ನಾಪೋಕ್ಲು, ಆ. ೧೭: ಮಳೆಗಾಗಿ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಗುರುವಾರ ಅಖಿಲ ಕೊಡವ ಸಮಾಜ, ದೇವಸ್ಥಾನದ ಭಕ್ತ ಜನ ಸಂಘದ ನೇತೃತ್ವದಲ್ಲಿ ವಿವಿಧ ಕೊಡವ ಸಮಾಜ, ವಿವಿಧ ಸಂಘ ಸಂಸ್ಥೆಗಳು ತಕ್ಕ ಮುಖ್ಯಸ್ಥರು ಸೇರಿದಂತೆ ಕೊಡಗಿನ ಮೂಲನಿವಾಸಿ ಜನಾಂಗದವರು ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಮಾತನಾಡಿ, ಕೊಡಗಿನಲ್ಲಿ ಹಿಂದೆAದೂ ಕಂಡು ಕೇಳರಿಯದ ರೀತಿಯಲ್ಲಿ ಮಳೆಯ ಕೊರತೆ ಕಾಣಿಸಿಕೊಂಡಿದ್ದು, ಮಳೆಯ ಕೊರತೆಯಿಂದ ಭತ್ತ ಬೆಳೆಯುವ ಪ್ರದೇಶ ಪಾಳು ಬೀಳುತ್ತಿವೆ. ಕಾಫಿ, ಕರಿಮೆಣಸು ಏಲಕ್ಕಿಗೂ ಬಿಸಿ ತಟ್ಟಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು ಮಾನವ ಕುಲ ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಕೂಡ ನೀರಿಲ್ಲದೆ ಪರಿತಪಿಸುವ ಸೂಚನೆ ಕಾಣುತ್ತಿದೆ. ಇದನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಮಳೆ ಇಲ್ಲದೆ ಕೃಷಿಯನ್ನೇ ನಂಬಿ ಬದುಕುವ ಕೊಡಗಿನ ಜನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ನೆಲ ಬರಡಾಗಿದೆ. ಜಲ ಬತ್ತಿ ಹೋಗಿದೆ. ಜೀವಸಂಕುಲ, ಸಸ್ಯ ಸಂಕುಲ ನಾಶವಾಗಲಿದೆ. ಈಶ್ವರ ಇಗ್ಗುತ್ತಪ್ಪ ನಂಬಿದ ಜನರ ಕೈ ಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಜಿಲ್ಲೆಯ ಜನರ ರಕ್ಷಣೆ ಮಾಡುವ ಜವಾಬ್ದಾರಿ ಇಗ್ಗುತಪ್ಪನಿಗೆ ಸೇರಿದ್ದು. ಎಲ್ಲರೂ ಸುಖ, ಶಾಂತಿ ನೆಮ್ಮದಿಯಿಂದ ಬಾಳುವಂತಾಗಲು ಉತ್ತಮ ಮಳೆ ಕರುಣಿಸಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು. ಪೂಜೆಯ ಬಳಿಕ ಕೆಲವೆಡೆ ಮಳೆಯೂ ಆಗಿದೆ.

ಈ ಸಂದರ್ಭ ಪಾಡಿ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ, ಬೆಳೆಯುವ ಪ್ರದೇಶ ಪಾಳು ಬೀಳುತ್ತಿವೆ. ಕಾಫಿ, ಕರಿಮೆಣಸು ಏಲಕ್ಕಿಗೂ ಬಿಸಿ ತಟ್ಟಿದೆ. ಕುಡಿಯುವ ನೀರಿಗೂ ಹಾಹಾಕಾರ ಎದುರಾಗಲಿದ್ದು ಮಾನವ ಕುಲ ಮಾತ್ರವಲ್ಲ, ಪ್ರಾಣಿಪಕ್ಷಿಗಳಿಗೂ ಕೂಡ ನೀರಿಲ್ಲದೆ ಪರಿತಪಿಸುವ ಸೂಚನೆ ಕಾಣುತ್ತಿದೆ. ಇದನ್ನು ಮನಗಂಡು ಮಳೆ ಬೆಳೆ ದೇವರಾದ ಇಗ್ಗುತಪ್ಪನಲ್ಲಿ ಪ್ರಾರ್ಥಿಸಿದ್ದೇವೆ ಎಂದರು.

ಮಳೆ ಇಲ್ಲದೆ ಕೃಷಿಯನ್ನೇ ನಂಬಿ ಬದುಕುವ ಕೊಡಗಿನ ಜನ ಸಮಸ್ಯೆ ಎದುರಿಸುವಂತಾಗಿದೆ. ಇಲ್ಲಿನ ನೆಲ ಬರಡಾಗಿದೆ. ಜಲ ಬತ್ತಿ ಹೋಗಿದೆ. ಜೀವಸಂಕುಲ, ಸಸ್ಯ ಸಂಕುಲ ನಾಶವಾಗಲಿದೆ. ಈಶ್ವರ ಇಗ್ಗುತ್ತಪ್ಪ ನಂಬಿದ ಜನರ ಕೈ ಬಿಡುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ. ಜಿಲ್ಲೆಯ ಜನರ ರಕ್ಷಣೆ ಮಾಡುವ ಜವಾಬ್ದಾರಿ ಇಗ್ಗುತಪ್ಪನಿಗೆ ಸೇರಿದ್ದು. ಎಲ್ಲರೂ ಸುಖ, ಶಾಂತಿ ನೆಮ್ಮದಿಯಿಂದ ಬಾಳುವಂತಾಗಲು ಉತ್ತಮ ಮಳೆ ಕರುಣಿಸಿ ಸಮೃದ್ಧಿಯಾಗಲಿ ಎಂದು ಪ್ರಾರ್ಥಿಸಿದರು. ಪೂಜೆಯ ಬಳಿಕ ಕೆಲವೆಡೆ ಮಳೆಯೂ ಆಗಿದೆ.

ಈ ಸಂದರ್ಭ ಪಾಡಿ ಇಗ್ಗುತ್ತಪ್ಪ ದೇವಾಲಯದ ಭಕ್ತ ಜನ ಸಂಘದ ಅಧ್ಯಕ್ಷ ಕಾಂಡAಡ ಜೋಯಪ್ಪ,

ಮೋಟಯ್ಯ, ವೀರಾಜಪೇಟೆ ನಾಗರಿಕ ವೇದಿಕೆ ಅಧ್ಯಕ್ಷ ಮುಲ್ಲೇಂಗಡ ಶಂಕರಿ ಪೊನ್ನಪ್ಪ, ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಕೊಡವ ರೈಡರ್ಸ್ ಕ್ಲಬ್ ಅಧ್ಯಕ್ಷ, ಅಜ್ಜಿಕುಟ್ಟಿರ ಪೃಥ್ಯು ಸುಬ್ಬಯ್ಯ, ಬಾಚೀರ ಜಗದೀಶ್, ಉದಿಯಂಡ ಮೋಹನ್, ಅಪ್ಪಾರಂಡ ಸುಧೀರ್, ದೇವಾಲಯದ ತಕ್ಕಮುಖ್ಯಸ್ಥ ಪರದಂಡ ಪ್ರಿನ್ಸ್ ತಮ್ಮಯ್ಯ ಸೇರಿದಂತೆ ಪ್ರಮುಖರಾದ ಅಪ್ಪಾರಂಡ ಸುಧೀರ್, ಬಡ್ಡೀರ ರಾಜಪ್ಪ, ಚಮ್ಮಟ್ಟೀರ ಅಯ್ಯಪ್ಪ, ಕೇಚಂಡ ಕುಶಾಲಪ್ಪ, ಕಳ್ಳಿಚಂಡ ರಾಬಿನ್ ಸುಬ್ಬಯ್ಯ ಇನ್ನಿತರರು ಹಾಜರಿದ್ದರು. ಈ ಸಂದರ್ಭ ವಿಶೇಷ ಮಹಾಪೂಜೆಯನ್ನು ಅರ್ಚಕ ಜಗದೀಶ್ ಮತ್ತು ಶ್ರೀಕಾಂತ್ ನೆರವೇರಿಸಿದರು.

-ದುಗ್ಗಳ