ನಾಗರ ಪಂಚಮಿ ಪ್ರಾಚೀನ ಕಾಲದಿಂದಲೂ ಜೀವನವನ್ನು ಮತ್ತು ಪ್ರಕೃತಿಯ ಶಕ್ತಿಗಳನ್ನು ಪೂಜಿಸುವ ಒಂದು ಮಾರ್ಗವಾಗಿ ನಡೆದುಬಂದಿದೆ. ನಾಡಿಗೇ ದೊಡ್ಡ ಹಬ್ಬ ಎಂಬ ಖ್ಯಾತಿ ಪಡೆದ ನಾಗರ ಪಂಚಮಿ ಹಬ್ಬವನ್ನು ಭಕ್ತಿ-ಸಂಭ್ರಮದಿAದ ಆಚರಿಸಲಾಗುತ್ತದೆ. ಪ್ರತಿವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನ (ಪಂಚಮಿ) ಆಚರಿಸಲ್ಪಡುವ ಈ ಹಬ್ಬ ತನ್ನದೇ ಆದ ವೈಶಿಷ್ಟ÷್ಯ ಹಾಗೂ ಮಹತ್ವವನ್ನು ಹೊಂದಿದೆ.
ನಾಗರ ಪಂಚಮಿ ಹಬ್ಬವನ್ನು ಭಾರತದ ಹಲವು ಭಾಗಗಳಲ್ಲಿ ಹಿಂದೂಗಳು ಆಚರಿಸುತ್ತಾರೆ. ಆದರೆ ಕರ್ನಾಟಕದಲ್ಲಿ ಇದಕ್ಕೆ ಮತ್ತಷ್ಟು ಮಹತ್ವದ ಸ್ಥಾನವಿದೆ. ಈ ದಿನ ಹಾವಿಗೆ ಹಾಲೆರೆದು, ಪೂಜಿಸಿ, ಸಕಲ ಇಷ್ಟಾರ್ಥಗಳೂ ಪ್ರಾಪ್ತಿಯಾಗುವಂತೆ ನಾಗ ದೇವನನ್ನು ಬೇಡುತ್ತಾರೆ. ಈ ದಿನ ಶೇಷನಾಗ ಮತ್ತು ಶ್ರೀ ವಿಷ್ಣುವನ್ನು ಭಕ್ತಿಯಿಂದ ಪೂಜಿಸಲಾಗುತ್ತದೆ.
ನಾಗರ ಪಂಚಮಿ ಉಪವಾಸ ಪುರಾಣ ಕತೆಯೊಂದರಲ್ಲಿ ಸತ್ಯೇಶ್ವರಿ ಎಂಬ ದೇವಿಯೊಬ್ಬಳು ನಾಗರಪಂಚಮಿಯ ಮುನ್ನಾದಿನ ಮೃತನಾದ ತನ್ನ ಸಹೋದರನನ್ನು ನೆನೆದು, ನಾಗರಪಂಚಮಿಯ ದಿನ ಅನ್ನ-ನೀರು ಬಿಟ್ಟು ಉಪವಾಸ ಮಾಡಿದಳು.
ಇಂದಿಗೂ ನಾಗರ ಪಂಚಮಿಯ ದಿನ ಸಹೋದರನ ಒಳಿತಿಗಾಗಿ ಸಹೋದರಿಯರು ಉಪವಾಸ ಮಾಡುವ ಪರಿಪಾಠವಿದೆ.
ಈ ದಿನ ಚಂದನ ಅಥವಾ ಅರಿಶಿಣದಿಂದ ಮಣೆ ಮೇಲೆ ನವನಾಗಗಳ ಆಕೃತಿ ಬರೆದು ಪೂಜೆ ಮಾಡುವ ಪದ್ಧತಿ ಇದೆ. ಇಲ್ಲವೆಂದರೆ ನಾಗರ ಕಲ್ಲು, ಅಥವಾ ನಾಗದೇವನ ಚಿತ್ರಕ್ಕೆ ಪೂಜೆ ಮಾಡಬಹುದು. ಈ ದಿನ, ನಾಗದೇವನಿಗೆ ಅರಳು ಮತ್ತು ಹಾಲನ್ನು ನೈವೇದ್ಯವೆಂದು ಅರ್ಪಿಸಬೇಕು. ನಾಗದೇವನಿಗೆ ಈ ದಿನ ಧೂರ್ವೆಯನ್ನು ಸಹ ಅರ್ಪಿಸಲಾಗುತ್ತದೆ.
ಧನ-ಧಾನ್ಯ, ಆಯುಷ್ಯ ಹಾಗೂ ಸಂತಾನವನ್ನು ಅನುಗ್ರಹಿಸುವ ದೈವೀಶಕ್ತಿ ನಾಗನಿಗಿದೆ ಎಂಬ ನಂಬಿಕೆ ಜಗತ್ತಿನಾದ್ಯಂತ ಹಿಂದಿನಿAದಲೂ ನಡೆದುಕೊಂಡು ಬಂದ ನಡವಳಿಕೆಯಾಗಿದೆ. ನಮ್ಮ ದೇಶದಲ್ಲೂ ನಾಗರಕಲ್ಲು, ನಾಗರ ಪ್ರತಿಮೆಗಳಿಲ್ಲದ ಊರು, ಕೇರಿ, ಪಟ್ಟಣ, ನಗರಗಳು ಇಲ್ಲವೇ ಇರಲಿಕ್ಕಿಲ್ಲ. ಅಶ್ವತ್ಥಕಟ್ಟೆ, ದೇವಸ್ಥಾನಗಳಲ್ಲಿ ನಾಗವಿಗ್ರಹ ಇಟ್ಟು ಪೂಜಿಸುವ ಸಂಪ್ರದಾಯವು ಹಲವು ಕಡೆ ಇದೆ. ಕಾಲ ಸರ್ಪಯೋಗ, ಕುಷ್ಠರೋಗ, ಚರ್ಮರೋಗ ನಿವಾರಣೆಗೂ, ಸರ್ಪ ಶಾಪ-ಕೋಪ ನಿವಾರಣೆಗೂ ನಾಗಾರಾಧನೆ ಅಗತ್ಯವಾಗಿದೆ. ಪೂರ್ವಜನ್ಮ ಅಥವಾ ಈ ಜನ್ಮದಲ್ಲಿ ಮಾಡಿದ ಸರ್ಪವಧೆ, ದಂಡದಿAದ ಹೊಡೆಯುವಿಕೆ, ಹುತ್ತಗಳ ಅಗೆತ, ನಾಗಬನಗಳ ವೃಕ್ಷನಾಶ, ನಾಗನ ಮೊಟ್ಟೆಯನ್ನು ಒಡೆಯುವದು, ಸರ್ಪ ಮಿಲನಗಳ ವೀಕ್ಷಣೆ, ಸತ್ತ ನಾಗನಿಗೆ ಸದ್ಗತಿ ಮಾಡದಿರುವದು, ನಾಗನ ನಡೆ ಇರುವ ಜಾಗದಲ್ಲಿ ಗಲೀಜು ಮಾಡುವದು ಮುಂತಾದ ಕ್ರಿಯೆಗಳಿಂದ ಸರ್ಪಶಾಪ ಬರುತ್ತದೆ. ಇದರ ನಿವಾರಣೆಗಾಗಿ ಸರ್ಪಾರಾಧನೆ ಅಗತ್ಯವಾಗಿದೆ. ‘ಪಂಚಮಿ ವ್ರತ’ ಮಾಡುವದರಿಂದ ನಾಗದೋಷ ನಿವಾರಣೆಯಾಗಿ ಶ್ರೇಯಸ್ಸು ಲಭಿಸುತ್ತದೆ ಎಂಬ ನಂಬಿಕೆ ಇದೆ.
- ಎಸ್.ಕೆ. ಅಶ್ವಿನಿ, ಮಡಿಕೇರಿ.