ಕೂಡಿಗೆ, ಆ. ೨೩: ಇಲ್ಲಿಗೆ ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ಅಧ್ಯಕ್ಷರ ನೂತನ ಕಚೇರಿ ಕೊಠಡಿ ಉದ್ಘಾಟನೆ, ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ನೂತನ ಟ್ರಾö್ಯಕ್ಟರ್‌ಗೆ ಚಾಲನೆ ಕಾರ್ಯಕ್ರಮ ನಡೆಯಿತು.

ಪಂಚಾಯಿತಿ ನಿಧಿಯಲ್ಲಿ ಕಸ ವಿಲೇವಾರಿಗೆಂದು ರೂ. ೧೦.೭೫ ಲಕ್ಷ ವೆಚ್ಚದಲ್ಲಿ ಖರೀದಿಸಿದ ಟ್ರಾö್ಯಕ್ಟರ್‌ಗೆ ಗ್ರಾಮದ ನಂಜುAಡೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ ಚಾಲನೆ ನೀಡಿದರು.

ಎಸ್.ಸಿ.ಪಿ, ಟಿ.ಎಸ್.ಪಿ ಯೋಜನೆಯಡಿ ೧೫ ಮಂದಿ ಫಲಾನುಭವಿಗಳಿಗೆ ಸಹಾಯಧನದ ಚೆಕ್ ಹಸ್ತಾಂತರ ಮಾಡಲಾಯಿತು. ಪಂಚಾಯಿತಿ ಅಧ್ಯಕ್ಷರ ನೂತನ ಕಚೇರಿ ಕೊಠಡಿಯನ್ನು ಇದೇ ಸಂದರ್ಭ ಉದ್ಘಾಟಿಸಲಾಯಿತು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್. ವಿಶ್ವ, ೨೦೧೩ರಲ್ಲಿ ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ಸ್ಥಾಪಿಸಲಾಯಿತಾದರೂ ಕಸ ಸಾಗಾಟಕ್ಕೆ ಟ್ರಾö್ಯಕ್ಟರ್ ಒದಗಿಸಲು ಸಲ್ಲಿಸಿದ ಯಾವುದೇ ಬೇಡಿಕೆ ಈಡೇರಲಿಲ್ಲ. ಸತತ ೧೦ ವರ್ಷಗಳ ಕಾಲ ಬಾಡಿಗೆ ಆಧಾರದಲ್ಲಿ ಟ್ರಾö್ಯಕ್ಟರ್ ಪಡೆದು ಕಸ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಇದೀಗ ಸರ್ವ ಸದಸ್ಯರು, ಅಧಿಕಾರಿಗಳ ಸಹಕಾರದಿಂದ ಪಂಚಾಯಿತಿ ನಿಧಿಯಿಂದ ಸ್ವಂತ ಟ್ರಾö್ಯಕ್ಟರ್ ಖರೀದಿಸಲು ಸಾಧ್ಯವಾಗಿದೆ. ಗ್ರಾಮದ ಬಡ ವರ್ಗಕ್ಕೆ ಅಂತ್ಯಕ್ರಿಯೆ ಕಾರ್ಯಗಳಿಗೆ ಕಟ್ಟಿಗೆ ಸಾಗಿಸಲು ಉಚಿತವಾಗಿ ಟ್ರಾö್ಯಕ್ಟರ್ ಸೌಕರ್ಯ ಒದಗಿಸಲು ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ ಎಂದು ತಿಳಿಸಿದರು.

ಈ ಸಂದರ್ಭ ಗ್ರಾ.ಪಂ. ಉಪಾಧ್ಯಕ್ಷೆ ಕುಸುಮ, ಸದಸ್ಯರಾದ ಆರ್.ಕೆ. ಚಂದ್ರ, ಮಾವಾಜಿ ರಕ್ಷಿತ್, ಸಮೀರ, ಮಾಜಿ ಸದಸ್ಯರಾದ ಚಂದ್ರಾವತಿ, ಟಿ.ಕೆ. ಸುಮೇಶ್, ಪಿಡಿಓ ಕಲ್ಪ, ಕಾರ್ಯದರ್ಶಿ ಶೇಷಗಿರಿ ಸೇರಿದಂತೆ ಸಿಬ್ಬಂದಿಗಳು, ಫಲಾನುಭವಿಗಳು, ಗ್ರಾಮಸ್ಥರು ಇದ್ದರು.