ಜಾಗತಿಕ ಮಟ್ಟದಲ್ಲಿ ಹಲವು ಆಚರಣೆಗಳು, ಹಬ್ಬ ಹರಿದಿನಗಳು ಮತ್ತು ವಿವಿಧ ಕ್ಷೇತ್ರದ ಸಾಧಕರ ಮಹಾನ್ ವ್ಯಕ್ತಿಗಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಭಾರತದಲ್ಲೂ ಆಚರಣೆಯ ಜೊತೆ ಆ ದಿನವನ್ನು ರಜಾ ದಿನವಾಗಿ ಘೋಷಿಸಲಾಗುತ್ತಿದೆ. ಯುವ ಚೈತನ್ಯವೇ ಉಕ್ಕಿ ಹರಿಯುತ್ತಿರುವಾಗ ಹಿರಿಯ ನಾಗರಿಕರ ದಿನಾಚರಣೆಯನ್ನು ವಿಶ್ವಮಟ್ಟದಲ್ಲಿ ಆಚರಿಸುವುದರ ಮೂಲಕ ಆ ಒಂದು ದಿನವಾದರೂ ಅವರಿಗಾಗಿ ಮೀಸಲಿಡಲಾಗುತ್ತದೆ. ೬೦ ವರ್ಷ ವಯಸ್ಸನ್ನು ದಾಟಿದ ಪುರುಷ-ಮಹಿಳೆಯರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸಲಾಗುತ್ತದೆ. ದೇಶದಲ್ಲಿರುವ ಸರಕಾರಿ, ಅರೆ ಸರಕಾರಿ, ಕೆಲವು ಖಾಸಗಿ ಹುದ್ದೆಗಳಿಂದ ನಿವೃತ್ತಿಯನ್ನು ನೀಡಲಾಗುತ್ತದೆ.

ಈ ಮಹತ್ವದ ದಿನವನ್ನು ಅಮೇರಿಕಾದ ಅಂದಿನ ಅಧ್ಯಕ್ಷ ರೋನಾಲ್ಡ್ ರೇಗನ್‌ರವರು ೧೯೮೮ ರಲ್ಲಿ ಪ್ರಾರಂಭಿಸಿದರು. ಉತ್ಸಾಹಿಗಳಾಗಿ ತಮ್ಮ ಜೀವನವನ್ನು ಕುಟುಂಬ ನಿರ್ವಹಣೆಗಾಗಿ ವಿವಿಧ ರೀತಿಯಲ್ಲಿ ದುಡಿದು, ದಣಿದ ದುಡಿಯುವ ದೇಹಕ್ಕೆ ನಿವೃತ್ತಿ ಎಂದು, ಮಾಗಿದ ಮನಸ್ಸುಗಳು ವಿಶ್ರಾಂತಿಯನ್ನು ಬಯಸುವುದೇ ಹಿರಿಯರು. ಆದರೂ ಕೆಲವರು ನಿವೃತ್ತಿ ಬಯಸುವುದೇ ಇಲ್ಲ ಅನಿವಾರ್ಯ ಕಾರಣದಿಂದ ದುಡಿಯುತ್ತಾರೆ. ಕೊನೆಯ ಉಸಿರು ಇರುವವರೆಗೂ ದುಡಿಮೆಗಾಗಿ ಜೀವನವನ್ನು ಕೊನೆಗಾಣಿಸುತ್ತಾರೆ.

ವೃದ್ಧಾಪ್ಯದಲ್ಲಿ ಆರೋಗ್ಯ ಸಮಸ್ಯೆಗಳು

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಶಕ್ತಿ ಕುಂದುತ್ತಾ ಲವಲವಿಕೆ ಕಡಿಮೆಯಾಗುತ್ತದೆ. ಆರೋಗ್ಯ ಸಮಸ್ಯೆಗಳು ಪ್ರಾರಂಭಗೊಳ್ಳುತ್ತದೆ. ಸಂಸಾರಸ್ಥರಾದರೆ ತನ್ನ ಪತಿ-ಪತ್ನಿಯವರಿದ್ದರೇ ಕೆಲವನ್ನು ಹಂಚಿಕೊಳ್ಳುತ್ತಾ ಸಮಾಧಾನ ಪಟ್ಟುಕೊಳ್ಳುತ್ತಾರೆ. ದಿನ ಕಳೆದಂತೆ ವಯಸ್ಸಾಗುತ್ತಾ ದೃಷ್ಟಿಯು ಕಡಿಮೆಯಾಗುತ್ತಾ, ಶ್ರವಣದೋಷ ಕೂಡ ಕಾಣಿಸಿಕೊಳ್ಳುತ್ತದೆ. ದಂಪತಿಗಳಲ್ಲಿ ಯಾರಾದರೂ ಅಗಲಿದರೆ, ಮುಂದೆ ಒಂಟಿತನ ಕಾಡುತ್ತಿರುತ್ತದೆ. ಮನಸ್ಸು ಘಾಸಿಕೊಳ್ಳುತ್ತದೆ. ಮೆದುಳು ಶಕ್ತಿಯನ್ನು ಕಳೆದುಕೊಳ್ಳುತ್ತಾ, ನಕಾರಾತ್ಮಕ ಭಾವನೆಗಳು ಮನಸ್ಸನ್ನು ಆವರಿಸುತ್ತದೆ. ಆಧುನಿಕ ಭರಾಟೆಯಲ್ಲಿ ಕಿರಿಯರು ತಮ್ಮದೇ ರೀತಿಯಲ್ಲಿ ಸಮಾಜದಲ್ಲಿ ಬದುಕನ್ನು ರೂಪಿಸಿಕೊಳ್ಳುತ್ತಾರೆ. ಅದೇ ರೀತಿಯಲ್ಲಿ ಸಣ್ಣ-ಸಣ್ಣ ಕುಟುಂಬಗಳು ಹೆಚ್ಚಿರುವುದು ಈ ಸಮಾಜದಲ್ಲಿ, ಹಿಂದಿನAತೆ ತುಂಬು ಅವಿಭಕ್ತ ಕುಟುಂಬಗಳು ಅಪರೂಪವಾಗಿದೆ. ಪಾಶ್ಚಾö್ಯತೀಕರಣ ಮತ್ತು ಸಬಲೀಕರಣ ಕೂಡ ಒಂದು ಕಾರಣವಾಗಿದೆ. ಉದ್ಯೋಗಕ್ಕಾಗಿ ಮಕ್ಕಳು ಹೊರದೇಶಕ್ಕೆ ಉದ್ಯೋಗಕ್ಕಾಗಿ ತೆರಳಿ ಕೆಲವೊಮ್ಮೆ ಅಲ್ಲಿಯೇ ತಮ್ಮ ಜೀವನವನ್ನು ಸಾಗಿಸುವವರು ಈ ಸಮಾಜದಲ್ಲಿ ಕಾಣಸಿಗುತ್ತಾರೆ. ಆ ಕಾರಣದಿಂದ ಹಿರಿಯ ಜೀವಗಳು ತಮ್ಮ ಊರಿನಲ್ಲಿಯೇ ಉಳಿದು ತಮ್ಮ ಜೀವನವನ್ನು ಸಾಗಿಸುತ್ತಾ, ಮಕ್ಕಳ ಬಗ್ಗೆ ಕೊರಗುತ್ತಾರೆ. ವಿಶೇಷವಾಗಿ ಮಕ್ಕಳನ್ನು ಅವಲಂಬಿತರಾದರೆ ಮುಗಿದೇ ಹೋಯಿತು. ಹೆತ್ತವರನ್ನು ವಯಸ್ಸಾದಂತೆ ಯಾವುದಾದರೂ ಆಶ್ರಮಗಳಿಗೆ ಸೇರಿಸಿರುವ ಸಂದರ್ಭಗಳು ಬಹಳಷ್ಷು ಇವೆ. ನಮಗೆ ಜನ್ಮ ನೀಡಿದವರು, ನಮಗಾಗಿ ಜೀವನವನ್ನು ಸವೆಸಿದವರು ಅನ್ನೋ ಭಾವನೆಗಳು ಹೊರಟು ಹೋಗಿ, ನಾನು ಎಂಬ ಭಾವನೆ ತೆರೆದಿಟ್ಟುಕೊಳ್ಳುತ್ತದೆ. ಖಿನ್ನತೆಯಿಂದ ಹೊರಬರಲಾರದೇ ಹಲವರು ಬದುಕು ಸಾಕೆಂದು ಆತ್ಮಹತ್ಯೆ ಹಾದಿ ಹಿಡಿದಿದ್ದನ್ನು ನಾವು ಕಂಡಿರುತ್ತೇವೆ. ಕೆಲವರು ದೈನಂದಿನ ನಡವಳಿಕೆಯಲ್ಲಿ ಏರುಪೇರನ್ನು ಅನುಭವಿಸುತ್ತಾರೆ. ವೃದ್ಧಾಪ್ಯವೆನ್ನುವುದು ಸಹಜವಾದ ಪ್ರಕ್ರಿಯೆ, ಕಿರಿಯರಾಗಿದ್ದವರೂ ಮುಂದೆ ಹಿರಿಯರಾಗುತ್ತಾರೆನ್ನುವುದನ್ನು ಯಾರೂ ಮರೆಯಬಾರದು. ಇಂದು ನನಗೆ ನಾಳೆ ನಿನಗೆ ಇದು ನಿಜ.

ಹವ್ಯಾಸಗಳು

ಏಕಾಂತವನ್ನು ಹೋಗಲಾಡಿಸಲು ಒಳ್ಳೆಯ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು ಉತ್ತಮ. ಮುಂಜಾನೆ ಕೆಲವು ಸಮಯ ನಡಿಗೆಯಲ್ಲಿ ತೊಡಗಿಸಿಕೊಳ್ಳುವುದು. ಲಘ ವ್ಯಾಯಾಮಗಳನ್ನು ಮಾಡುತ್ತಾ ದೇಹವನ್ನು ದಂಡಿಸಿಕೊಳ್ಳುವುದು. ಸಮೀಪದ ಆಟದ ಮೈದಾನ, ಪಾರ್ಕ್ಗಳಲ್ಲಿ ಕುಳಿತು ಸ್ನೇಹಿತರೊಡನೆ ಹರಟೆ ಹೊಡೆಯುವುದು, ಹಳೆ ನೆನಪುಗಳನ್ನು ಮೆಲುಕು ಹಾಕಿ ಅವರೊಡನೆ ಹಂಚಿಕೊಳ್ಳುವುದು. ಸಮೀಪದ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದು. ಯಾವುದಾದರೂ ಸಂಘ-ಸAಸ್ಥೆಗಳಲ್ಲಿ ಗುರುತಿಸಿಕೊಳ್ಳುವುದು. ಕಾರ್ಯಕ್ರಮಗಳಲ್ಲಿ ತೊಡಗುತ್ತಾ, ಸಕ್ರಿಯವಾಗಿ ಭಾಗಿಯಾಗುವುದು. ಕೂಡಿಟ್ಟ ಹಣವಿದ್ದರೆ ಮನೆಯವರೊಡನೆ ದೂರದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳಗಳು, ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು. ಈ ಸಮಯದಲ್ಲಿ ಸರಿಯಾದ ಮಾರ್ಗದರ್ಶನ, ರೂಪುರೇಷೆಗಳನ್ನು ಮೊದಲೇ ಸಿದ್ಧಪಡಿಸಿ, ಎಷ್ಟು ದಿನಗಳ ಪ್ರಯಾಣ, ಹೇಗೆ ಮತ್ತು ತಗಲುವ ಖರ್ಚು ಮುಂತಾದ ಮುಂಜಾಗ್ರತೆಯನ್ನು, ಮಾಹಿತಿಯನ್ನು ಸರಿಯಾಗಿ ತಿಳಿದುಕೊಳ್ಳುವುದು. ತಮಗಿಷ್ಟವಾದ ಸಂಗೀತವನ್ನು ಆಲಿಸುವುದು. ಪತ್ರಿಕೆ ಪುಸ್ತಕಗಳನ್ನು ಓದುವ ಹವ್ಯಾಸವನ್ನು, ಸಾಧ್ಯವಾದರೆ ಇಷ್ಟವಾದ ಕಥೆಗಳನ್ನು ಬರೆಯುವುದು. ತಾವು ಎಲ್ಲರಲ್ಲಿಯೂ ಬೆರೆತರೆ ದಿನವಿಡೀ ಉಲ್ಲಾಸ ಭರಿತರಾಗಿ ಜೀವನವನ್ನು ಕಳೆಯಬಹುದು.

ಹಿರಿಯರು ಸಮಾಜಕ್ಕೆ ಬೇಕೇಬೇಕು. ಸಂಪ್ರದಾಯಗಳನ್ನು ಬೆಳೆಸಿಕೊಂಡು, ಉಳಿಸಿಕೊಂಡು ಬಂದಿರುವ ಹಿರಿಯರಿಗೆ ಎಲ್ಲರೂ ಒಟ್ಟಾಗಿ ನಮಸ್ಕರಿಸೋಣವೇ?

- ಅಂತೋಣಿ ಡಿಸೋಜ, ನಿವೃತ್ತ ಪೊಲೀಸ್ ಅಧಿಕಾರಿ, ಅಥ್ಲೆಟಿಕ್ಸ್ ತರಬೇತುದಾರರು, ಚೌಡ್ಲು ಗ್ರಾಮ, ಸೋಮವಾರಪೇಟೆ. ಮೊ. ೯೪೪೮೪೪೮೬೦೩.