ಮಡಿಕೇರಿ, ಆ. ೧೫: ಬೇಂಗೂರು ಗ್ರಾಮ ಪಂಚಾಯಿತಿ ವಾರ್ಡ್ ಸಭೆಗಳು ತಾ. ೧೭ ಹಾಗೂ ತಾ. ೧೮ ರಂದು ನಡೆಯಲಿದೆ. ತಾ. ೧೭ ರಂದು ಬೆಳಿಗ್ಗೆ ೧೦.೩೦ಕ್ಕೆ ಐವತ್ತೋಕ್ಲು ಶಾಲಾ ಆವರಣದಲ್ಲಿ ಸದಸ್ಯೆ ಟಿ.ಕೆ. ಸ್ವಾತಿ ಅಧ್ಯಕ್ಷತೆಯಲ್ಲಿ, ಮಧ್ಯಾಹ್ನ ೨ಕ್ಕೆ ಬಿ. ಬಾಡಗ ಪ್ರಾಥಮಿಕ ಶಾಲಾ ಆವರಣದಲ್ಲಿ ಟಿ.ಎಸ್. ಚೇತಕ್ ಅಧ್ಯಕ್ಷತೆ ಯಲ್ಲಿ, ತಾ. ೧೮ರಂದು ಬೆಳಿಗ್ಗೆ ೧೦.೩೦ಕ್ಕೆ ಕೊಳಗದಾಳು ಪ್ರಾಥಮಿಕ ಶಾಲೆ ಆವರಣದಲ್ಲಿ, ಮಧ್ಯಾಹ್ನ ೨ಕ್ಕೆ ಪಂಚಾಯಿತಿ ಕಚೇರಿ ಆವರಣದಲ್ಲಿ ಸದಸ್ಯೆ ಎಂ. ಬಿಂದು ಅಧ್ಯಕ್ಷತೆಯಲ್ಲಿ ಸಭೆಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.