ಮಡಿಕೇರಿ, ಆ. ೧೮: ವೀರಾಜಪೇಟೆ ಕೂರ್ಗ್ ಮಾರ್ಕ್ಸ್ಮೆನ್ ವೀರಾಜಪೇಟೆ ಇವರ ವತಿಯಿಂದ ಪ್ರತಿ ವರ್ಷದಂತೆ ಕೈಲ್‌ಪೊಳ್ದ್ ಹಬ್ಬದ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಈ ವರ್ಷವು ಏರ್ಪಡಿಸಲಾಗಿದೆ.
೯ನೇ ವರ್ಷದ ಸ್ಪರ್ಧೆಯನ್ನು ಸೆಪ್ಟೆಂಬರ್ ೩ ರಂದು ಮಧ್ಯಾಹ್ನ ೨ ಗಂಟೆಗೆ ವೀರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಸ್ಪರ್ಧೆಯಲ್ಲಿ ಭಾಗವಹಿಸಬೇಕಾಗಿ ಸಂಸ್ಥೆಯ ಅಧ್ಯಕ್ಷ ಡಾ. ಎಂ.ಸಿ. ಕಾರ್ಯಪ್ಪ ಅವರು ಕೋರಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಕಾರ್ಯದರ್ಶಿ ಸಂಪಿ ಪೂಣಚ್ಚ (ಮೊ.ಸಂ. ೮೩೧೭೩೯೭೧೮೪, ೯೪೮೨೨೪೬೩೯೦ ಅವರನ್ನು ಸಂಪರ್ಕಿಸಬಹುದು.