ಪೊನ್ನಂಪೇಟೆ, ಆ. ೨೩: ಕರ್ನಾಟಕ ರಾಜ್ಯ ಸರ್ಕಾರಿ ಎಸ್ ಸಿ, ಎಸ್.ಟಿ ನೌಕರರ ಸಮನ್ವಯ ಸಮಿತಿಯ ವೀರಾಜಪೇಟೆ - ಪೊನ್ನಂಪೇಟೆ ತಾಲೂಕು ಘಟಕವನ್ನು ನೂತನವಾಗಿ ರಚಿಸಲಾಗಿದ್ದು, ಪೊನ್ನಂಪೇಟೆಯ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ವೀರಾಜಪೇಟೆ - ಪೊನ್ನಂಪೇಟೆ ತಾಲೂಕು ಎಸ್.ಸಿ., ಎಸ್.ಟಿ. ನೌಕರರ ಸಮನ್ವಯ ಸಮಿತಿಯ ಗೌರವ ಅಧ್ಯಕ್ಷರಾಗಿ ಹೆಚ್.ಎಂ. ಮರಿಸ್ವಾಮಿ, ಅಧ್ಯಕ್ಷರಾಗಿ ಟಿ.ಎಸ್. ಮಹೇಶ್, ಉಪಾಧ್ಯಕ್ಷರಾಗಿ ಎಸ್.ಆರ್. ಕೃಷ್ಣಕುಮಾರ್ ಮತ್ತು ಬಿ.ಎಸ್. ರಂಗಸ್ವಾಮಿ, ಪ್ರಧಾನ ಕಾರ್ಯದರ್ಶಿಯಾಗಿ ಪಿ.ಟಿ. ಸುರೇಶ್, ಖಜಾಂಚಿಯಾಗಿ ಪಿ. ಸಂದೇಶ್, ಸಹಕಾರ್ಯದರ್ಶಿಗಳಾಗಿ ಎಸ್.ಟಿ. ಸತೀಶ್, ಹೆಚ್.ಡಿ. ಲಕ್ಷö್ಮಣ್, ನಿತಿನ್, ಸಂಘಟನೆ ಕಾರ್ಯದರ್ಶಿಗಳಾಗಿ ಎಸ್. ಶಿವಶಂಕರ್, ಎಸ್.ಜೆ. ಪರಮೇಶ್ವರ್, ಪಿ. ಕೃಷ್ಣಮೂರ್ತಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಯಾಗಿ ನಾಗಮಣಿ, ನಿರ್ದೇಶಕರು ಗಳಾಗಿ ಗೋವಿಂದರಾಜು, ನೂತನ್ ಕುಮಾರ್, ಚಂದ್ರು, ವೈ.ಸಿ. ಬಾಲಸುಬ್ರಮಣಿ, ಎಂ.ಆರ್. ರಂಗಸ್ವಾಮಿ, ಸಿದ್ದರಾಜುನಾಯಕ, ಬಿ.ಎಂ. ಶಂಕರ್, ಹೆಚ್.ಎನ್. ಪ್ರತಾಪ್, ಜನಾರ್ಧನ್, ರವಿ ಅವರನ್ನು ಆಯ್ಕೆ ಮಾಡಲಾಯಿತು.