ನಾಗ ದೇವನು ಸಂಪೂರ್ಣ ಬ್ರಹ್ಮಾಂಡದ ಕುಂಡಲಿಗಿಯಾಗಿದ್ದಾನೆ. ಪಂಚಪ್ರಾಣವೆAದರೆ ಪಂಚಭೌತಿಕ ತತ್ವದಿಂದ ಉಂಟಾದ ಶರೀರದ ಸೂಕ್ಷö್ಮರೂಪವಾಗಿದೆ. ಸ್ಥೂಲ ದೇಹದಲ್ಲಿ ಚಲಿಸುವ ಪ್ರಾಣವಾಯು ಪಂಚ ಪ್ರಾಣದಿಂದ ಬರುತ್ತದೆ.

ನಾಗರ ಪಂಚಮಿಯAದು ಸರ್ಪಕುಲಗಳ ಒಗ್ಗಟ್ಟಿನ ಪ್ರಾರ್ಥನೆ - ರಕ್ಷಣೆ ಇವೆರಡು ಫಲಿಸಿತೆಂದು ಪುರಾಣಗಳಲ್ಲಿ ಕಂಡು ಬರುತ್ತದೆ. ಕಾರಣ ಸರ್ಪಗಳು ಮೊದಲು ತುಂಬಾ ದುಷ್ಟತನದಿಂದ ಕೂಡಿದ್ದು, ಜನರಿಗೆ ತೊಂದರೆಯನ್ನುAಟುಮಾಡುತ್ತಿದ್ದವು. ದೇವತೆಗಳು ಇದನ್ನರಿತು ಬ್ರಹ್ಮನ ಬಳಿ ವಿನಂತಿಸಿದರು. ಸರ್ಪಗಳು ತಮ್ಮ ತಾಯಿ ಕದ್ರುವಿನ ಶಾಪದಿಂದಲೇ ವಿನಾಶ ಹೊಂದುವವು ಎಂದು ಬ್ರಹ್ಮನು ಸೂಚಿಸಿದನು. ಸರ್ಪಗಳೆಲ್ಲಾ ಒಟ್ಟುಗೂಡಿ ಬ್ರಹ್ಮನ ಶಾಪವನ್ನು ಹಿಂತಿರುಗಿ ಪಡೆಯುವಂತೆ ಬೇಡಿಕೊಂಡವು. ಅವರ ಅಪರಾಧ ಪ್ರಜ್ಞೆ ಪಶ್ಚಾತ್ತಾಪಗಳನ್ನು ಮನಗಂಡ ಬ್ರಹ್ಮನು ಆಸ್ತಿಕನೆಂಬುವವನು ಸರ್ಪಕುಲ ರಕ್ಷಕನಾಗಿ ನಿಲ್ಲುತ್ತಾನೆ ಎಂದು ನುಡಿದನು. ಅಲ್ಲದೆ ಎಲ್ಲಾ ಕಡೆ ವಾಸಿಸಿದರೂ ಕೂಡಾ ನೋಯದೇ ಪರರನ್ನು ಕಚ್ಚಬಾರದೆಂದೂ ಆದೇಶಿಸಿದನು. ಹೀಗಾಗಿ ಸರ್ಪಕುಲಗಳ ಒಗ್ಗಟ್ಟಿನ ಪ್ರಾರ್ಥನೆ - ರಕ್ಷಣೆ ಇವೆರಡೂ ಫಲಿಸಿದ್ದು ನಾಗರಪಂಚಮಿಯAದು.

ಈ ದಿನ ಎಲ್ಲಾ ಸ್ತಿçÃ-ಪುರುಷರೂ ಅಭ್ಯಂಗನ ಸ್ನಾನ ಮಾಡಿ ನಾಗದೇವರಿಗೆ ಹಾಲು-ಹಣ್ಣುಗಳನ್ನು ಅರ್ಪಿಸಿ ಪೂಜಿಸಿದರೆ ಒಳ್ಳೆಯದೆಂಬುದಾಗಿ ಪುರಾಣದಲ್ಲಿ ಹೇಳಲ್ಪಟ್ಟಿದೆ. ಕ್ಷೀರಾಭಿಷೇಕ ಸುಬ್ರಹ್ಮಣ್ಯ ದೇವರಿಗೆ ಬಹು ಪ್ರಿಯವಾದದ್ದು. ನಾಗರ ಪಂಚಮಿಯAದು ಕ್ಷೀರಾಭಿಷೇಕದಿಂದ ಪೂಜಿಸಿ, ಫಲವನ್ನು ಶೇಷಾಂತರ್ಗತ ಸಂಕಷರ್ಣನಿಗೆ ಅರ್ಪಿಸಬೇಕು ಎಂಬ ಪದ್ಧತಿ ಅನೇಕರಲ್ಲಿದೆ.

ಮಹಾತ್ಮೆ

ಶೇಷನಾಗನು ಪಾತಾಳದಲ್ಲಿ ವಾಸಿಸುತ್ತಾನೆ. ಅವನು ತನ್ನ ಹೆಡೆಯ ಮೇಲೆ ಪೃಥ್ವಿಯನ್ನು ಧರಿಸಿದ್ದಾನೆ. ಅವನಿಗೆ ಸಹಸ್ರ ಹೆಡೆಗಳಿವೆ. ಅದರ ಮೇಲೆ ಒಂದೊAದು ಮಾಣಿಕ್ಯವಿದೆ. ಪ್ರತಿಯೊಂದು ಕಲ್ಪದ ಅಂತ್ಯದಲ್ಲಿ ಶ್ರೀ ಮಹಾವಿಷ್ಣು ಮಹಾಸಾಗರದಲ್ಲಿ ಶೇಷಾಸನದ ಮೇಲೆ ಪವಡಿಸುತ್ತಾನೆ.

ತ್ರೇತಾಯುಗದಲ್ಲಿ ಶ್ರೀ ವಿಷ್ಣು ರಾಮನ ಅವತಾರವನ್ನು ಎತ್ತಿದಾಗ ಶೇಷನು ಲಕ್ಷö್ಮಣನ ಅವತಾರವನ್ನು ಹಾಗೂ ದ್ವಾಪರ ಯುಗದಲ್ಲಿ ಕೃಷ್ಣನ ಅವತಾರವಾದಾಗ ಶೇಷನು ಬಲರಾಮನಾಗಿದ್ದನು ಎಂದು ಪುರಾಣದಲ್ಲಿ ತಿಳಿಸಿದೆ. ಶ್ರೀ ಕೃಷ್ಣನು ಯಮುನಾ ನದಿಯಲ್ಲಿ ಕಾಳಿಂಗ ಮರ್ದನ ಮಾಡಿದ ದಿನವೇ ಶ್ರಾವಣ ಶುಕ್ಲ ಪಂಚಮಿಯAದು. ನಾಗಗಳಲ್ಲಿ ಶ್ರೇಷ್ಠನಾದ ಅನಂತನೇ ನಾನು ಎಂದು ಗೀತೆಯಲ್ಲಿ (೧೦-೨೯) ಶ್ರೀ ಕೃಷ್ಣ ತನ್ನ ವಿಭೂತಿಯನ್ನು ಹೇಳುತ್ತಾನೆ.

- ಗೌರಮ್ಮ ಮಾದಮ್ಮಯ್ಯ, ಮಡಿಕೇರಿ.