ಮಡಿಕೇರಿ, ಆ. ೨೦: ಮಡಿಕೇರಿ ರೋಟರಿ ವುಡ್ಸ್ ಮತ್ತು ಭಾರತೀಯ ರೆಡ್‌ಕ್ರಾಸ್‌ನ ಕೊಡಗು ಘಟಕದ ಸಹಯೋಗದಲ್ಲಿ ನಗರದ ರೆಡ್ ಕ್ರಾಸ್ ಭವನದಲ್ಲಿ ಆಟೋ ಚಾಲಕರು ಹಾಗೂ ಮಾಲೀಕರಾಗಿ, ಆರೋಗ್ಯ ಶಿಬಿರ ಜರುಗಿತು.
ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗರಾಜ್ ಆಚಾರ್ ಉದ್ಘಾಟಿಸಿ, ಮಾತನಾಡಿ, ದಿನದಲ್ಲಿ ಹತ್ತರಿಂದ ಹನ್ನೆರಡು ಗಂಟೆ ದುಡಿಯುವ ಆಟೋ ಚಾಲಕರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕು. ದೈಹಿಕ ಚಟುವಟಿಕೆಗಳೂ ಈ ಸಂದರ್ಭದಲ್ಲಿ ಅನಿವಾರ್ಯ. ಕನಿಷ್ಟ ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ಕೊಂಡರೆ ಸೂಕ್ತ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ರೋಟರಿ ವಲಯ ೬ ರ ಸಹಾಯಕ ಗವರ್ನರ್ ದೇವಣಿರ ತಿಲಕ್ ಪೊನ್ನಪ್ಪ , ರೋಗಪೀಡಿತರು ಮಾತ್ರ ತಪಾಸಣೆಗೆ ಒಳಗಾಗುವುದು ಎಂಬುದು ತಪ್ಪು ಅಭಿಪ್ರಾಯ. ಆಗಾಗ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳ ಬಹುದು ಎಂದರು.
ಜಿಲ್ಲಾ ರೆಡ್ ಕ್ರಾಸ್ ಸಭಾಪತಿ ಬಿ.ಕೆ. ರವೀಂದ್ರ ರೈ ಮಾತನಾಡಿ, ಈ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಿಂದ ಎಲ್ಲರಿಗೂ ಅನುಕೂಲ. ವರ್ಷದಲ್ಲಿ ನಾಲ್ಕೆöÊದು ಬಾರಿ ಈ ಶಿಬಿರ ನಡೆಯುವಂತಾಗಲಿ ಎಂದು ಆಶಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಮಾತನಾಡಿ, ರೋಟರಿಯ ಜಿಲ್ಲಾ ಯೋಜನೆಗಳಲ್ಲಿ ಒಂದಾಗಿರುವ ಆರೋಗ್ಯಸಿರಿ ಅಡಿಯಲ್ಲಿ ಈ ಉಚಿತ ಆರೋಗ್ಯ ಶಿಬಿರ ನಡೆಯುತ್ತಿದೆ. ಜನರಿಗೆ ಪ್ರಯೋಜನಕಾರಿ ಸೇವಾವೃತ್ತಿ ನಿರ್ವಹಿಸುತ್ತಿರುವ ಆಟೋ ಚಾಲಕರು, ಮಾಲೀಕರು, ಕುಟುಂಬ ವರ್ಗದವರಿಗಾಗಿ ಶಿಬಿರ ರೀತಿಯ ಆರೋಗ್ಯ ತಪಾಸಣಾ ಶಿಬಿರಗಳಿಂದ ಎಲ್ಲರಿಗೂ ಅನುಕೂಲ. ವರ್ಷದಲ್ಲಿ ನಾಲ್ಕೆöÊದು ಬಾರಿ ಈ ಶಿಬಿರ ನಡೆಯುವಂತಾಗಲಿ ಎಂದು ಆಶಿಸಿದರು.
ರೋಟರಿ ವುಡ್ಸ್ ಅಧ್ಯಕ್ಷ ಕೆ. ವಸಂತ್ ಕುಮಾರ್ ಮಾತನಾಡಿ, ರೋಟರಿಯ ಜಿಲ್ಲಾ ಯೋಜನೆಗಳಲ್ಲಿ ಒಂದಾಗಿರುವ ಆರೋಗ್ಯಸಿರಿ ಅಡಿಯಲ್ಲಿ ಈ ಉಚಿತ ಆರೋಗ್ಯ ಶಿಬಿರ ನಡೆಯುತ್ತಿದೆ. ಜನರಿಗೆ ಪ್ರಯೋಜನಕಾರಿ ಸೇವಾವೃತ್ತಿ ನಿರ್ವಹಿಸುತ್ತಿರುವ ಆಟೋ ಚಾಲಕರು, ಮಾಲೀಕರು, ಕುಟುಂಬ ವರ್ಗದವರಿಗಾಗಿ ಶಿಬಿರ ಆಯೋಜಿಸಲಾಗಿದೆ ಎಂದರು.
ರೋಟರಿ ವಲಯ ಸೇನಾನಿ ಎಸ್.ಎಸ್. ಸಂಪತ್ ಕುಮಾರ್, ಮಡಿಕೇರಿ ವುಡ್ಸ್ ಕಾರ್ಯದರ್ಶಿ ಹರೀಶ್ ಕಿಗ್ಗಾಲು, ಖಜಾಂಜಿ ಧನಂಜಯ ಶಾಸ್ತಿçÃ, ರೆಡ್ ಕ್ರಾಸ್ ಕಾರ್ಯದರ್ಶಿ ಹೆಚ್.ಆರ್. ಮುರಳೀಧರ್, ನಿರ್ದೇಶಕರುಗಳಾದ ಉತ್ತಯ್ಯ ಮತ್ತು ಲೋಕೇಶ್ ಹಾಜರಿದ್ದರು. ರೋಟರಿ ಮಡಿಕೇರಿ ವುಡ್ಸ್ನ ರವೀಂದ್ರ, ಕಶ್ಯಪ್, ರವಿಕುಮಾರ್, ಲೀಲಾವತಿ, ಮಿಸ್ಟಿ ಹಿಲ್ಸ್ನ ಎಂ.ಧನAಜಯ್, ಎ.ಕೆ. ಜೀವನ್ ಭಾಗವಹಿಸಿದ್ದರು.
ಆರೋಗ್ಯ ಶಿಬಿರದಲ್ಲಿ ರಕ್ತದೊತ್ತಡ ಪರೀಕ್ಷೆ, ಮಧುಮೇಹ ಪರೀಕ್ಷೆ, ಕಣ್ಣಿಗೆ ಸಂಬAಧಿಸಿದ ಸಮಸ್ಯೆಗಳ ಪರೀಕ್ಷೆ, ಚರ್ಮರೋಗ ಪರೀಕ್ಷೆಗಳಿಗೆ ಸಂಬAಧಿಸಿದ ವೈದ್ಯರು, ಹೃದ್ರೋಗ ತಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಆರೋಗ್ಯ ತಪಾಸಣೆ ನಡೆಸಿ ಪರಿಹಾರಗಳನ್ನು ಸೂಚಿಸಿದರು. ನೂರ ಇಪ್ಪತ್ತಕ್ಕೂ ಹೆಚ್ಚು ಆಟೋ ಚಾಲಕರು ಹಾಗೂ ಮಾಲೀಕರು, ಕುಟುಂಬವರ್ಗದವರು ಶಿಬಿರದ ಪ್ರಯೋಜನ ಪಡೆದುಕೊಂಡರು.