ಕೋವರ್ ಕೊಲ್ಲಿ ಇಂದ್ರೇಶ್
ಬೆAಗಳೂರು, ಆ. ೧೭: ರಾಜ್ಯದಲ್ಲಿ ಹೆಣ್ಣನ್ನು ಮುಂದಿಟ್ಟುಕೊAಡು ಹಣ ಗಳಿಸುವ ವಂಚಕ ಕೃತ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಹಣ ಗಳಿಕೆಗೆ ಸುಲಭದ ಉಪಾಯವನ್ನು ಕಂಡುಕೊAಡಿರುವ ವಂಚಕರು ಜನರು ಮಾನ ಮರ್ಯಾದೆಗೆ ಅಂಜಿ ದೂರು ಕೊಡಲು ಹಿಂಜರಿಯುವ ಅಂಶವನ್ನೇ ಬಂಡವಾಳ ಮಾಡಿಕೊಂಡು ಅಮಾಯಕರಿಂದ ಲಕ್ಷಗಟ್ಟಲೇ ಹಣ ಸುಲಿಗೆ ಮಾಡುವ ಕೆಲಸದಲ್ಲಿ ತೊಡಗಿದ್ದಾರೆ.
ನಿನ್ನೆಯಷ್ಟೇ ಜಯನಗರ ಪೊಲೀಸರು ಹನಿಟ್ರಾö್ಯಪ್ ಮಾಡಿ ೮೨ ಲಕ್ಷ ರೂಪಾಯಿಗಳನ್ನು ಸುಲಿಗೆ ಮಾಡಿದ್ದ ಮೂವರನ್ನು ಬಂಧಿಸಿದ ಬೆನ್ನಲ್ಲೇ ಬುಧವಾರ ಮತ್ತೊಂದು ಹನಿ ಟ್ರಾö್ಯಪ್ ಪ್ರಕರಣದಲ್ಲಿ ಎಂಬಿಎ ಪದವೀಧರ ಸೇರಿದಂತೆ ಮೂವರನ್ನು ಪುಟ್ಟೇನ ಹಳ್ಳಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮುಂಬೈ ಮೂಲದ ರೂಪದರ್ಶಿ ನೇಹ ಅಲಿಯಾಸ್ ಮೆಹರ್ (೩೦), ಶರಣಪ್ಪ ಬಳಿಗಾರ (೪೮), ಅಬ್ದುಲ್ ಖಾದರ್ (೪೬) ಮತ್ತು ಯಾಸಿನ್ ಷರೀಫ್ (೩೬) ಎಂದು ಗುರುತಿಸಲಾಗಿದ್ದು, ಬಳಿಗಾರ್ ಉತ್ತರ ಕನ್ನಡ ಮೂಲದವನಾಗಿದ್ದು, ಖಾದರ್ ಕೊಡಗು ಜಿಲ್ಲೆಯ
ಕುಶಾಲನಗರದವನು ಮತ್ತು ಷರೀಫ್ ಬೆಂಗಳೂರಿನ ನಿವಾಸಿ. ಎಂಬಿಎ ಪದವಿ ಪಡೆದಿರುವ ಬಳಿಗಾರ್, ಮಹಿಳೆಯ ಫೋಟೋವನ್ನು ಆನ್‌ಲೈನ್‌ನಲ್ಲಿ ಪ್ರೊಫೈಲ್ ಫೋಟೋವನ್ನಾಗಿಟ್ಟುಕೊಂಡು ಪುರುಷರೊಂದಿಗೆ ಚಾಟ್ ಮಾಡುತ್ತಿದ್ದ ಎನ್ನಲಾಗಿದೆ. ಎಲ್ಲರನ್ನೂ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು ಮಾಡೆಲ್ ಮೆಹರ್‌ಳನ್ನು ಮುಂಬೈಗೆ ತೆರಳಿ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ.
ಬೆಂಗಳೂರು ಮೂಲದ ೨೭ ವರ್ಷದ ಯುವಕನನ್ನು ಸುಲಿಗೆ ಮಾಡಿದ ಪ್ರಕರಣದಲ್ಲಿ ಈ ಬಂಧನವನ್ನು ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಪ್ರಕರಣದ ಸಂತ್ರಸ್ತ ಯುವಕ ಮಹಿಳೆಯನ್ನು ಡೇಟಿಂಗ್ ವೆಬ್‌ಸೈಟ್ ಮೂಲಕ ಸ್ನೇಹ ಬೆಳೆಸಿದ್ದ ನಂತರ ಇಬ್ಬರೂ ವೈಯಕ್ತಿಕವಾಗಿ ಭೇಟಿಯಾಗಿದ್ದರು. ಮಹಿಳೆಯು ತನ್ನ ಪತಿ ದುಬೈನಲ್ಲಿ ನೆಲೆಸಿದ್ದಾನೆ ಹಾಗೂ ತನಗೆ ಒಂಟಿತನ ಕಾಡುತ್ತಿದೆ ಎಂದು ಹೇಳಿಕೊಂಡು ಆತನನ್ನು ನಂಬಿಸಿದ್ದಳು.
ಬಂಧಿತ ರೂಪದರ್ಶಿ ನೇಹಾ ಅಲಿಯಾಸ್ ಮೆಹರ್ ಪ್ರಕರಣದ ಪ್ರಮುಖ ಆರೋಪಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ನೇಹಾ ಮೆಹರ್ ಟೆಲಿಗ್ರಾಂ ಆ್ಯಪ್ ಮೂಲಕ ವ್ಯಕ್ತಿಗಳನ್ನು ಬಲೆಗೆ ಕೆಡವುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
(ಮೊದಲ ಪುಟದಿಂದ) ಈಕೆ ಜೆ.ಪಿ.ನಗರ ಐದನೇ ಹಂತದಲ್ಲಿರುವ ತನ್ನ ಬಾಡಿಗೆ ಮನೆಗೆ ಆನ್‌ಲೈನ್ ಮೂಲಕ ಸ್ನೇಹಿತರಾದವರನ್ನು ಆಹ್ವಾನಿಸುತಿದ್ದಳು. ಪುರುಷರು ಮನೆಗೆ ಹೋದ ಸಂದರ್ಭ ದೃಶ್ಯಗಳನ್ನು ರಹಸ್ಯ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಿದ್ದಳು. ಆ ವೇಳೆ ಹೊರಗಿನಿಂದ ಮೂವರ ಗ್ಯಾಂಗ್ ಮನೆಗೆ ಪ್ರವೇಶಿಸುತಿತ್ತು.
ಒಳ ಬಂದು ಇಬ್ಬರ ಅರೆನಗ್ನ ಫೋಟೋಗಳು ಮತ್ತು ವೀಡಿಯೋಗಳನ್ನು ಬಲವಂತದಿAದ ಬೆದರಿಸಿ ಸೆರೆ ಹಿಡಿದು, ಸಂತ್ರಸ್ತನ ಮೊಬೈಲ್‌ನ್ನು ಕಿತ್ತುಕೊಂಡು ಅದರಲ್ಲಿರುವ ಸಂಪರ್ಕ ಸಂಖ್ಯೆಗಳು ತಮ್ಮ ಮೊಬೈಲ್‌ಗೆ ರವಾನಿಸಿಕೊಂಡು ನಂತರ ಹಣಕ್ಕಾಗಿ ಪೀಡಿಸುತ್ತಿದ್ದರು.
ಹಣ ನೀಡದಿದ್ದರೆ ಮಹಿಳೆಯನ್ನೇ ಮದುವೆ ಆಗುವಂತೆ ಸಂತ್ರಸ್ತನಿಗೆ ಬೇಡಿಕೆ ಇಟ್ಟಿದೆ. ಆಕೆ ಅನ್ಯಕೋಮಿನ ಯುವತಿ ಆಗಿರುವುದರಿಂದ ಆಕೆಯನ್ನು ಮದುವೆಯಾಗಿ ಮತಾಂತರವಾಗಬೇಕು ಎಂದು ಒತ್ತಾಯಿಸಿದ್ದಾರೆ. ಈ ಬೇಡಿಕೆಗಳಿಂದ ಭಯಬೀತನಾದ ಯುವಕ ವಂಚಕರ ಮೊಬೈಲ್‌ಗೆ ರೂ. ೧೦ ಲಕ್ಷ ರೂಪಾಯಿ ಹಣವನ್ನು ವರ್ಗಾವಣೆ ಮಾಡಿದ್ದಾನೆ.
ನಂತರ ಧೈರ್ಯ ತಂದುಕೊAಡು ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪುಟ್ಟೇನಹಳ್ಳಿ ಪೊಲೀಸರು ತನಿಖೆ ನಡೆಸಿದಾಗ ಈ ತಂಡ ಹನಿಟ್ರಾö್ಯಪ್ ಮೂಲಕವೇ ೧೨ ಮಂದಿಯನ್ನು ಸುಲಿಗೆ ಮಾಡಿರುವುದು ಬೆಳಕಿಗೆ ಬಂದಿದೆ. ಈ ತಂಡ ಇದೇ ರೀತಿ ಹಲವು ವರ್ಷಗಳಿಂದಲೇ ಇದನ್ನೇ ದಂಧೆಯನ್ನಾಗಿ ಮಾಡಿಕೊಂಡು ಕೋಟ್ಯಂತರ ರೂಪಾಯಿ ವಸೂಲಿ ಮಾಡಿದೆ. ಆದರೆ ಹಣ ಕಳೆದುಕೊಂಡವರು ಮರ್ಯಾದೆ ಹೋಗುತ್ತದೆ ಎಂದು ಪೋಲೀಸರಿಗೆ ದೂರು ನೀಡಲು ಮುಂದಾಗಲಿಲ್ಲ ಎಂದು ಹೇಳಿರುವ ಪೊಲೀಸರು ಬಂಧಿತರ ಮೊಬೈಲ್‌ಗಳಲ್ಲಿ ನೂರಾರು ನಗ್ನ ವೀಡಿಯೋಗಳು ಸಿಕ್ಕಿದ್ದು, ಇನ್ನಷ್ಟು ಪ್ರಕರಣಗಳಲ್ಲಿ ಈ ದುಷ್ಕರ್ಮಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬAಧಿಸಿದAತೆ ಶರಣ ಪ್ರಕಾಶ ಬಳಿಗೇರ, ಅಬ್ದುಲ್ ಖಾದರ್ ಹಾಗೂ ಯಾಸೀನ್ ಎಂಬವವರನ್ನು ಪೊಲೀಸರು ಈ ಹಿಂದೆಯೂ ಇದೇ ರೀತಿಯ ಪ್ರಕರಣದಲ್ಲಿ ಬಂಧಿಸಿದ್ದರು. ಮತ್ತೋರ್ವ ಆರೋಪಿ ನದೀಮ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಪುಟ್ಟೇನಹಳ್ಳಿ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.