ದೈವಾರಾಧಾನೆ, ಭೂತಾರಾಧಾನೆ ಜೊತೆಗೆ ಅಷ್ಟೇ ಶ್ರದ್ಧಾಭಕ್ತಿಯಿಂದ ಆಚರಿಸುವ ಹಬ್ಬ ನಾಗಾರಾಧನೆ ಅರ್ಥಾತ್ ನಾಗರ ಪಂಚಮಿ. ನಾಗರ ಪಂಚಮಿ ಹಬ್ಬವನ್ನು ಎಲ್ಲಾ ಕಡೆ ಭಯಭಕ್ತಿಯಿಂದ ಆಚರಿಸುತ್ತಾರೆ. ತರವಾಡು ಮನೆಗಳಲ್ಲಿ ನಾಗನಕಟ್ಟೆ ಇದ್ದರೆ ಎಲ್ಲಾ ಕುಟುಂಬ ಬಾಂಧವರು ಸೇರಿ ನಾಗತಂಬಿಲ ಮಾಡಿಸಿ ಹಾಲಾಭಿಷೇಕ ಮಾಡುವ ಪದ್ಧತಿ ಇದೆ. ನಾಗನಿಗೆ ಪ್ರಿಯವಾದ ಸೇವೆಯೇ ನಾಗತಂಬಿಲ. ಜೊತೆಗೆ ಹಿಂಗಾರಭಿಷೇಕ, ಹಾಲಾಭಿಷೇಕ ಮಾಡಿಸುವ ಕ್ರಮವೂ ಇದೆ. ತುಳುನಾಡು ಸಂಸ್ಕೃತಿಯಲ್ಲಿ ನಾಗನಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ನಾಗರ ಪಂಚಮಿಯ ದಿವಸ ‘ಅರಸಿನ ಎಲೆಯ ಗಟ್ಟಿ’ ಸಿಹಿ ತಿನಿಸು ನೀಡುವುದು ಇದೆ.

ಕಲ್ಲನಾಗನ ಕಂಡರೆ ಹಾಲನೆರೆವರು, ಹಸಿದ ನಾಗನ ಕಂಡರೆ ಕಲ್ಲನ್ನೆರೆವರು. ಈ ಮಾತು ಚಾಲ್ತಿಯಲ್ಲಿದ್ದರೂ ನಾವು ತೊಂದರೆ ಮಾಡಿದರೆ ಮಾತ್ರ ನಮಗೆ ಪ್ರಾಣಿಗಳು ತೊಂದರೆ ಮಾಡುತ್ತವೆ ಎಂದು ಅರಿಯಬೇಕು.

- ಮೋಹಿನಿ ದಯಾನಂದ ರೈ, ಪಾಲಿಬೆಟ್ಟ.

ಮೊ. ೯೮೮೦೮೫೯೮೦೦