ಸೋಮವಾರಪೇಟೆ, ಆ. ೧೫: ಬಹುಭಾಷೆ, ಬಹುಧರ್ಮ, ಬಹು ಸಂಸ್ಕೃತಿಯ ನಾಡು ಕಟ್ಟುವಲ್ಲಿ ಹಿರಿಯರ ತ್ಯಾಗ, ಬಲಿದಾನ, ಹೋರಾಟದ ಪ್ರಯತ್ನ ಇದೆ. ಅವರ ಸೇವೆಯ ಸ್ಮರಣೆ ಇಂದಿನ ಅಗತ್ಯ ವಾಗಿದೆ ಎಂದು ತಾಲೂಕು ತಹ ಶೀಲ್ದಾರ್ ಎಸ್.ಎನ್. ನರಗುಂದ್ ಹೇಳಿದರು.
ತಾಲೂಕು ಆಡಳಿತ ಹಾಗೂ ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಸರಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ೭೭ನೇ ವರ್ಷದ ಸ್ವಾತಂತ್ರೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ದೇಶಪ್ರೇಮವು ಜಾತಿ, ಧರ್ಮ ಮತ್ತು ಸಂಸ್ಕೃತಿಗಳನ್ನು ಮೀರಿ ಮನುಷ್ಯರೆಲ್ಲ ಒಂದೇ ಎಂಬ ಭಾವದಲ್ಲಿ ನಮ್ಮನ್ನು ಬೆಸೆಯಬೇಕು. ದೇಶ ಪ್ರೇಮ ಎಂದಿಗೂ ಸ್ವಾತಂತ್ರö್ಯ ದಿನಾಚರಣೆಯ ಸಂಭ್ರಮಕ್ಕಷ್ಟೇ ಸೀಮಿತವಾಗಬಾರದು. ದೇಶದಲ್ಲಿ ತುಂಬಿರುವ ಬಡತನ, ನಿರುದ್ಯೋಗ, ಭ್ರಷ್ಟಾಚಾರ, ಡ್ರಗ್ಸ್ ಜಾಲ, ನಕ್ಸಲ್ಚಟುವಟಿಕೆಯನ್ನು ಹೋಗ ಲಾಡಿಸುವ ಪ್ರಯತ್ನ ಆಗಬೇಕಿದೆ. ಆಗ ಮಾತ್ರ ನಿಜವಾದ ಸ್ವಾತಂತ್ರö್ಯದ ಆಚರಣೆಗೆ ಅರ್ಥ ಬರುತ್ತದೆ ಎಂದು ಅಭಿಪ್ರಾಯಿಸಿದರು.
ದಿನದ ಮಹತ್ವದ ಕುರಿತು ಸುಂಟಿಕೊಪ್ಪ ಶಾಲಾ ಬಾಲಕಿ ಶ್ರೀಷಾ, ಹಿರಿಯ ವಕೀಲ ಹೆಚ್.ಸಿ. ನಾಗೇಶ್, ಎಸ್.ಎಂ. ಚಂಗಪ್ಪ ಮಾತನಾಡಿದರು. ಇದೇ ಸಂದರ್ಭ ಮಾಜಿ ಸೈನಿಕರಾದ ಎಸ್.ಎಂ. ಸುಬ್ರಮಣ್ಯ ಹಾಗೂ ಬಿ.ಆರ್. ಈರಪ್ಪ ಅವರನ್ನು ಸನ್ಮಾನಿಸಲಾಯಿತು.
ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿ.ಎಸ್. ಗೀತಾ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಚೌಡ್ಲು ಗ್ರಾ.ಪಂ. ಉಪಾಧ್ಯಕ್ಷ ನತೀಶ್ ಮಂದಣ್ಣ, ವಕೀಲ ಬಿ.ಈ. ಜಯೇಂದ್ರ, ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಸದಸ್ಯರು, ಪಟ್ಟಣ ಪಂಚಾಯಿತಿ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತ ರಿದ್ದರು. ಶಾಲಾ ವಿದ್ಯಾರ್ಥಿಗಳಿಂದ ದೇಶಭಕ್ತಿ ಗೀತೆಗಾಯನ ಕಾರ್ಯಕ್ರಮ ನಡೆಯಿತು.