ಮಡಿಕೇರಿ, ಆ. ೨೩: ಹಿಂದೂ ಜಾಗರಣಾ ವೇದಿಕೆ ವತಿಯಿಂದ ಚಂದ್ರಯಾನ-೩ ರ ವಿಕ್ರಮ ಲ್ಯಾಂಡರ್ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಲೆಂದು ದೇವರಲ್ಲಿ ಪ್ರಾರ್ಥಿಸಿ ಮಡಿಕೇರಿ ಮಂಗಳಾದೇವಿ ನಗರದ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಜಿಲ್ಲಾ ಸಂಚಾಲಕ ಕುಕ್ಕೆರ ಅಜಿತ್, ಪ್ರಮುಖರಾದ ವಿನಯ್, ದುರ್ಗೇಶ್, ಮನು ಮಂಜುನಾಥ್, ಉಮೇಶ್ ಸುಬ್ರಮಣಿ ಇನ್ನಿತರರು ಹಾಜರಿದ್ದರು.ಕೊಡಗು ಜಿಲ್ಲಾ ಭಾರತೀಯ ಜನತಾ ಪಾರ್ತಿ ವತಿಯಿಂದ ನಗರದ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು. ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಉಪಾಧ್ಯಕ್ಷ ಬಿ.ಕೆ. ಅರುಣ್‌ಕುಮಾರ್, ಮಡಿಕೇರಿ ನಗರಾಧ್ಯಕ್ಷ ಮನು ಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಎಸ್.ಸಿ. ಸತೀಶ್ ಕುಮಾರ್, ಶ್ವೇತಾ ಪ್ರಶಾಂತ್, ಸಬಿತಾ, ಕನ್ನಿಕೆ, ಡಿಶು ಇತರರು ಪಾಲ್ಗೊಂಡಿದ್ದರು.ಕುಶಾಲನಗರ : ಚಂದ್ರಯಾನ -೩ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ಚಂದ್ರ ಗ್ರಹದ ಭೂಸ್ಪರ್ಶ ಮಾಡಲಿ ಎಂದು ಕುಶಾಲನಗರ ಆಟೋ ಚಾಲಕರ ಮಾಲೀಕರ ಸಂಘದ ವತಿಯಿಂದ ಕುಶಾಲನಗರ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಸೋಮವಾರಪೇಟೆ, ಆ. ೨೩: ಚಂದ್ರಯಾನ-೩ ಯಶಸ್ವಿಯಾದ ಹಿನ್ನೆಲೆ ಸೋಮವಾರಪೇಟೆ ಪಟ್ಟಣದಲ್ಲಿ ಹಿಂದೂ ಜಾಗರಣಾ ವೇದಿಕೆಯ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಸಂಭ್ರಮಾಚರಣೆ ಮಾಡಿದರು.
ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು, ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿದರು. ಈ ಸಂದರ್ಭ ವೇದಿಕೆಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ಎಂ.ಬಿ. ಉಮೇಶ್, ದರ್ಶನ್ ಜೋಯಪ್ಪ, ಹೆಚ್.ಕೆ. ಮಾದಪ್ಪ, ಮನು ರೈ, ಪ್ರಶಾಂತ್, ಸಾಗರ್, ರೂಪಾ ಸತೀಶ್, ಸಿ.ಸಿ. ನಂದಕುಮಾರ್ ಸೇರಿದಂತೆ ಇತರರು ಇದ್ದರು.ಮಡಿಕೇರಿ : ಚಂದ್ರಯಾನ ೩ ಯಶಸ್ವಿಯಾಗಿ ಲ್ಯಾಂಡಿAಗ್ ಆಗಲೆಂದು ಶ್ರೀ ಕೋದಂಡರಾಮ ದೇವಾಲಯದಲ್ಲಿ ಪೂಜೆ ನೆರವೇರಿಸಲಾಯಿತು. ಈ ಸಂದರ್ಭ ಕೋದಂಡರಾಮ ದೇವಾಲಯ ಅಧ್ಯಕ್ಷ ಮಂಜುನಾಥ್, ಕಾರ್ಯಾಧ್ಯಕ್ಷ ಸುಧಾಕರ್, ಖಜಂಚಿ ತಿಮ್ಮಯ್ಯ, ಟ್ರಸ್ಟಿಗಳಾದ ಪರಮೇಶ್, ಗೋಪಿನಾಥ್, ಉಪಸ್ಥಿತರಿದ್ದರು.ಸೋಮವಾರಪೇಟೆ: ಬಹು ನಿರೀಕ್ಷಿತ ಚಂದ್ರಯಾನ-೩ ಯಶಸ್ಸಿಗೆ ಸೋಮವಾರಪೇಟೆ ಮತ್ತು ಮಾದಾಪುರದಲ್ಲಿ ಹಿಂದೂ ಜಾಗರಣಾ ವೇದಿಕೆ ವತಿಯಿಂದ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ಇಲ್ಲಿನ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಕಾರ್ಯಕರ್ತರು, ಭಾರತೀಯ ವಿಜ್ಞಾನಿಗಳ ಶ್ರಮ ಸಾರ್ಥಕ ವಾಗಲಿ; ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸುವಂತಾಗಲಿ. ಯಾವುದೇ ಅಡೆತಡೆಯಿಲ್ಲದಂತೆ ಚಂದ್ರ ಯಾನ ಯಶಸ್ಸಾಗಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ಸುಭಾಷ್ ತಿಮ್ಮಯ್ಯ, ದರ್ಶನ್ ಜೋಯಪ್ಪ, ಸಿ.ಸಿ. ನಂದಕುಮಾರ್, ರಾಘವ, ಹೇಮಂತ್, ಮಸಗೋಡು ಸತೀಶ್, ದೀಪಕ್ ಕೌಡಿಕಟ್ಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಅಂತೆಯೇ ಮಾದಾಪುರದ ಗಣಪತಿ ದೇವಾಲಯದಲ್ಲಿ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ವಿಶೇಷ ಪೂಜೆ-ಪ್ರಾರ್ಥನೆ ಸಲ್ಲಿಸಲಾಯಿತು. ವೇದಿಕೆಯ ಪ್ರಮುಖರಾದ ಸುನಿಲ್ ಮಾದಾಪುರ, ವಿನು, ಸೂರಜ್ ಸೇರಿದಂತೆ ಇತರರು ಉಪಸ್ಥಿತರಿದ್ದರು.ಮಡಿಕೇರಿ, ಆ. ೨೩: ನಗರದ ಜ. ತಿಮ್ಮಯ್ಯ ವೃತ್ತದಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ಚಂದ್ರಯಾನ-೩ ಯಶಸ್ವಿಗೊಂಡ ಹಿನ್ನೆಲೆ ಸಂಭ್ರಮಾಚರಿಸಲಾಯಿತು. ಸಿಹಿ ಹಂಚಿ, ಜಯಘೋಷ ಹಾಕಿ ಕಾರ್ಯಕರ್ತರು ಸಂಭ್ರಮವನ್ನು ಆಚರಿಸಿದರು. ಈ ಸಂದರ್ಭ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ನಗರಸಭಾ ಅಧ್ಯಕ್ಷೆ ಅನಿತಾ ಪೂವಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಸಿ. ಸತೀಶ್, ಬಿಜೆಪಿ ನಗರಾಭಿವೃದ್ಧಿ ಮನು ಮಂಜುನಾಥ್, ಉಪಾಧ್ಯಕ್ಷ ಬಿ.ಕೆ. ಜಗದೀಶ್, ನಗರಸಭಾ ಸದಸ್ಯರುಗಳು ಸೇರಿದಂತೆ ಇನ್ನಿತರರು ಹಾಜರಿದ್ದರು. ನೀಡಿದ್ದಾರೆ. ಈ ಸಂದರ್ಭ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ರಾಧಾ, ಗೋಣಿಕೊಪ್ಪಲು ಸಮೀಪದ ಕೈಕೇರಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಜಯಂತಿ ಹಾಜರಿದ್ದರು.
ಕುಶಾಲನಗರ, ಆ ೨೩: ಕುಶಾಲನಗರ ಪಟ್ಟಣದ ಗೌಡ ಸಮಾಜದ ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡ ಕೆಸಿಪಿ ಆರ್ಕೇಡ್‌ನಲ್ಲಿ ಸೂಪರ್ ಮಾರ್ಟ್ ಮಳಿಗೆಗಳಿಗೆ ಚಾಲನೆ ನೀಡಲಾಯಿತು.
ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಸೂಪರ್ ಮಾರ್ಟ್ಗೆ ಚಾಲನೆ ನೀಡಿದರು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕುಶಾಲನಗರ ಶಾಖೆಯ ಹಿರಿಯ ವ್ಯವಸ್ಥಾಪಕ ಕೆ. ಮಂಜುನಾಥ್ ಹಾರ್ಡ್ವೇರ್ ಮತ್ತು ಪೆಯಿಂಟ್ಸ್ ವಿಭಾಗ ಉದ್ಘಾಟಿಸಿದರು. ಹಾಸನದ ಡಾ. ಕೆ ಉದಯಶಂಕರ್ ಟೆಂಡರ್ ಚಿಕನ್ ವಿಭಾಗಕ್ಕೆ ಚಾಲನೆ ಚಾಲನೆ ನೀಡಿದರು. ಈ ಸಂದರ್ಭ ಮಾಲೀಕರಾದ ಕೆಚ್ಚಪ್ಪನ ಮೋಹನ್ ಕುಮಾರ್ ಮತ್ತಿತರರು ಇದ್ದರು.