ಗೋಣಿಕೊಪ್ಪ ವರದಿ, ಆ. ೨೩: ಬೆಂಗಳೂರಿನ ವಿದ್ಯಾ ಶೀಲ್ಪ್ ಅಕಾಡೆಮಿ ಮೈದಾನದಲ್ಲಿ ಆಯೋಜಿಸಿದ್ದ ಸಿಐಎಸ್ಸಿಇ ಅಂತರ್ಶಾಲಾ ವಲಯ ಮಟ್ಟದ ಹಾಕಿ ಟೂರ್ನಿಯಲ್ಲಿ ೧೭ ವಯೋಮಿತಿಯ ಕಾಲ್ಸ್ ಶಾಲಾ ತಂಡವು ಗೆದ್ದು, ರಾಷ್ಟçಮಟ್ಟಕ್ಕೆ ಪ್ರವೇಶ ಪಡೆದುಕೊಂಡಿತು.
೧೭ ವಯೋಮಿತಿಯ ಕಾಲ್ಸ್ ಶಾಲಾ ತಂಡವು ಬೆಂಗಳೂರು ಸೆಂಟ್ ಜೋಸೆಫ್ ತಂಡವನ್ನು ಫೈನಲ್ ಹಣಾಹಣಿಯಲ್ಲಿ ಗೆದ್ದು ಸಾಧನೆ ಮಾಡಿತು. ೧೯ ವಯೋಮಿತಿಯ ಕಾಲ್ಸ್ ಶಾಲಾ ತಂಡವು ತೃತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಒಲಿಂಪಿಯನ್ ಧನರಾಜ್ ಪಿಳ್ಲೆöÊ ಬಹುಮಾನ ವಿತರಿಸಿದರು. ಅಮ್ಮಂಡೀರ ಕೆ. ಚೇತನ್ ತರಬೇತು ನೀಡಿದ್ದರು. ಶಾಲಾ ಪ್ರಾಂಶುಪಾಲ ಗೌರಮ್ಮ ನಂಜಪ್ಪ ಕ್ರೀಡಾಪಟುಗಳ ಸಾಧನೆಗೆ ಗೌರವಿಸಿದರು.