ನಾಪೋಕ್ಲು, ಆ. ೨೦: ಸಮೀಪದ ಕಕ್ಕುಂದಕಾಡು ಶ್ರೀ ಲಕ್ಷಿö್ಮ ವೆಂಕಟೇಶ್ವರ ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜೆ ಭಕ್ತಾದಿಗಳ ಸಂಗಮದೊAದಿಗೆ ಶ್ರದ್ದಾಭಕ್ತಿಯಿಂದ ಸಂಪನ್ನಗೊAಡಿತ್ತು.
ಪ್ರತಿವರ್ಷದAತೆ ಶ್ರಾವಣ ಶನಿವಾರ ಪ್ರಯುಕ್ತ ದೇವಾಲಯದಲ್ಲಿ ಬೆಳಿಗ್ಗೆ ಏಳು ಗಂಟೆಗೆ ಅಭಿಷೇಕ, ೧೧ ಗಂಟೆಯಿAದ ೧೨ ಗಂಟೆವರೆಗೆ ನೆರೆದ ಭಕ್ತಾದಿಗಳು ತಮ್ಮ ಭಕ್ತಿ ಅನುಸಾರ ವಿವಿಧ ಪೂಜಾ ಕೈಂಕರ್ಯಗಳು ಸೇವೆಯ ,ಸಂಕಲ್ಪ ನೆರವೇರಿಸಿ ಭಕ್ತಿ ಪರವಶರಾದರು. ಮಧ್ಯಾಹ್ನ ೧೨:೩೦ ಕ್ಕೆ ವೆಂಕಟೇಶ್ವರನಿಗೆ ವಿಶೇಷ ಮಹಾಪೂಜೆ, ಮಹಾ ಮಂಗಳಾರತಿಯ ಕಾರ್ಯಕ್ರಮಗಳು ಶ್ರದ್ದಾಭಕ್ತಿಯಿಂದ ನೆರವೇರಿಸಲಾಯಿತು. ತೀರ್ಥ ಪ್ರಸಾದ ವಿತರಿಸಿದ ಬಳಿಕ ನೆರೆದಿದ್ದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನೆರವೇರಿತು. ದೇವಸ್ಥಾನದಲ್ಲಿ ಶ್ರಾವಣ ಶನಿವಾರ ಪೂಜಾ ಕಾರ್ಯಕ್ರಮಗಳು ಸೆಪ್ಟೆಂಬರ್ ಒಂಬತ್ತರವರೆಗೆ ನಡೆಯಲಿವೆ.
ಈ ಸಂದರ್ಭ ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷ ಮಂಜಯ್ಯ ಟಿ.ಎಸ್, ಕಾರ್ಯಾಧ್ಯಕ್ಷ ರಮೇಶ್ ಟಿ. ಯನ್, ಕಾರ್ಯದರ್ಶಿ ಸುಜಿಕುಮಾರ್ ಟಿ.ಎ ಹಾಗೂ ಹಿರಿಯರಾದ ಶ್ರೀನಿವಾಸ ಟಿ.ವಿ, ಆನಂದಸ್ವಾಮಿ ಟಿ.ಎ, ರಾಮಯ್ಯ ಪಿ ಎಂ, ಅಪ್ಪಸ್ವಾಮಿ ಟಿ.ಆರ್, ಭವಾನಿ ಟಿ.ಕೆ ಹಾಗೂ ಅಡಳಿತ ಮಂಡಳಿ ನಿರ್ದೇಶಕರು ಇತರರು ಹಾಜರಿದ್ದರು. ದೇವಾಲಯದ ಮುಖ್ಯ ಆರ್ಚಕ ಸುಧೀರ ಅವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು.
--ದುಗ್ಗಳ