ಮಡಿಕೇರಿ, ಆ. ೧೯ : ಮಡಿಕೇರಿ ನಗರ ಸಂಚಾರಿ ಪೊಲೀಸ್ ಠಾಣೆಯ ನೂತನ ಎಸ್.ಐ. ಆಗಿ ಶ್ರೀಧರ್ ಅವರು ನಿಯುಕ್ತಿಗೊಂಡಿದ್ದು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಹಿಂದೆ ಇವರು ವೀರಾಜಪೇಟೆ ನಗರ ಠಾಣೆಯ ಎಸ್.ಐ. ಆಗಿ ಕಾರ್ಯನಿರ್ವಹಿಸುತ್ತಿದ್ದರು. ಈ ತನಕ ಸಂಚಾರಿ ಠಾಣೆಯ ಪ್ರಭಾರ ಅಧಿಕಾರಿಯಾಗಿ ಪರಶಿವಮೂರ್ತಿ ಅವರು ಕಾರ್ಯನಿರ್ವಹಿಸುತ್ತಿದ್ದರು.
ಪ್ರಕರಣ ದಾಖಲು : ನೂತನ ಎಸ್.ಐ. ಆಗಿ ಶ್ರೀಧರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇಂದು ಪಾನಮತ್ತರಾಗಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯಲು ಮುಂದಾಗಿದ್ದ ಆಟೋ ಚಾಲಕರೊಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆಟೋ ಚಾಲಕ ಜಗದೀಶ್ ಎಂಬಾತ ಮದ್ಯಪಾನ ಮಾಡಿ ಕೇಂದ್ರೀಯ ವಿದ್ಯಾಲಯದ ಮಕ್ಕಳನ್ನು ಕರೆದೊಯ್ಯಲು ಮುಂದಾಗಿದ್ದ ಸಂದರ್ಭ ಸಾರ್ವಜನಿಕರ ದೂರಿನಂತೆ ಪ್ರಕರಣ ದಾಖಲಿಸಿದ್ದಾರೆ. ಇದರೊಂದಿಗೆ ಜನರಲ್ ತಿಮ್ಮಯ್ಯ ವೃತ್ತದಲ್ಲಿ ವೀರಾಜಪೇಟೆ ಕಡೆ ತೆರಳುವ ಬಸ್‌ಗಳು ಮುಂದಿನ ತಂಗುದಾಣದ ಬಳಿಯೇ ಬಸ್ ನಿಲುಗಡೆ ಮಾಡಿ ಸಂಚಾರ ವ್ಯವಸ್ಥೆಗೆ ಸಹಕರಿಸಲು ಅವರು ಸೂಚನೆ ನೀಡಿದರು.