ಕುಶಾಲನಗರ, ಆ. ೧೭: ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತ ವ್ಯಾಪ್ತಿಯಲ್ಲಿ ‘ಮದ್ರಾಸ್ ಐ’ (ಕೆಂಗಣ್ಣು) ರೋಗ ವ್ಯಾಪಕವಾಗಿ ಕಂಡು ಬಂದಿದೆ. ಕುಶಾಲನಗರ ಬೈಚನಹಳ್ಳಿ ವ್ಯಾಪ್ತಿಯ ಬಡಾವಣೆಗಳಲ್ಲಿ ಈ ರೋಗ ಕಂಡುಬAದಿದ್ದು, ಮಾಹಿತಿ ದೊರೆತ ಕುಶಾಲನಗರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಬಡಾವಣೆಗಳಿಗೆ ಭೇಟಿ ನೀಡಿ ರೋಗದ ಬಗ್ಗೆ ಅರಿವು ಮೂಡಿಸಿ ಚಿಕಿತ್ಸೆ ಪಡೆಯುವಂತೆ ನಿವಾಸಿಗಳಿಗೆ ಮಾಹಿತಿ ಒದಗಿಸಿದರು.