ಗೋಣಿಕೊಪ್ಪ ವರದಿ, ಆ. ೨೦: ಮೈತಾಡಿ ಗ್ರಾಮದ ಬಾಳೆಕುಟ್ಟೀರ ದೊರೆ ಅವರ ಗದ್ದೆಯಲ್ಲಿ ತ್ರಿಮೋಕ್ಸ್ ಸಂಘಟನೆ ವತಿಯಿಂದ ಆಯೋಜಿಸಿದ್ದ ಕೆಸರುಗದ್ದೆ ಫುಟ್ಬಾಲ್ ಕ್ರೀಡಾಕೂಟದಲ್ಲಿ ಕೊಂಡAಗೇರಿಯ ಬುಲ್ಲೆಟ್ ಫ್ರೆಂಡ್ಸ್ ತಂಡ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದ್ದು, ಕುಂಜಿಲ ನಿಯಾ ಫ್ರೆಂಡ್ಸ್ ರನ್ನರ್ ಅಪ್ ಸ್ಥಾನ ಪಡೆದುಕೊಂಡಿತು.
ಪAದ್ಯದ ಅವಧಿಯಲ್ಲಿ ಉಭಯ ತಂಡಗಳು ಗೋಲು ದಾಖಲಿಸಲು ವಿಫಲವಾದವು. ಟೈಬ್ರೇಕರ್ನಲ್ಲಿ ಕೂಡ ಗೋಲು ದಾಖಲಾಗದೆ, ಕೊಂಡAಗೇರಿಯ ಬುಲ್ಲೇಟ್ ಫ್ರೆಂಡ್ಸ್ ಸಡನ್ ಡೆತ್ನಲ್ಲಿ ೨-೧ ಗೋಲುಗಳಿಂದ ಜಯಿಸಿತು. ೨೦ ತಂಡಗಳು ಪಾಲ್ಗೊಂಡವು. ಬೆಸ್ಟ್ ಕೀಪರ್ ಬಹುಮಾನವನ್ನು ನಿಯಾ ತಂಡದ ಮಮು, ಬೆಸ್ಟ್ ಫಾರ್ವರ್ಡ್ ಬಹುಮಾನವನ್ನು ನಿಯಾ ತಂಡದ ರಜಾಕ್, ಉತ್ತಮ ತಂಡವಾಗಿ ಕೆನ್ಲಿ ಫ್ರೆಂಡ್ಸ್ ಪಡೆದುಕೊಂಡಿತು.
ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಂಡಚಾಡೀರ ಭರತ್, ದಾನಿ ಅರೆಯಂಡ ರಾಖಿ ಬಹುಮಾನ ವಿತರಣೆ ಮಾಡಿದರು. ಈ ಸಂದರ್ಭ ಗದ್ದೆ ಮಾಲೀಕ ಬಾಳೆಕುಟ್ಟೀರ ದೊರೆ, ತ್ರಿಮೋಕ್ಸ್ ಸಂಘಟನೆ ಅಧ್ಯಕ್ಷ ಐಚೇಟ್ಟೀರ ವೇದ್ ಬಿದ್ದಪ್ಪ, ಕಾರ್ಯದರ್ಶಿ ತೊತ್ತೆರ ಪ್ರವೀಣ್ ಪೆಮ್ಮಯ್ಯ, ಸದಸ್ಯರಾದ ಅರ್ನಂಡ ರಶ್ವಿನ್ ಪೊನ್ನಣ್ಣ, ಬಾಳೆಕುಟ್ಟೀರ ಬೋಪಣ್ಣ ಇದ್ದರು.