ವೀರಾಜಪೇಟೆ, ಆ. ೧೮ : ಬಿಟ್ಟಂಗಾಲ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ, ನಿಯಮಿತ ಬಿಟ್ಟಂಗಾಲ ಇದರ ಮುಂದಿನ ೫ ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಚೇಂದ್ರಿಮಾಡ ಗಣೇಶ್ ನಂಜಪ್ಪ, ಉಪಾಧ್ಯಕ್ಷರಾಗಿ ನಾಣಮಂಡ ಸವಿತಾ ಮಾಚಯ್ಯ ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗುಡ್ಡಂಡ ಜಿ ಬೊಪಣ್ಣ, ಚೇಂದ್ರಿಮಾಡ ದೇವಯ್ಯ, ಮೂರೀರ ಹರೀಶ್, ಪೊನ್ನಿರ ಜೋಯಪ್ಪ, ಚೇಂದAಡ ನಂಜಪ್ಪ, ಮಾಚೆಟ್ಟಿರ ಪೂಮಾಲೆ, ಪೊನ್ನಕಚ್ಚಿರ ಬಿದ್ದಪ್ಪ, ಕುಪ್ಪಂಡ ನಾಣಯ್ಯ, ಬಿ.ಎನ್ ಯೋಗೇಶ್, ಹೆಚ್. ಪುಟ್ಟಯ್ಯ, ಕುರುಬರ ಕ್ಯಾತ ಅವರುಗಳು ನಿರ್ದೇಶಕರುಗಳಾಗಿ ಆಯ್ಕೆಯಾಗಿದ್ದರೆ.