ವೀರಾಜಪೇಟೆ, ಆ. ೨೨: ಕೋತೂರು ಗ್ರಾಮದ ಒಕ್ಕಲಿಗರ ಕೆ. ಪ್ರದೀಪ್ ಅವರ ವಿರುದ್ಧ ವೀರಾಜಪೇಟೆ ಅಡಿಷನಲ್ ನ್ಯಾಯಾಲಯದಲ್ಲಿ ರೂ. ೧೫ ಲಕ್ಷ ವಸೂಲಾತಿಗಾಗಿ ಅಮ್ಮತ್ತಿ ಕಾರ್ಮಾಡು ಗ್ರಾಮದ ವಿ.ಸಿ. ಸವಿತ ದಾಖಲಿಸಿದ್ದ ಚೆಕ್ ಬೌನ್ಸ್ ಪ್ರಕರಣವನ್ನು ವಿಚಾರಣೆಗೊಳಪಡಿಸಿದ ನ್ಯಾಯಾಧೀಶರಾದ ಪ್ರದೀಪ್ ಪಟ್ಟೇದಾರ್ ಅವರು ಪ್ರಕರಣವನ್ನು ವಜಾಗೊಳಿಸಿ ಆರೋಪಿಯನ್ನು ಖುಲಾಸೆಗೊಳಿಸಿದ್ದಾರೆ.
ವಿ.ಸಿ. ಸವಿತ ಅವರು ಸೆಪ್ಟೆಂಬರ್ ೨೦೧೭ರಲ್ಲಿ ರೂ. ೧೫ ಲಕ್ಷವನ್ನು ಆರೋಪಿ ವಿ.ಕೆ. ಪ್ರದೀಪ್ ಅವರಿಗೆ ನೀಡಿದ್ದು, ಹಣದ ಬಾಪುö್ತ ಪ್ರದೀಪ್ ಮರುಪಾವತಿಗೆ ವಿಜಯ ಬ್ಯಾಂಕ್ ಕಾನೂರು ಶಾಖೆಯ ಚೆಕ್ ನೀಡಿದ್ದರು. ಆದರೆ, ಖಾತೆಯಲ್ಲಿ ಸಾಕಷ್ಟು ಹಣವಿಲ್ಲವೆಂದು ಚೆಕ್ ಅಮಾನ್ಯಗೊಂಡಿದ್ದು, ಹಣ ವಸೂಲಾತಿಗಾಗಿ ಚೆಕ್ ಬೌನ್ಸ್ ಪ್ರಕರಣವನ್ನು ನ್ಯಾಯಾಲಯದಲ್ಲಿ ಹೂಡಲಾಗಿತ್ತು. ಅಂತಿಮವಾಗಿ ಚೆಕ್ ಅಮಾನ್ಯ ಪ್ರಕರಣವನ್ನು ವಜಾಗೊಳಿಸಿ, ಆರೋಪಿಯನ್ನು ದೋಷಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ. ಆರೋಪಿಯ ಪರವಾಗಿ ವಕೀಲ ಡಿ.ಸಿ. ಧ್ರುವ ವಾದಿಸಿದ್ದರು.