ಮಡಿಕೇರಿ, ಆ. ೨೪: ಅಮ್ಮತ್ತಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಕುಟ್ಟಂಡ ಕೆ. ಪೂವಯ್ಯ ಅಧ್ಯಕ್ಷತೆಯಲ್ಲಿ, ಅಮ್ಮತ್ತಿ ಕೊಡವ ಸಮಾಜದಲ್ಲಿ ನಡೆಯಿತು.
ಸಂಘದ ಅಧ್ಯಕ್ಷರು ಸಭೆಯನ್ನು ದ್ದೇಶಿಸಿ ಸಂಘವು ೨೦೨೨-೨೩ನೇ ಸಾಲಿನಲ್ಲಿ ರೂ. ೧೪೩೨೫ ಲಕ್ಷದಷ್ಟು ವಾರ್ಷಿಕ ವಹಿವಾಟು ನಡೆಸಿ, ೫೨.೧೭ ಲಕ್ಷದಷ್ಟು ಲಾಭಗಳಿಸಿದ್ದು, ಶೇ.೨೩ರಷ್ಟು ಡಿವಿಡೆಂಡ್ ನೀಡುವುದಾಗಿ ತೀರ್ಮಾನಿಸಲಾಗಿದೆ ಎಂದು ತಿಳಿಸಿದರು. ಸಂಘವು ೨೬೪೧ ಸದಸ್ಯರನ್ನು ಹೊಂದಿದ್ದು, ರೂ. ೧೨೨.೪೯ ಲಕ್ಷ ಪಾಲು ಬಂಡವಾಳವನ್ನು ಹೊಂದಿದೆ. ವರ್ಷಾಂತ್ಯಕ್ಕೆ ರೂ. ೨೫೦೭.೨೭ ಲಕ್ಷ ಠೇವಣಾತಿ ಹೊಂದಿದ್ದು, ರೂ. ೨೫೬೯.೮೨ ಲಕ್ಷ ಸಾಲ ವಿತರಿಸಲಾಗಿದೆ.
ಸಭೆಯಲ್ಲಿ ಅಧ್ಯಕ್ಷ ಕುಟ್ಟಂಡ ಕೆ. ಪೂವಯ್ಯ, ಉಪಾಧ್ಯಕ್ಷ ಐನಂಡ ಕೆ. ಅಯ್ಯಣ್ಣ, ನಿರ್ದೇಶಕರುಗಳಾದ ಮೂಕೋಂಡ ಸಿ. ಅಯ್ಯಪ್ಪ, ಮಾಚಿಮಂಡ ಎಂ. ಉತ್ತಪ್ಪ, ಕುಟ್ಟಂಡ ಎಂ. ತಿಮ್ಮಯ್ಯ, ಚೋವಂಡ ಎಂ. ನಾಚಪ್ಪ, ಎನ್.ಎಸ್. ಪ್ರಜೀತ್, ಬಿ.ಬಿ. ಸಂಜೀವ, ಕುಟ್ಟಂಡ ಟಿ. ಪೊನ್ನಮ್ಮ, ಕುಟ್ಟಂಡ ರೀಟಾ ಚಿಣ್ಣಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ.ಕೆ. ರಜನಿ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.