(ಹೆಚ್.ಕೆ.ಜಗದೀಶ್)
ಗೋಣಿಕೊಪ್ಪಲು, ಆ. ೨೧: ಸ್ವಾತಂತ್ರö್ಯ ಪೂರ್ವದ ಸರಿ ಸುಮಾರು ೮೧ ವರ್ಷಗಳ ಇತಿಹಾಸವುಳ್ಳ ಬೃಹತ್ ಕಲ್ಪ ವೃಕ್ಷವು ಇದೀಗ ನಾಗರಿಕರಿಗೆ ಸಮಸ್ಯೆಯಾಗಿ ಕಾಡುತ್ತಿದೆ. ಇತ್ತೀಚೆಗೆ ಈ ತೆಂಗಿನ ಮರ ದಿಂದ ಬಿದ್ದಂತಹ ದೊಡ್ಡ ಗಾತ್ರದ ತೆಂಗಿನ ಕಾಯಿಯು ಓರ್ವ ಮಹಿಳೆಯ ತಲೆಯ ಮೇಲೆ ಬೀಳುವ ಸ್ವಲ್ಪದರ ಲ್ಲಿಯೇ ತಪ್ಪಿ ಹೋಗಿದೆೆ. ಕೂದಲೆಳೆಯ ಅಂತರದಿAದ ಈ ಅಪಾಯ ತಪ್ಪಿದ್ದು ಒಂದು ವೇಳೆ ತಲೆಯ ಮೇಲೆ ಬಿದ್ದರೆ ಪ್ರಾಣಕ್ಕೆ ಸಂಚಕಾರ ಎದುರಾಗುತ್ತಿತ್ತು. ಮರ ದಿಂದ ಬಿದ್ದ ಬೃಹತ್ ಗಾತ್ರದ ತೆಂಗಿನಕಾಯಿಯು ನೆಲಕ್ಕೆ ತಾಗಿ ನಂತರ ಎತ್ತರಕ್ಕೆ ಹಾರಿ ಅಲ್ಲಿದ್ದ ವಾಹನದ ಮೇಲೆ ಬಿದ್ದಿದೆ.
ಈ ವೇಳೆ ಗಾಬರಿಗೊಂಡ ಚಾಲಕ ತನ್ನ ವಾಹನವನ್ನು ಗಾಬರಿಯಿಂದ ತಿರುಗಿಸಿದ ಸಂದರ್ಭ ರಸ್ತೆಯಲ್ಲಿ ಬರು ತ್ತಿದ್ದ ಬೈಕ್ ಒಂದಕ್ಕೆ ಡಿಕ್ಕಿಪಡಿಸಿದ ಸನ್ನಿವೇಶವೂ ಎದುರಾಗಿತ್ತು. ಅಂತಹ ಒಂದು ತೆಂಗಿನ ಮರವು ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಮುಖ್ಯ ರಸ್ತೆಯಲ್ಲಿ ಇಂದಿಗೂ ಬೃಹತ್ ಎತ್ತರವಾಗಿ ಬೆಳೆದು ನಿಂತಿದೆ. ಈ ಮರದ ಅಡಿಯಲ್ಲಿ ಪ್ರತಿನಿತ್ಯ ವಾಹನ ಪಾರ್ಕಿಂಗ್ ಕೂಡ ಮಾಡಲಾಗುತ್ತಿದೆ. ಹಲವು ಬಾರಿ ವಾಹನದ ಮೇಲೆ ಮರದ ಗರಿಗಳು, ತೆಂಗಿನ ಕಾಯಿಗಳು ಬೀಳು ತ್ತಿರುವುದರಿಂದ ಪಾರ್ಕಿಂಗ್ನಲ್ಲಿರುವ ವಾಹನಗಳಿಗೆ ಹಾನಿಯಾಗುತ್ತಿದೆ.
ಪಟ್ಟಣದ ಮುಖ್ಯ ರಸ್ತೆಯ ಬದಿಯಲ್ಲಿ ಬೆಳೆದು ನಿಂತಿರುವ ಈ ತೆಂಗಿನ ಮರವನ್ನು ತೆರವುಗೊಳಿಸು ವಂತೆ ಗ್ರಾಮ ಪಂಚಾಯಿತಿಯ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಗಮನ ಸೆಳೆದಿದ್ದರೂ ಇಲ್ಲಿಯ ತನಕ ಈ ತೆಂಗಿನ ಮರವನ್ನು ತೆರವು ಗೊಳಿಸುವ ಕಾರ್ಯವನ್ನು ಗ್ರಾಮ ಪಂಚಾಯಿತಿ ಮಾಡುತ್ತಿಲ್ಲ. ಈ ಬಗ್ಗೆ ಸಾರ್ವಜನಿಕರು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.
ಈ ಹಿಂದೆ ಗೋಣಿಕೊಪ್ಪ ಪಂಚಾಯಿತಿಯು ನೋಟಿಫೈಡ್ ಏರಿಯವಾಗಿ ಕಾರ್ಯ ನಿರ್ವ ಹಿಸುತ್ತಿತ್ತು. ಆಗಿನ ಅಧ್ಯಕ್ಷರಾಗಿ ಕೊಂಗAಡ ಗಣಪತಿ ಕಾರ್ಯ ನಿರ್ವಹಿಸುತ್ತಿದ್ದರು. ಪ್ರöಸ್ತುತ ಕಾರ್ಯನಿರ್ವಹಿಸುತ್ತಿರುವ ಪೊನ್ನಂಪೇಟೆ ರಸ್ತೆಯ ಚೆಸ್ಕಾಂ ಕಚೇರಿಯಲ್ಲಿ ವಿದ್ಯುತ್ ಸಂಪರ್ಕ ಕೇಂದ್ರ ಸ್ಥಾಪನೆಯಾಗಿದ್ದರಿಂದ ಮುಖ್ಯ ರಸ್ತೆ ಮಾರ್ಗದಲ್ಲಿ ವಿದ್ಯುತ್ ಕಂಬಗಳನ್ನು ಅಳವಡಿಸಿ ವಿದ್ಯುತ್ ತಂತಿಯನ್ನು ಎಳೆಯಲಾಗಿತ್ತು. ಈ ವೇಳೆ ರಸ್ತೆಯ ಬದಿಯಲ್ಲಿ ಕಟ್ಟಿಕೊಂಡಿದ್ದ ಗುಡಿಸಲುಗಳ ಮುಂದೆ ನೆಟ್ಟಿದ್ದ ನೂರಾರು ತೆಂಗಿನ ಮರಗಳನ್ನು ಬುಡಸಹಿತ ತೆರವುಗೊಳಿಸಲಾಗಿತ್ತು.