ಚಂದ್ರನೆಲಕ್ಕೆ ಅಪ್ಪಳಿಸಿದ ಲೂನ ೨೫
ರಷ್ಯಾ, ಆ. ೨೦: ಭಾರತದ ಇಸ್ರೋ ಸಂಸ್ಥೆ ತಾ. ೨೩ ರಂದು ತನ್ನ ಚಂದ್ರಯಾನ ೩ ನೌಕೆಯನ್ನು ಚಂದ್ರ ನೆಲಕ್ಕೆ ಸುರಕ್ಷಿತವಾಗಿ ಇಳಿಸಲು ಸಿದ್ಧತೆಯಲ್ಲಿರುವಾಗಲೆ ರಷ್ಯಾದ ಖosಛಿosmos ಬಾಹ್ಯಾಕಾಶ ಸಂಸ್ಥೆಯ ಲೂನ ೨೫ ನೌಕೆಯು ಚಂದ್ರನ ಪದರಕ್ಕೆ ಅಪ್ಪಳಿಸಿ ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿದ ಮೊದಲ ರಾಷ್ಟç ಎಂಬ ಹೆಗ್ಗಳಿಕೆ ಪಡೆಯಲು ವಿಫಲವಾಗಿದೆ. ಚಂದ್ರನ ದಕ್ಷಿಣಕ್ಕೆ ಜುಲೈ ೧೪ಕ್ಕೆ ಎಲ್.ವಿ.ಎಂ ೩ ರಾಕೆಟ್‌ನಲ್ಲಿ ಪಯಣ ಪ್ರಾರಂಭಿಸಿದ ಭಾರತದ ಚಂದ್ರಯಾನ ೩ ನೌಕೆಯು ತನ್ನ ಪಯಣದ ಕೊನೆಯ ಹಂತದಲ್ಲಿದ್ದು, ತಾ. ೨೩ ರಂದು ಚಂದ್ರ ಪದರ ತಲುಪುವ ನಿರೀಕ್ಷೆ ಇದೆ. ಈ ಮಧ್ಯೆ ಆಗಸ್ಟ್ ೧೧ ರಂದು ರಷ್ಯಾದ ಬಾಹ್ಯಾಕಾಶ ಸಂಸ್ಥೆ, ಇಸ್ರೋವಿನ ಎಲ್.ಎಂ.ವಿ. ೩ ರಾಕೆಟ್‌ಗಿಂತಲೂ ಶಕ್ತಿಶಾಲಿ ರಾಕೆಟ್ ಮೂಲಕ ತನ್ನ ರೋವರ್ ಹಾಗೂ ಲ್ಯಾಂಡರ್ ಅನ್ನು ಒಳಗೊಂಡ ಲೂನ-೨೫ ಹೆಸರಿನ ನೌಕೆಯನ್ನು ಕಳುಹಿಸಿ ಆಗಸ್ಟ್ ೨೧ ರಂದೇ ಇಳಿಯುವ ಪ್ರಯತ್ನ ಮಾಡಿತು. ಆದರೆ ತಾ. ೨೦ ರಂದು ನೌಕೆಯು ತಾಂತ್ರಿಕ ಕಾರಣದಿಂದಾಗಿ ಚಂದ್ರ ನೆಲಕ್ಕೆ ಅಪ್ಪಳಿಸಿರುವುದಾಗಿ ರಷ್ಯಾ ಅಧಿಕೃತವಾಗಿ ಪ್ರಕಟಿಸಿದೆ. ಈ ಹಿಂದೆ ಅಮೇರಿಕ, ಚೀನಾದೊಂದಿಗೆ ರಷ್ಯಾ ಕೂಡ ಚಂದ್ರ ನೆಲಕ್ಕೆ ಇಳಿಯಲು ಸಫಲವಾಗಿವೆಯಾದರೂ ನೀರಿನ ಅಂಶ ಪತ್ತೆಯಾಗಿರುವ ಚಂದ್ರನ ದಕ್ಷಿಣ ಧ್ರುವಕ್ಕೆ ಯಾರೂ ಕೂಡ ಸುರಕ್ಷಿತವಾಗಿ ಇಳಿಯಲು ಸಫಲರಾಗಿಲ್ಲ. ಆಗಸ್ಟ್ ೨೩ಕ್ಕೆ ಭಾರತ ಈ ಕಾರ್ಯವನ್ನು ಮಾಡುವ ನಿರೀಕ್ಷೆ ಇದ್ದು, ದಕ್ಷಿಣ ಧ್ರುವ ತಲುಪುವ ಮೊದಲ ರಾಷ್ಟç ಎಂಬ ಹೆಗ್ಗಳಿಕೆ ದೊರೆಯುವ ಭರವಸೆ ಇದೆ.
ಕಾವೇರಿ, ಮಹದಾಯಿ ವಿವಾದ-ಸರ್ವ ಪಕ್ಷಗಳ ಸಭೆ
ಬೆಂಗಳೂರು, ಆ. ೨೦: ಕಾವೇರಿ ಮತ್ತು ಮಹದಾಯಿ ವಿವಾದಕ್ಕೆ ಸಂಬAಧಿಸಿದAತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ತಾ.೩೦ರಂದು ಸರ್ವ ಪಕ್ಷಗಳ ಸಭೆ ನಡೆಯಲಿದೆ. ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರು ಕಡಿಮೆ ಇದೆ. ಇಂತಹ ಸಂಕಷ್ಟ ಸಂದರ್ಭದಲ್ಲಿ ತಮಿಳುನಾಡಿಗೆ ನೀರು ಬಿಡಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಸರ್ಕಾರವನ್ನು ಸಂದಿಗ್ದಕ್ಕೆ ಸಿಲುಕಿಸಿದ್ದು, ಈ ಬಗ್ಗೆ ಚರ್ಚೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸರ್ವಪಕ್ಷಗಳ ಮುಖಂಡರ ಸಭೆ ನಡೆಸಲಿದ್ದಾರೆ.
ಸೋಮಶೇಖರ್ ಅಸಮಾಧಾನ ತಣಿಸಲು ಇಬ್ಬರ ಉಚ್ಛಾಟನೆ!
ಬೆಂಗಳೂರು, ಆ. ೨೦: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರಿನ ಯಶವಂತಪುರ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪ ಕೇಳಿಬಂದಿತ್ತು. ಪಕ್ಷದ ಅಧಿಕೃತ ಅಭ್ಯರ್ಥಿ ಯಾಗಿದ್ದರೂ ನನ್ನನ್ನು ಸೋಲಿಸಲು ಪಕ್ಷದ ಒಳಗಿನವರೇ ಚುನಾವಣೆಯಲ್ಲಿ ಕೆಲಸ ಮಾಡಿದ್ದಾರೆ ಎಂದು ಎಸ್. ಟಿ. ಸೋಮಶೇಖರ್ ಆರೋಪಿಸಿದ್ದರು. ಈ ಸಂಬAಧ ಪಕ್ಷದ ರಾಜ್ಯದ ಘಟಕಕ್ಕೂ ದೂರು ನೀಡಿದ್ದರು. ಆದರೆ, ಇಲ್ಲಿಯವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಅವರು ಕಾಂಗ್ರೆಸ್ ಸೇರಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗುತ್ತಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತ ರಾಜ್ಯ ಬಿಜೆಪಿ ನಾಯಕರು ಸೋಮಶೇಖರ್ ಅವರ ಅಸಮಾಧಾನ ತಣಿಸುವ ನಿಟ್ಟಿನಲ್ಲಿ ಯಶವಂತಪುರ ಬಿಜೆಪಿ ಮಂಡಳ ಮಾಜಿ ಅಧ್ಯಕ್ಷ ಮಾರೇಗೌಡ ಹಾಗೂ ಉಪಾಧ್ಯಕ್ಷ ಧನಂಜಯ್ ಅವರನ್ನು ಪಕ್ಷದಿಂದ ೬ ವರ್ಷಗಳ ಕಾಲ ಉಚ್ಛಾಟಿಸಲಾಗಿದೆ.
ಚಲುವರಾಯಸ್ವಾಮಿ ವಿರುದ್ಧ ದೂರು-ಕೃಷಿ ಎಡಿ, ಎಒ ಸಿಐಡಿ ವಶಕ್ಕೆ
ಮಂಡ್ಯ, ಆ. ೨೦: ಸಚಿವ ಎನ್. ಚಲುವರಾಯಸ್ವಾಮಿ ವಿರುದ್ಧ ಕೃಷಿ ಇಲಾಖೆ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ ಎನ್ನಲಾದ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಮೈಸೂರು ಜಿಲ್ಲೆ ಕೆ.ಆರ್. ನಗರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ (ಎಡಿ) ಹಾಗೂ ಕೃಷಿ ಅಧಿಕಾರಿ(ಎಒ)ಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಜಿಲ್ಲೆಯ ೭ ತಾಲೂಕುಗಳ ೭ ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ಪತ್ರ ಬರೆದು, ಅವರ ನಕಲಿ ಸಹಿ ಮಾಡಿ ಮೈಸೂರಿನ ಸರಸ್ವತಿಪುರಂ ಅಂಚೆ ಕಚೇರಿ ಮೂಲಕ ರಾಜ್ಯಪಾಲರಿಗೆ ಪತ್ರ ಕಳುಹಿಸಿರುವುದು ಪತ್ತೆಯಾಗಿತ್ತು. ಈ ವಿಚಾರದಲ್ಲಿ ಕೆ.ಆರ್. ನಗರ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಹಾಗೂ ಕೃಷಿ ಅಧಿಕಾರಿ ಸುದರ್ಶನ್ ಅವರನ್ನು ವಶಕ್ಕೆ ಪಡೆದು, ಅಜ್ಞಾತ ಸ್ಥಳಕ್ಕೆ ಕರೆದೊಯ್ದು ವಿಚಾರಣೆಗೆ ಒಳಪಡಿಸಲಾಗಿದೆ. ಭಾನುವಾರ ಬೆಳಿಗ್ಗೆ ಕೆ.ಆರ್. ನಗರದ ಕೃಷಿ ಇಲಾಖೆಗೆ ದಾಳಿ ನಡೆಸಿದ ಸಿಐಡಿ ಅಧಿಕಾರಿಗಳು ಗುರುಪ್ರಸಾದ್ ಹಾಗೂ ಸುದರ್ಶನ್ ಅವರನ್ನು ವಶಕ್ಕೆ ಪಡೆದರು. ಕಚೇರಿಯಲ್ಲಿದ್ದ ಕೆಲವು ದಾಖಲಾತಿಗಳನ್ನು ವಶಕ್ಕೆ ಪಡೆದರು.
ಮಧ್ಯಪ್ರದೇಶ ಸರ್ಕಾರದ ‘ರಿಪೋರ್ಟ್ ಕಾರ್ಡ್' ಬಿಡುಗಡೆ
ಭೋಪಾಲ್, ಆ. ೨೦: ಮಧ್ಯಪ್ರದೇಶ ಸರ್ಕಾರದ ೨೦೦೩ರಿಂದ ೨೦೨೩ರ ವರೆಗಿನ ‘ರಿಪೋರ್ಟ್ ಕಾರ್ಡ್' ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾನುವಾರ ಬಿಡುಗಡೆ ಮಾಡಿದ್ದು, `ಬಿಜೆಪಿ ಆಡಳಿತವು ರಾಜ್ಯವನ್ನು ಬಿಮಾರು ರಾಜ್ಯಗಳ ಪಟ್ಟಿಯಿಂದ ಹೊರ ತಂದಿದೆ' ಎಂದು ಹೇಳಿದ್ದಾರೆ. ಭೋಪಾಲ್‌ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಸಂಸದ ವಿ.ಡಿ. ಶರ್ಮಾ ಮತ್ತು ಗೃಹ ಸಚಿವ ನರೋತ್ತಮ್ ಮಿಶ್ರಾ ಅವರ ಸಮ್ಮುಖದಲ್ಲಿ ಶಾ ಅವರು ೨೦ ವರ್ಷಗಳ ‘ರಿಪೋರ್ಟ್ ಕಾರ್ಡ್' ಬಿಡುಗಡೆಗೊಳಿಸಿದರು. ಮಧ್ಯಪ್ರದೇಶವು ೧೯೫೬ರಲ್ಲಿ ಅಸ್ತಿತ್ವಕ್ಕೆ ಬಂದ ಬಳಿಕ ೨೦೦೩ ರವರೆಗೆ ಐದರಿಂದ ಆರು ವರ್ಷಗಳನ್ನು ಹೊರತುಪಡಿಸಿದರೆ ಉಳಿದ ಅವಧಿಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸಿದೆ. ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯವು ‘ಬಿಮಾರು' ಪಟ್ಟಿಯಲ್ಲೇ ಉಳಿದಿತ್ತು ಎಂದು ಶಾ ಅವರು ಹೇಳಿದ್ದಾರೆ.
‘ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಇಲ್ಲ’
ಬೆಂಗಳೂರು, ಆ. ೨೦: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ತಾ. ೨೧ ರಂದು (ಇಂದು) ಮಂಡ್ಯದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದೆ. ಬೆಂಗಳೂರು- ಮೈಸೂರು ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಲು ಬಿಜೆಪಿ ನಿರ್ಧರಿಸಿತ್ತು. ಆದರೆ, ಈ ಕುರಿತು ಟ್ವೀಟ್ ಮಾಡಿರುವ ಸಂಸದ ಪ್ರತಾಪ್ ಸಿಂಹ, ನಾಳೆ ಬೆಂಗಳೂರು-ಮೈಸೂರು ಹೆದ್ದಾರಿ ಬಂದ್ ಮಾಡುವುದಿಲ್ಲ ಮತ್ತು ಮಾಡುವುದು ತಪ್ಪಾಗುತ್ತದೆ. ಮಂಡ್ಯದ ಸಂಜಯ್ ಸರ್ಕಲ್‌ನಲ್ಲಿ ಪ್ರತಿಭಟನೆ ಇದೆ ಎಂದು ತಿಳಿಸಿದ್ದಾರೆ.
ಲಡಾಖ್‌ನ ಗೋಮಾಳ ಸ್ವಾಧೀನ:ರಾಹುಲ್ ಕಿಡಿ
ಲೇಹ್, ಆ. ೨೦: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಲಡಾಖ್‌ನ ಒಂದಿAಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಮೋದಿ ಅವರು ಹೇಳಿರುವುದು ಸತ್ಯಕ್ಕೆ ದೂರವಾದ ಮಾತು ಎಂದರು. ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಜನ್ಮದಿನದ ಅಂಗವಾಗಿ ಗೌರವನಮನ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚೀನಾ ಸೇನೆಯು ಲಡಾಖ್‌ನ ಗೋಮಾಳವನ್ನು ಚೀನಾ ಸೇನೆ ಸ್ವಾಧೀನಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಇಲ್ಲಿನ ಜನರು ತಲ್ಲಣಗೊಂಡಿದ್ದಾರೆ ಎಂದು ತಿಳಿಸಿದರು. ಚೀನಾ ಸೇನೆಯು ಒಳನುಸುಳಿ ತಮ್ಮ ಗೋಮಾಳ ವಶಪಡಿಸಿಕೊಂಡಿದೆ. ಅಲ್ಲಿಗೆ ಪ್ರವೇಶಿಸಲು ತಮಗ್ಯಾರಿಗೂ ಅವಕಾಶವಿಲ್ಲ ಎಂದು ಇಲ್ಲಿನ ಜನರು ಸ್ಪಷ್ಟವಾಗಿ ಹೇಳಿದ್ದಾರೆ ಎಂದರು. ಭಾರತ್ ಜೋಡೊ ಯಾತ್ರೆಯ ವೇಳೆಯೇ ನಾನು ಲಾಡಾಖ್‌ಗೆ ಬರಬೇಕಾಗಿತ್ತು. ಆದರೆ ಕಾರಣಾಂತರಗಳಿAದ ಇಲ್ಲಿಗೆ ಭೇಟಿ ನೀಡುವ ಯೋಜನೆ ಕೈಬಿಡಬೇಕಾಯಿತು. ಆದ್ದರಿಂದ ಸಂಪೂರ್ಣ ಪ್ರಮಾಣದ ಪ್ರವಾಸ ಕೈಗೊಳ್ಳಲೆಂದು ಈಗ ಇಲ್ಲಿಗೆ ಬಂದಿದ್ದೇನೆ' ಎಂದು ವಿವರಿಸಿದರು.