ಮಡಿಕೇರಿ, ಆ. ೧೭: ಮಡಿಕೇರಿ ೬೬/೧೧ ಕೆವಿ ವಿದ್ಯುತ್ ಉಪ-ಕೇಂದ್ರದಿAದ ಹೊರಹೋಗುವ ಎಫ್೪ ಮಕ್ಕಂದೂರು, ಎಫ್೧೧ ಗಾಳಿಬೀಡು ಮತ್ತು ಎಫ್೧೦ ಕುಂಡಮೇಸ್ತಿç ಫೀಡರ್‌ಗಳಲ್ಲಿ ತುರ್ತು ನಿರ್ವಹಣೆ ಕಾರ್ಯವನ್ನು ನಿರ್ವಹಿಸಬೇಕಿರುವುದರಿಂದ ತಾ.೧೯ ರಂದು ಬೆಳಗ್ಗೆ ೯ ರಿಂದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ಉಪಕೇಂದ್ರಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು.
ಆದ್ದರಿಂದ ಕರ್ಣಂಗೇರಿ, ಕೆ.ನಿಡುಗಣೆ, ಮಕ್ಕಂದೂರು, ಕಾಲೂರು, ದೇವಸ್ತೂರು, ಗಾಳಿಬೀಡು, ಆರ್‌ಟಿಒ ಕಚೇರಿ, ಕೂಟುಹೊಳೆ, ಮುಕ್ಕೋಡ್ಲು, ಆವಂಡಿ, ಹಮ್ಮಿಯಾಲ ಹಾಗೂ ಸುತ್ತಮುತ್ತಲ÷ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ವಿಭಾಗದ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.