ಬೆAಗಳೂರು, ಆ. ೧೬: ಹನಿಟ್ರಾö್ಯಪ್ ಜಾಲಕ್ಕೆ ಸಿಲುಕಿಸಿ ಹಣ ಸುಲಿಗೆ ಮಾಡುತ್ತಿದ್ದ ದಂಪತಿ ಸೇರಿ ಮೂವರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ಶ್ರೀನಗರದಲ್ಲಿ ನೆಲೆಸಿರುವ ನಿವೃತ್ತ ಸರ್ಕಾರಿ ನೌಕರ ನಾಗಿರುವ ಸುಧೀಂದ್ರ ಎಂಬವರಿಗೆ ಆರೋಪಿಗಳು ಬರೋಬ್ಬರಿ ೮೨ ಲಕ್ಷ ರೂಪಾಯಿ ವಂಚಿಸಿದ್ದಾರೆ.

ಸುಧೀAದ್ರ ನೀಡಿದ ದೂರಿನ ಮೇರೆಗೆ ಅಣ್ಣಮ್ಮ, ಲೋಕೇಶ್ ಹಾಗೂ ಸ್ನೇಹ ಎಂಬವರನ್ನ ಬಂಧಿಸಲಾಗಿದೆ. ಬಂಧಿತರಲ್ಲಿ ಮುಖ್ಯ ಆರೋಪಿ ಅಣ್ಣಮ್ಮ ಸುಂಟಿಕೊಪ್ಪದವರಾಗಿದ್ದು, ಲೋಕೇಶ್ ಬೆಟ್ಟಗೇರಿ, ಸ್ನೇಹಾ ಎಂಬವರು ಬೆಂಗಳೂರಿನವ ರಾಗಿದ್ದಾಳೆ. ಈ ಎಲ್ಲ ಆರೋಪಿಗಳೂ ಬೊಮ್ಮನಹಳ್ಳಿಯಲ್ಲಿ ಒಂದೇ ಮನೆಯಲ್ಲಿ ವಾಸವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಪ್ರಕರಣ ಪ್ರಮುಖ ಆರೋಪಿ ಅಣ್ಣಮ್ಮ ತನ್ನ ೫ ವರ್ಷದ ಮಗನಿಗೆ ಕ್ಯಾನ್ಸರ್ ಇದೆ ಹಣಕಾಸಿನ ನೆರವು ನೀಡುವಂತೆ ಪರಿಚಯಸ್ಥರಾಗಿದ್ದ ಸುಧೀಂದ್ರ ಅವರನ್ನು ಕೋರಿಕೊಂಡಿದ್ದಳು. ಇವಳ ಕಷ್ಟಕ್ಕೆ ಮರುಗಿದ ಸುಧೀಂದ್ರ ಈಕೆಗೆ ಐದು ಸಾವಿರ ರೂಪಾಯಿ ಸಹಾಯ ಮಾಡಿದ್ದರು. ನಂತರ ಇಬ್ಬರ ನಡುವಿನ ಪರಿಚಯ ಸಲುಗೆಗೆ ತಿರುಗಿತ್ತು. ಮೇ ತಿಂಗಳ ಮೊದಲ ವಾರದಲ್ಲಿ ಎಲೆಕ್ಟಾçನಿಕ್ ಸಿಟಿ ಬಳಿಯ ಹೂಸ್ಕೂರು ಗೇಟ್ ಬಳಿ ಹೊಟೇಲ್ ಒಂದರ ರೂಮ್‌ಗೆ ಬರಲು ಹೇಳಿದ ಅಣ್ಣಮ್ಮ ಸುಧೀಂದ್ರನೊAದಿಗೆ ಲೈಂಗಿಕ ಸಂಪರ್ಕ ಮಾಡಿದ್ದಳು. ಅಲ್ಲದೇ, ಈ ಮೊದಲೇ ರಹಸ್ಯವಾಗಿ ಕ್ಯಾಮೆರಾ ಅಳವಡಿಸಿ ವೀಡಿಯೋ ಮಾಡಿ ಕೊಂಡಿದ್ದಳು. ಇದೇ ರೀತಿ ಎರಡು ಬಾರಿ ಬೇರೆ ಬೇರೆ ಕಡೆಗೆ ಕರೆಸಿ ಕೊಂಡಿದ್ದರು ಎನ್ನಲಾಗಿದೆ.

ಇದಾದ ಬಳಿಕ ಅಣ್ಣಮ್ಮ ಬೆತ್ತಲೆ ವೀಡಿಯೋಗಳನ್ನು ಸುಧೀಂದ್ರ ಅವರಿಗೆ ಕಳುಹಿಸಿ ಹಣಕ್ಕಾಗಿ ಪೀಡಿಸಿದ್ದಾಳೆ. ಬಳಿಕ ಹಣ ನೀಡದಿದ್ದರೆ ಫೋಟೋ ಹಾಗೂ ವೀಡಿಯೋಗಳನ್ನ ಕುಟುಂಬ ಹಾಗೂ ಸ್ನೇಹಿತರಿಗೆ ಕಳುಹಿಸುವುದಾಗಿ

ಬೆದರಿಕೆ ಹಾಕಿದ್ದು, ಅಲ್ಲದೇ

ಸ್ನೇಹ ಎಂಬಾಕೆಗೂ ಕಳುಹಿಸಿ ಆಕೆಯಿಂದಲೂ ಬ್ಲಾö್ಯಕ್ ಮೇಲ್ ಮಾಡಿದ ಬಗ್ಗೆ ದೂರು ಬಂದಿದೆ. ಮರ್ಯಾದೆಗೆ ಅಂಜಿ ಅವರು ಹಂತ-ಹAತವಾಗಿ ರೂ. ೮೨ ಲಕ್ಷದವರೆಗೂ ನೀಡಿದ್ದಾರೆ. ಈ ಕೃತ್ಯಕ್ಕೆ ಸ್ನೇಹ ಪತಿ ಲೋಕೇಶ್ ಸಾಥ್ ನೀಡಿದ್ದ. ಆದರೆ ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ಮತ್ತೆ ೪೨ ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಇವರ ಕಾಟ ಮಿತಿ ಮೀರಿದಾಗ ಸುಧೀಂದ್ರ ಅವರು ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ

(ಮೊದಲ ಪುಟದಿಂದ) ಕೈಗೊಂಡ ಪೊಲೀಸರು ಮೂವರನ್ನು ಬಂಧಿಸು ವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿ ಗಳ ವಿರುದ್ಧ ವಿವಿಧ ಸೆಕ್ಷನ್ ಅನ್ವಯ ಮೊಕದ್ದಮೆ ದಾಖಲಾಗಿದ್ದು ೩೭ನೇ ಸಿಟಿ ಸಿವಿಲ್ ನ್ಯಾಯಾಲಯಕ್ಕೆ ಹಾಜ ರುಪಡಿಸಲಾಗಿದೆ. ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ಅವರು ಮಾಹಿತಿ ನೀಡಿ ಐಪಿಸಿ ಸೆಕ್ಷನ್ ೪೨೦, ೩೮೪, ೫೦೪, ೫೦೬, ಅಡಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಇದೇ ರೀತಿ ಮತ್ತಷ್ಟು ಜನರಿಗೆ ಹನಿಟ್ರಾö್ಯಪ್ ಮಾಡಿ ಹಣ ವಸೂಲಿ ಮಾಡಿರುವ ಸಾಧ್ಯತೆ ಇದ್ದು, ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು. ಈ ಬಂಧಿತರಿAದ ಲೂಟಿ ಮಾಡಿರುವ ಹಣದಲ್ಲಿ ಶೇಕಡಾ ೩೦ ರಷ್ಟು ಹಣ ವಸೂಲಿ ಮಾಡ ಲಾಗಿದ್ದು, ಉಳಿದ ಹಣ ವಶಪಡಿಸಿ ಕೊಳ್ಳಲು ಪ್ರಯತ್ನ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.