ಇAದು ನಾಗರ ಪಂಚಮಿ

ಶ್ರಾವಣ ಮಾಸದ ಶುಕ್ಲಪಕ್ಷದ ಪಂಚಮಿ ದಿನ ‘ನಾಗರ ಪಂಚಮಿ’ ಹಬ್ಬ ಆಚರಣೆ ನಡೆಯಲಿದೆ. ಅಮಾವಾಸ್ಯೆ ಕಳೆದು ಐದು ದಿವಸಗಳ ನಂತರ ಬರುವ ವಿಶೇಷ ಹಬ್ಬ ನಾಗರ ಪಂಚಮಿ. ನಾಗರ ಪಂಚಮಿ ಎಂದರೆ ಒಡಹುಟ್ಟಿದವರ ಹಬ್ಬ. ಹೆಣ್ಣು ಮಕ್ಕಳ ಹಬ್ಬ. ನಾಗಪ್ಪನಿಗೆ ಹಾಲೆರೆದು ಆಚರಿಸುವ ಹಬ್ಬ. ಗರುಡ ಪಂಚಮಿ ಎಂದು ಕರೆಯುತ್ತಾರೆ. ನಾಡಿನಾದ್ಯಂತ ಅಂದಿನ ದಿವಸ ಬೆಳಿಗ್ಗೆ ಎದ್ದು ಶುದ್ಧ ಸ್ನಾನ ಮಾಡಿ, ಮಡಿಯಿಂದ, ಶ್ರದ್ಧಾಭಕ್ತಿಯ ಮೂಲಕ ಉಪವಾಸ ವ್ರತದೊಂದಿಗೆ ನಾಗರ ಕಲ್ಲಿಗೆ, ಹುತ್ತಗಳಿಗೆ ಹಾಲೆರೆದು ಪೂಜಿಸುವ ಹಬ್ಬ. ಈ ಹಬ್ಬವು ತನ್ನದೇ ಆದ ಪೌರಾಣಿಕ ಹಿನ್ನೆಲೆ, ಆಚರಣೆಯನ್ನು ಪಡೆದುಕೊಂಡಿದೆ.

ಹಿನ್ನೆಲೆ: ಹಿಂದಿನ ಕಾಲದಲ್ಲಿ ಒಬ್ಬ ಹುಡುಗ ತನ್ನ ಸಹೋದರಿಯೊಂದಿಗೆ ವಾಸವಾಗಿದ್ದ. ಸಹೋದರಿ ನಾಗದೇವತೆಯ ಭಕ್ತೆಯಾಗಿದ್ದಳು. ಒಂದು ದಿವಸ ನಾಗಪೂಜೆಗೆಂದು ಕೇದಗೆ ಹೂ ತರಲು ಸಹೋದರನಿಗೆ ಹೇಳಿದಳು. ಕೇದಗೆ ಹೂ ಹಾವುಗಳಿಗೆ ಪ್ರಿಯವಾದದ್ದು. ತಂಗಿಯ ಮಾತಿನಂತೆ ಅಣ್ಣ ಕಾಡಿನೊಳಗೆ ತೆರಳಿದ. ಆ ಸಂದರ್ಭ ಹಾವೊಂದು ಕಚ್ಚಿ ಅಣ್ಣನನ್ನು ಸಾಯಿಸಿತು. ಅಣ್ಣನ ಸಾವನ್ನು ಕಂಡು ತಂಗಿ ದುಃಖದಲ್ಲಿ ಮುಳುಗಿದಳು. ಅವಳು ನಾಗದೇವತೆಯನ್ನು ಪ್ರಾರ್ಥಿಸಿ, ಅಣ್ಣನನ್ನು ಮರಳಿ ಬರುವಂತೆ ಕೇಳಿಕೊಂಡಳು. ನಾಗದೇವತೆ ಪ್ರತ್ಯಕ್ಷಗೊಂಡು ಸತ್ತ ಅಣ್ಣನ ಬೆನ್ನ ಮೇಲೆ ಹಚ್ಚಲು ಮಣ್ಣಿನ ಪುಡಿ ನೀಡಿ ಮಾಯವಾಯಿತು. ನಾಗದೇವತೆ ಹೇಳಿದಂತೆ ತಂಗಿ ಮಾಡಿದಳು. ಕ್ಷಣಮಾತ್ರದಲ್ಲಿ ಅಣ್ಣನಿಗೆ ಜೀವಬಂದು ತಂಗಿಯ ಆಸೆಯೊಂದಿಗೆ ಮನೆಗೆ ಬಂದರು. ಅಂದಿನ ದಿನವನ್ನು ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ದಿನವನ್ನಾಗಿ ಆಚರಿಸಲಾಗುತ್ತದೆ. ಅದುವೇ ನಾಗರ ಪಂಚಮಿ ದಿನ. ಅಂದಿನ ದಿವಸ ಮನೆಯಲ್ಲಿ ಕುಟುಂಬದವರು ಸ್ನಾನ ಮಾಡಿ, ಮಡಿವಸ್ತç (ಕೆಂಪು ಬಣ್ಣದ ವಸ್ತç ಉತ್ತಮ)ವನ್ನು ಧರಿಸಿ, ಉಪವಾಸ ವ್ರತದೊಂದಿಗೆ ನಿತ್ಯ ಪೂಜಾ ಸ್ಥಳದಲ್ಲಿ ಬೆಳ್ಳಿ, ತಾಮ್ರ, ಹಿತ್ತಾಳೆ ತಟ್ಟೆಯಲ್ಲಿ ನಾಗನ ಚಿತ್ರ, ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ಅಕ್ಕಿ ಹಿಟ್ಟಿನಿಂದ ಅಥವಾ ರಂಗೋಲಿಯಿAದ ಹಾವಿನ ಚಿತ್ರಬಿಡಿಸಿ ಪೂಜಿಸುತ್ತಾರೆ.

ವಿವಿಧ ಹೂವುಗಳಿಂದ ವಿಶೇಷ ನಾಗಪ್ರಿಯವಾದ ಕೇದಗೆ ಹೂವನ್ನು ಮುಡಿಸಿ, ಹಣ್ಣು-ಹಂಪಲು, ಹಾಲು, ಸಿಂಧೂರ, ಶ್ರೀಗಂಧ, ಅರಿಶಿನ, ಬಿಲ್ವಪತ್ರೆ, ಕುಂಕುಮ, ಆಭರಣಗಳನ್ನು ತೊಡಿಸಿ ಸಿಂಗರಿಸಿ ವೀಳ್ಯ ದೆಲೆಯಿಟ್ಟು, ಧೂಪ-ದೀಪದೊಂದಿಗೆ ಆರತಿ ಮಾಡಿ ಧ್ಯಾನಿಸುತ್ತಾರೆ. ತುಪ್ಪದ ದೀಪ ಹಚ್ಚಿದರೆ ಒಳಿತು. ಉಪವಾಸದ ಸಮಯದಲ್ಲಿ ಲಘು ಆಹಾರವಾದ ಹಣ್ಣು-ಹಂಪಲು, ಹಾಲು ಸೇವಿಸಬಹುದು. ಸಂಜೆ ನಾಗದೇವತೆಗೆ ದೀಪ ಹಚ್ಚಿ ಪೂಜಿಸುತ್ತಾರೆ. ಪ್ರಾರ್ಥನೆ ಬಳಿಕ ಉಪವಾಸ ಅಂತ್ಯಗೊಳಿಸುತ್ತಾರೆ. ಕರಿ ಎಳ್ಳಿನಿಂದ ಮಾಡಿದ ಉಂಡೆ ಚಿಗಡಿ, ಅಕ್ಕಪುಡಿಯೊಂದಿಗೆ ಬೆಲ್ಲವನ್ನು ಸೇರಿಸಿ ಮಾಡಿದ ತಂಬಿಟ್ಟನ್ನು ನಾಗಪ್ಪನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ. ಶಿವನ ಕುತ್ತಿಗೆಯ ಸುತ್ತಲಿನ ಹಾವನ್ನು ವಾಸುಕಿಯೆಂದೂ, ವಿಷ್ಣುವಿನ ಮಲಗುವ ಹಾಸಿಗೆ ಆದಿಶೇಷನೆಂದು ಹೇಳುತ್ತಾರೆ.

- ಕೂಡಂಡ ಪವಿತ್ರ ಕಾವೇರಮ್ಮ, ಹೊದ್ದೂರು. ಮೊ. ೯೬೮೬೭೮೭೯೦೪.