ನಾಪೋಕ್ಲು, ಆ. ೨೩: ನಾಪೋಕ್ಲು ಸಮೀಪದ ಮೂಕಂಡಬಾಣೆಯ ಸಮುದಾಯ ಭವನದ ಸುತ್ತ ಆವರಣದಲ್ಲಿ ದಟ್ಟವಾಗಿ ಬೆಳೆದಿದ್ದ ಕಾಡು ಗಿಡ ಗಂಟಿಗಳನ್ನು ಶೌರ್ಯ ಸ್ವಯಂ ಸೇವಕರು ಇತ್ತೀಚೆಗೆ ಶ್ರಮದಾನದ ಮೂಲಕ ಕಡಿದು ಸ್ವಚ್ಛಗೊಳಿಸಿದರು.

ಈ ಸಂದರ್ಭ ಶ್ರಮದಾನದಲ್ಲಿ ಸ್ಥಳೀಯ ಶೌರ್ಯತಂಡದ ಸದಸ್ಯರಾದ ಚೇತನ್, ದೇವಪ್ಪ, ಸುದೀಪ್, ನಿತೀಶ್, ಚರಣ್ ಇದ್ದರು.