಲ ಸಿನಿಮಾಗಳಲ್ಲಿ ನೀವು ಕಂಡಿರಬಹುದು. ಮಾನವನು ಇಂತಹ ಕೇಂದ್ರದಲ್ಲಿ ಮಲಗಿ ನೂರಾರು ಅಥವಾ ಸಾವಿರಾರು ವರ್ಷಗಳು ಕಳೆದು ಎಚ್ಚರಗೊಂಡಾಗ, ಜೈವಿಕವಾಗಿ ಅವನಿಗೆ ಕೇಂದ್ರದೊಳಗೆ ಮಲುವಾಗಿನ ವಯಸ್ಸೆ ಆಗಿರುತ್ತದೆ. ಈ ಮೂಲಕ ಪರೋಕ್ಷವಾಗಿ ಭವಿಷ್ಯಕ್ಕೆ ಸಂಚರಿಸುವAತಾಗುತ್ತದೆ. ‘ಪ್ಯಾಸೆಂರ‍್ಸ್’, ‘ಇಂಟರ್‌ಸ್ಟೆಲ್ಲಾರ್’, ‘ಒಬ್ಲಿವಿಯನ್’, ‘ಇಡಿಯಾಕ್ರೆಸಿ’ ಎಂಬಿತ್ಯಾದಿ ಆಂಗ್ಲ ಸಿನಿಮಾಗಳಲ್ಲಿ ಇಂತಹ ಶೀಥಲ ಕೇಂದ್ರಗಳ ಬಳಕೆಯನ್ನು ಕಾಣಬಹುದು. ಆದರೆ ಈ ಕೇಂದ್ರಗಳು ಕಾಲ್ಪನಿಕ ಜಗತ್ತಿಗೆ ಮಾತ್ರ ಸೀಮಿತವಾಗಿದ್ದು, ವಾಸ್ತವಿಕವಾಗಿ ಇವುಗಳನ್ನು ನಿರ್ಮಾಣ ಮಾಡಲು ನಮ್ಮಲ್ಲಿನ ಪ್ರಸ್ತುತವಿರುವ ತಂತ್ರಜ್ಞಾನಕ್ಕೆ ಅಸಾಧ್ಯವಾಗಿದೆ ಹಾಗೂ ಇತರ ಸಣ್ಣ ಜೀವ ಸಂಕುಲಗಳಿಗಿAತ ಮಾನವನ ಜೀವಶಾಸ್ತç ವಿಧಾನವು ಮುಂದುವರಿದಿದ್ದು, ಜೈವಿಕ ಪ್ರಕ್ರಿಯೆಯನ್ನು ಸಂಪೂರ್ಣ ನಿಲ್ಲಿಸಿ ಮತ್ತೆ ಪ್ರಾರಂಭಿಸುವುದು ಕಷ್ಟಸಾಧ್ಯ. ಹೀಗಿದ್ದರೂ ಇದರ ಹಿಂದಿರುವ ವಿಜ್ಞಾನವನ್ನು ಅಲ್ಲೆಗಳೆಯುವಂತಿಲ್ಲ.

೪೬,೦೦೦ ವರ್ಷಗಳಿಂದ ತನ್ನ ಜೈವಿಕ ಕ್ರಿಯೆಯನ್ನು ಸ್ಥಗಿತಗೊಳಿಸಿ ಹಿಮಗಡ್ಡೆಯೊಳಗೆ ಅವಿತಿದ್ದ ಹುಳುಗಳೆ ಇದಕ್ಕೆ ಸಾಕ್ಷಿ. ಹೌದು ದೇಶದ ಉತ್ತರ ಧ್ರುವದ ಸಮೀಪವಿರುವ ಬಹುತೇಕ ವರ್ಷಪೂರ್ತಿ ಮಂಜುಗಡ್ಡೆ-ಹಿಮ ಆವರಿತ ರಷ್ಯಾ ದೇಶದ ಸೈಬೀರಿಯಾ ಎಂಬ ಪ್ರಾಂತ್ಯದಲ್ಲಿ ಇಂತಹ ಹುಳುಗಳನ್ನು ವಿಜ್ಞಾನಿಗಳು ಕಳೆದ ೫ ವರ್ಷಗಳ ಹಿಂದೆಯೇ ಪತ್ತೆಹಚ್ಚಿದ್ದರು. ಹಾಗೂ ಇವುಗಳು ಮತ್ತೆ ಉಸಿರಾಡುವ ಹಾಗೆಯೂ ಮಾಡುವಲ್ಲಿ ಯಶಸ್ವಿಯಾಗಿದ್ದರು. ನೆಮಟೋಡ್ಸ್ ಅಥವಾ ರೌಂಡ್‌ವರ್ಮ್ ಗುಂಪಿಗೆ ಸೇರಿರುವ ಸೂಕ್ಷಾö್ಮಣು ಜೀವಿಗಳಿವು. ಕಳೆದ ೫ ವರ್ಷಗಳಿಂದ ಇವುಗಳ ಅಧ್ಯಯನ ನಡೆಸಿ ಇತ್ತೀಚೆಗಷ್ಟೆ ಇವುಗಳ ವಿಷಯವಾಗಿ ರಷ್ಯಾದ ವಿಜ್ಞಾನಿಗಳಿಂದ ಪ್ರಸಾರಗೊಂಡ ಅಧ್ಯಯನದ ವರದಿಯ ಪ್ರಕಾರ ‘ಕಾರ್ಬನ್ ಡೇಟಿಂಗ್’ ವಿಧಾನ ಬಳಸಿ ಇವುಗಳು ೪೬,೦೦೦ ವರ್ಷಗಳ ಕಾಲ ಮಂಜುಗಡ್ಡೆ ಯಲ್ಲಿ ಅವಿತಿರುವುದು ದೃಢಪಟ್ಟಿದೆ. ಮಂಜುಗಡ್ಡೆಯನ್ನು ಕಳೆದ ೫ ವರ್ಷಗಳ ಹಿಂದೆ ಜಾಗ್ರತೆಯಿಂದ ಕರಗಿಸಿದ ಬಳಿಕ ಈ ಸೂಕ್ಷಾö್ಮಣು ಜೀವಿಗಳು ಮತ್ತೆ ಜೀವಕ್ಕೆ ಬಂದಿವೆ.

ಕ್ರಿಪ್ಟೋಬೈಯೋಸಿಸ್‌ನಿಂದÀ ಸಾಧ್ಯ

ಅತ್ಯಂತ ಶೀಥಲ ವಾತಾವರಣದಲ್ಲಿ ಜೈವಿಕ ಕ್ರಿಯೆಗಳನ್ನು ಸ್ಥಗಿತಗೊಳಿಸಿ ಕೆಲ ದಿನ, ವರ್ಷಗಳ ಬಳಿಕ ಪುನರಾರಂಭಿಸುವ ಪ್ರಕ್ರಿಯೆಗೆ ‘ಕ್ರಿಪ್ಟೋಬಯೋಸಿಸ್’ ಎನ್ನುತ್ತಾರೆ. ಮಾನವನಿಗೆ ಇದು ಅಸಾಧ್ಯವಾಗಿದ್ದು, ಇನ್ನೂ ನಿರ್ಮಾಣವಾಗದ ಕೇವಲ ಕಾಲ್ಪನಿಕ ಜಗತ್ತಿನಲ್ಲಿ ಹೆಸರು ಪಡೆದಿರುವ ಕ್ರೆöÊಯೋಜೆನಿಕ್ ಮಾಡ್ಯೂಲ್ ಮೂಲಕವಷ್ಟೆ ಸಾಧ್ಯವಾಗಬಹುದು. ಆದರೆ ಕೆಲ ಸೂಕ್ಷಾö್ಮಣು ಜೀವಿಗಳಿಗೆ ನೈಸರ್ಗಿಕವಾಗಿ ಸೃಷ್ಟಿಯಾಗುವ ಶೀಥಿಲ ವಾತಾವರಣದಲ್ಲಿಯೇ ಕ್ರಿಪ್ಟೋಬಯೋಸಿಸ್ ಮಾಡಲು ಸಾಧ್ಯವಿದೆ. ನೆಮಟೋಡ್ಸ್ ಅಥವಾ ರೌಂಡ್‌ವರ್ಮ್, ಟಾರ್ಟಿಗ್ರೇಡ್ಸ್ ಗುಂಪಿನ ಸೂಕ್ಷಾö್ಮಣು ಜೀವಿಗಳಿಗೆ ಇದು ಸಾಧ್ಯ. ‘ಕ್ರಿಪ್ಟೊಬಯೋಸಿಸ್’ ಸ್ಥಿತಿಯಲ್ಲಿ ಈ ಜೀವಿಗಳು ನೀರು, ಆಮ್ಲಜನಕವಿಲ್ಲದೆಯೂ ಬದುಕುಳಿಯುತ್ತವೆ.

ಈ ಹಿಂದೆ ಗುರುತಿಸದಿರುವ ತಳಿ

ಮಂಜುಗಡ್ಡೆಯಲ್ಲಿ ಪತ್ತೆಯಾದ ರೌಂಡ್‌ವರ್ಮ್ ಜಾತಿಗೆ ಸೇರಿರುವ ಹುಳುಗಳನ್ನು ಸೂಕ್ಷö್ಮವಾಗಿ ಗಮನಿಸಿ ಅಧ್ಯಯನ ನಡೆಸಿ ಪ್ರಸ್ತುತ ಗುರುತಿಸಲ್ಪಟ್ಟಿರುವ ಎಲ್ಲಾ ಜಾತಿಯ ಸೂಕ್ಷಾö್ಮಣು ಹುಳುಗಳೊಂದಿಗೆ ಹೋಲಿಸಲಾಗಿದ್ದು ಯಾವುದಕ್ಕೂ ಇವು ಹೊಂದಾಣಿಕೆಯಾಗದ ಕಾರಣ ಇವುಗಳನ್ನು ಹೊಸ ಜಾತಿ ಎಂದು ಗುರುತಿಸಲಾಗಿದ್ದು, ‘ಪನಗ್ರೋಲೈಮಸ್ ಕಾಲಿಮೈನ್‌ಸಿಸ್’ ಎಂಬುದಾಗಿ ಹೆಸರಿಸಲಾಗಿದೆ. ಸೈಬೀರಿಯಾದ ಮಂಜುಗಡ್ಡೆ ಯಲ್ಲಿ ದೊರೆತ ಈ ಹುಳುಗಳನ್ನು ಹೊರತುಪಟ್ಟು ಈ ತಳಿಯ ಇತರ ಎಲ್ಲ ಹುಳುಗಳು ನಶಿಸಿಹೋಗಿರಬಹುದೆಂದು ಅಂದಾಜಿಸಲಾಗಿದೆ.

ಹುಳುಗಳಿಗೆ ಕೆಲ ವಾರಗಳಷ್ಟೆ ಆಯುಷ್ಯ

ಮಂಜುಗಡ್ಡೆಯಲ್ಲಿ ಪತ್ತೆಯಾದ ರೌಂಡ್‌ವರ್ಮ್ ಗುಂಪಿಗೆ ಸೇರಿರುವ ಈ ಹುಳುಗಳಿಗೆ ಕೇವಲ ೨ ವಾರಗಳಷ್ಟೆ ಆಯುಷ್ಯ ಆದರೂ ೫ ವರ್ಷಗಳ ಹಿಂದೆ ಪತ್ತೆಯಾದ ಈ ಹುಳುಗಳನ್ನು ಯಾವ ರೀತಿ ಅಧ್ಯಯನ ನಡೆಸುತ್ತಿದ್ದಾರೆ ಎಂಬುದು ನಿಮಗೆ ಗೊಂದಲವಿರಬಹುದು. ೪೬,೦೦೦ ವರ್ಷಗಳ ಕಾಲ ಜೈವಿಕ ಪ್ರಕ್ರಿಯೆ ನಿಲ್ಲಿಸಿದ್ದ ಹುಳುಗಳು ಮಂಜುಗಡ್ಡೆಯಿAದ ಹೊರಬಂದ ಕೆಲ ವಾರಗಳಲ್ಲೇ ಮರಣ ಹೊಂದಿವೆ. ಇಷ್ಟೇ ಇವುಗಳ ಆಯುಷ್ಯ. ಆದರೆ ಈ ಅವಧಿಯಲ್ಲಿ ಅಲೈಂಗಿಕ ಪ್ರಕ್ರಿಯೆ ಮೂಲಕ ಹುಟ್ಟಿರುವ ಈ ಹುಳುಗಳ ವಂಶಸ್ಥ ಹುಳುಗಳ ಮೇಲೆ ನಿರಂತರ ಅಧ್ಯಯನ ನಡೆಯುತ್ತಿದೆ. ‘ಕ್ರೆöÊಯೊಬಯೋಸಿಸ್’ ಪ್ರಕ್ರಿಯೆ ನಡೆಸಲು ಸಾಧ್ಯವಿರುವ ಈ ಹುಳುಗಳು ಯಾವ ರೀತಿ ಈ ಸಾಧನೆ ಮಾಡುತ್ತವೆ ಎಂಬುದನ್ನು ಗಮನಿಸಲಾಗುತ್ತಿದೆ.

ವಿಕಸನ ಅಧ್ಯಯನಕ್ಕೆ ಸಹಕಾರಿ

ಭೂಮಿಯ ಕೋಟ್ಯಂತರ ವರ್ಷಗಳ ಇತಿಹಾಸದಲ್ಲಿ ಜೀವಿಗಳು ಅತ್ಯಂತ ಕ್ಲಿಷ್ಟಕರ ವಾತಾವರಣಗಳನ್ನು ಜಯಿಸಿ ವಿಕಾಸಗೊಳ್ಳುವ ಈಗಿರುವ ಮಾನವ ಸೇರಿದಂತೆ ಇತರ ಜೀವರಾಶಿಗಳು ಸಮೃದ್ಧವಾಗಿ ಬೆಳೆದು ನಿಲ್ಲಲು ಸಹಕಾರಿಯಾಗಿವೆ. ಈ ವಿಕಸನ ಯಶಸ್ವಿಯಾಗಲು ಜೀವಿಗಳು ಭೂಮಿಯ ಕೋಟ್ಯಂತರ ವರ್ಷಗಳ ಇತಿಹಾಸದಲ್ಲಿ ವಾತಾವರಣಗಳಲ್ಲಿನ ತೀವ್ರ ಸ್ವರೂಪದ ಬದಲಾವಣೆಗಳನ್ನು ಲೆಕ್ಕಿಸದೆ ಬದುಕುಳಿಯಲು ತಮ್ಮ ಜೈವಿಕ ವಿಧಿ-ವಿಧಾನಗಳಲ್ಲಿ ಹಲವಷ್ಟು ಬದಲಾವಣೆಗಳನ್ನು ಮಾಡಬೇಕಿದ್ದ ಅವಶ್ಯಕತೆಗಳಿದ್ದು, ಈ ವಿಷಯದ ಕುರಿತು ತೀವ್ರ ಅಧ್ಯಯನ ನಡೆಸಲು ಮಂಜುಗಡ್ಡೆ ಹುಳುಗಳ ವಂಶಸ್ಥ ಹುಳುಗಳ ಸಂಕುಲ ಸಹಕಾರಿಯಾಗಲಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯ.

ಕ್ರೆöÊಯೋಜನೆಕ್ ತಂತ್ರ ಅಂತರಗ್ರಹಿಗಳಾಗಲು ಸಹಕಾರಿ

ಪ್ರಸ್ತುತ ಭೂ-ಗ್ರಹವೊಂದಕ್ಕೇ ಸೀಮಿತವಾಗಿರುವ ಮಾನವನು ಮುಂದೊAದು ದಿನ ಅಂತರಗ್ರಹ ಜೀವಿ ಎಂಬ ಹೆಸರು ಪಡೆಯುವುದರಲ್ಲಿ ಎರಡು ಮಾತಿಲ್ಲ. ವೇಗವಾಗಿ ಬೆಳೆಯುತ್ತಿರುವ ಬಾಹ್ಯಾಕಾಶ ಅನ್ವೇಷಣಾ ಕ್ಷೇತ್ರವೇ ಇದಕ್ಕೆ ಉದಾಹರಣೆ. ಅಂತರಗ್ರಹ ಪಯಣವು ತ್ರಾಸದಾಯಕ ಹಾಗೂ ಅತಿ ಹೆಚ್ಚು ಸಮಯ ವ್ಯಯವಾಗುವ ಕಾರ್ಯವಾಗಿದೆ. ಉದಾಹರಣೆಗೆ ಪ್ರಸ್ತುತವಿರುವ ರಾಕೆಟ್‌ಗಳ ಹಾಗೂ ಬಾಹ್ಯಾಕಾಶ ನೌಕೆಗಳ ಸಹಕಾರದಿಂದ ಮಂಗಳ ಗ್ರಹವನ್ನು ತಲುಪಬೇಕಾದರೆ ಕನಿಷ್ಟ ೭ ತಿಂಗಳುಗಳ ಸಮಯ ಅಗತ್ಯವಿದೆ. ಮಂಗಳ ಗ್ರಹವು ೨ ವರ್ಷಕ್ಕೊಮ್ಮೆ ಭೂಮಿಯ ಸನಿಹ ಬರಲಿದ್ದು, ಈ ಸಮಯದಲ್ಲಿ ಮಾತ್ರ ೭ ತಿಂಗಳು ಪಯಣ ಅವಧಿ, ಇಲ್ಲದಿದ್ದಲ್ಲಿ ವರ್ಷಾನುಗಟ್ಟಲೆ ಪಯಣದ ಅಗತ್ಯವಿದೆ. ಸೂರ್ಯನಿಂದÀ ಅತ್ಯಂತ ದೂರವಿರುವ ಗ್ರಹವಾಗಿರುವ ಪ್ಲೂಟೊ ತಲುಪಲು ೯ ರಿಂದ ೧೦ ವರ್ಷಗಳ ಕಾಲಾವಕಾಶ ಅಗತ್ಯವಿದೆ. ಭವಿಷ್ಯದಲ್ಲಿ ಮಾನವನು ಈ ಗ್ರಹಗಳೆಡೆಯ ಪಯಣಕ್ಕೆ ಮಾತ್ರ ಸೀಮಿತವಾಗುವುದಿಲ್ಲ. ಮುಂದೊAದು ದಿನ ನೂರರಿಂದ ಸಾವಿರಾರು ವರ್ಷಗಳ ಪಯಣ ಅಗತ್ಯವಿರುವ ಇತರ ನಕ್ಷತ್ರ ಮಂಡಲಗಳೆಡೆಗೂ ಮುಖ ಮಾಡುವ ಸಾಧ್ಯತೆಗಳಿವೆ. ಇಂತಹ ಸಂದರ್ಭದಲ್ಲಿ ಪಯಣ ಅವಧಿಯಲ್ಲಿ ‘ಕ್ರಿಪ್ಟೊಬಯೋಸಿಸ್’ ಪ್ರಕ್ರಿಯೆ ನಡೆಸುವುದು ಅಗತ್ಯವಿದೆ. ಮಾನವನಿಗೆ ಇದು ಸ್ವಾಭಾವಿಕವಾಗಿ ಅಸಾಧ್ಯವಾಗಿರುವ ಕಾರಣ ಇನ್ನೂ ಆವಿಷ್ಕಾರಗೊಳ್ಳದ ‘ಕ್ರೆöÊಯೋಜೆನಿಕ್ ಮಾಡ್ಯೂಲ್’ ಮೂಲಕ ಕೃತಕವಾಗಿ ‘ಕ್ರಿಪ್ಟೋಬಯೋಸಿಸ್’ ಹಂತಕ್ಕೆ ಜಾರುವ ಅಗತ್ಯತೆ ಇಂತಹ ಸಾವಿರಾರು ವರ್ಷಗಳ ಐತಿಹಾಸಿಕ ಪಯಣಗಳ ಸಂದರ್ಭ ಅಗತ್ಯವಿದೆ. ಬಹುಶಃ ೪೬,೦೦೦ ಬದುಕುಳಿದ ಹುಳುಗಳ ತೀವ್ರ ಅಧ್ಯಯನವು ಈ ಕ್ರೆöÊಯೋಜೆನಕ್ ಮಾಡ್ಯೂಲ್ ತಯಾರಿಸುವಲ್ಲಿಯೂ ಸಹಕಾರಿಯಾಗಲಿದೆ ಎಂಬುದು ಕೆಲ ವಿಜ್ಞಾನಿಗಳ ಅಭಿಪ್ರಾಯ.

- ಪ್ರಜ್ವಲ್ ಜಿ. ಆರ್., ಮಡಿಕೇರಿ.

ಮೊ: ೯೦೩೬೧೪೯೨೫೨.