ಸೋಮವಾರಪೇಟೆ, ಆ. ೧೮: ಸೋಮವಾರಪೇಟೆ-ಬಾಣಾವರ ರಾಜ್ಯ ಹೆದ್ದಾರಿಯ ಮಸಗೋಡು ಬಳಿಯಲ್ಲಿ ಜೀಪ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ್ದು, ಅದೃಷ್ಟವಶಾತ್ ಎರಡೂ ವಾಹನದಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಪಟ್ಟಣದಿಂದ ಮಸಗೋಡು ಮಾರ್ಗವಾಗಿ ತಣ್ಣೀರುಹಳ್ಳಕ್ಕೆ ತೆರಳುತ್ತಿದ್ದ ಜೀಪ್ ಹಾಗೂ ತಣ್ಣೀರುಹಳ್ಳದಿಂದ ಸೋಮವಾರಪೇಟೆಗೆ ಆಗಮಿಸುತ್ತಿದ್ದ ಕಾರಿನ ನಡುವೆ ಮಸಗೋಡು ಗ್ರಾಮದ ರಸ್ತೆ ತಿರುವಿನಲ್ಲಿ ಡಿಕ್ಕಿ ಸಂಭವಿಸಿದೆ.
ಪರಿಣಾಮ ಜೀಪ್ ರಸ್ತೆಯ ಮಧ್ಯ ಭಾಗದಲ್ಲಿಯೇ ಉಲ್ಟಾ ಬಿದ್ದಿದ್ದು, ಮಸಗೋಡು ಅಂಚೆ ಕಚೇರಿ ಸಿಬ್ಬಂದಿ ಗೋವರ್ಧನ್ ಎಂಬವರು ಚಾಲಿಸುತ್ತಿದ್ದ ಕಾರು ರಸ್ತೆ ಬದಿಯ ದಿಬ್ಬಕ್ಕೆ ಗುದ್ದಿ ನಿಂತಿದೆ. ಜೀಪ್‌ನಲ್ಲಿದ್ದ ತಣ್ಣೀರುಹಳ್ಳದ ಶೇಷಪ್ಪ, ಪತ್ನಿ ಹಾಗೂ ಪುತ್ರ ಹೇಮಂತ್ ಅವರುಗಳು ಸಣ್ಣಪುಟ್ಟ ಗಾಯಗಳೊಂದಿಗೆ ಆಶ್ಚರ್ಯಕರ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆಯಿಂದ ಎರಡೂ ವಾಹನಗಳು ಜಖಂಗೊAಡಿದ್ದು, ಸ್ಥಳೀಯರು ತಕ್ಷಣ ಗಾಯಾಳುಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.