ಮಡಿಕೇರಿ, ಆ. ೧೭: ತಾ.೫ ರಂದು ಚಂದ್ರನ ಕಕ್ಷೆಯನ್ನು ಸೇರಿದ ಚಂದ್ರಯಾನ-೩ ನೌಕೆಯ ಪ್ರೊಪಲ್ಶನ್ ಮಾಡ್ಯುಲ್ ಇದೀಗ ವಿಕ್ರಂ ಲ್ಯಾಂಡರ್ ನಿಂದ ಬೇರ್ಪಟ್ಟಿದೆ. ಈ ಮೂಲಕ ತನಗೆ ನೀಡಲಾದ ಕಾರ್ಯವನ್ನು ಮಾಡ್ಯುಲ್ ಯಶಸ್ವಿಯಾಗಿ ಪೂರೈಸಿದೆ. ಚಂದ್ರ ನೆಲದಲ್ಲಿ ಲ್ಯಾಂಡ್ ಆಗಲಿರುವ ವಿಕ್ರಂ ಲ್ಯಾಂಡರ್ ಹಾಗೂ ಅದರೊಳಗಿರುವ, ಚಂದ್ರ ನೆಲದಲ್ಲಿ ಚಲಿಸಲಿರುವ ಪ್ರಾಗ್ಯಾನ್ ರೋವರ್ (ಇವೆರಡು ಸೇರಿ ಒಟ್ಟಿಗೆ ಲೂನಾರ್ ಮಾಡ್ಯುಲ್ ಎಂದು ಕರೆಯಲಾಗುತ್ತದೆ) ಇದೀಗ ಚಂದ್ರ ಪದರದಿಂದ ಕನಿಷ್ಟ - ಗರಿಷ್ಠ (೧೫೩ ಕಿ.ಮೀ, ೧೬೩ ಕಿ.ಮೀ) ದೂರದಲ್ಲಿ ಬಹುತೇಕ ವೃತ್ತಾಕಾರದ ಕಕ್ಷೆಯಲ್ಲಿ ಪ್ರದಕ್ಷಿಸುತ್ತಿದೆ. ತಾ.೧೯ ರಂದು ಈ ದೂರ ಇನ್ನಷ್ಟು ಕಡಿಮೆಯಾಗಲಿದೆ. ೧೦೦- ೧೦೦ ಕಿ.ಮಿ ಹಾಗೂ ೧೦೦-೩೦ ಕಿ.ಮೀ. ಗರಿಷ್ಠ - ಕನಿಷ್ಟ ದೂರದಲ್ಲಿ ಲೂನಾರ್ ಮಾಡ್ಯೂಲ್ ಸ್ವತಃ ಕಕ್ಷಾ ಅಳತೆ ಇಳಿಕೆ ಮಾಡಿ ಬಳಿಕ ತಾ.೨೩ ರಂದು ಚಂದ್ರನ ನೆಲಕ್ಕೆ ಲ್ಯಾಂಡ್ ಆಗಲಿದೆ.
ಚಂದ್ರಯಾನ - ೩: ಪ್ರೊಪಲ್ಶನ್ ಮಾಡ್ಯುಲ್‌ನಿಂದ ಬೇರ್ಪಟ್ಟ ಲ್ಯಾಂಡರ್
(ಮೊದಲ ಪುಟದಿಂದ) ಬೇರ್ಪಟ್ಟಿರುವ ಪ್ರೊಪಲ್ಶನ್ ಮಾಡ್ಯೂಲ್ ಕೆಲ ತಿಂಗಳುಗಳ ಕಾಲ ಚಂದ್ರನ ಕಕ್ಷೆಯಲ್ಲಿ ಪ್ರದಕ್ಷಿಣೆ ಮುಂದುವರಿಸಲಿದ್ದು, ಇಲ್ಲಿಂದಲೇ ಭೂಮಿಯ ವಾತಾವರಣದ ‘ಸ್ಪೆಕ್ಟçಲ್ ಸಿಗ್ನೇಚರ್ಸ್’ ಬಗ್ಗೆ ಅಧ್ಯಯನ ನಡೆಸಲಿದೆ. ಈಗಾಗಲೇ ಚಂದ್ರಯಾನ ೨ ಆರ್ಬಿಟರ್ ಚಂದ್ರ ಕಕ್ಷೆಯಲ್ಲಿ ಇನ್ನೂ ಸಹ ತಿರುಗುತ್ತಾ ಅಧ್ಯಯನ ನಡೆಸುತ್ತಿರುವ ಕಾರಣ ಇದೀಗ ಲ್ಯಾಂಡರ್‌ನಿAದ ಬೇರ್ಪಟ್ಟಿರುವ ಪ್ರೊಪಲ್ಶನ್ ಮಾಡ್ಯುಲ್‌ಗೆ ಹೆಚ್ಚಿನ ಕೆಲಸವಿಲ್ಲದ ಕಾರಣ ಚಂದ್ರನ ಅಧ್ಯಯನದಲ್ಲಿ ತೊಡಗಿಸಿಕೊಳ್ಳುವುದಿಲ್ಲ ಎಂಬುದಾಗಿ ಇಸ್ರೋ ಮಾಹಿತಿ ನೀಡಿದೆ. ಆದಾಗ್ಯು ಲ್ಯಾಂಡರ್ - ರೋವರ್ ಜೋಡಿಯನ್ನು ಭೂಮಿಯಿಂದ ಚಂದ್ರನೆಡೆಗೆ ತಲುಪಿಸುವಲ್ಲಿ ಪ್ರೊಪಲ್ಶನ್ ಮಾಡ್ಯುಲ್ ಪ್ರಮುಖ ಪಾತ್ರ ವಹಿಸಿ ಯಶಸ್ವಿಯಾಗಿದೆ.