ಗೋಣಿಕೊಪ್ಪಲು, ಆ. ೧೫: ದೇಶದ ಸರ್ವಾಂಗೀಣ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸೋಣ, ಸ್ವಾತಂತ್ರö್ಯ ಕ್ಕಾಗಿ ಬಲಿದಾನ ಮಾಡಿದ ಹುತಾತ್ಮ ರನ್ನು ನೆನೆಯೋಣ, ಸತತ ಹೋರಾ ಟದ ಫಲವಾಗಿ ಲಭಿಸಿರುವ ಸ್ವಾತಂತ್ರö್ಯದ ಸವಿಯನ್ನು ಉಣಬಡಿ ಸೋಣ. ಪ್ರತಿ ಪ್ರಜೆಯು ತಾನು ಭಾರತೀಯ, ನನ್ನ ದೇಶ ಭಾರತ, ದೇಶ ಸೇವೆಯೇ ನನ್ನ ಗುರಿ ಎಂದು ದೇಶಪ್ರೇಮ ಹಾಗೂ ದೇಶಭಕ್ತಿಯನ್ನು ಇಂದು ಪ್ರತಿ ನಾಗರಿಕ ರಕ್ತಗತವಾಗಿಸಿ ಕೊಳ್ಳಬೇಕಾಗಿದೆ ಎಂದು ಪೊನ್ನಂ ಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಕರೆ ನೀಡಿದರು.
ರಾಷ್ಟಿçÃಯ ಹಬ್ಬಗಳ ಆಚರಣಾ ಸಮಿತಿ ಹಾಗೂ ತಾಲೂಕು ಆಡಳಿತ ವತಿಯಿಂದ ಪೊನ್ನಂಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣ ದಲ್ಲಿ ಸ್ವಾತಂತ್ರೊö್ಯÃತ್ಸವ ದಿನಾಚರ ಣೆಯ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಧ್ವಜರೋಹಣ ನೆರವೇರಿಸಿ ಮಾತನಾಡಿದರು.
ತನ್ನ ತಾಯ್ನಾಡನ್ನು ಉಗ್ರರಿಂದ, ಭಯೋತ್ಪಾದಕರಿಂದ ರಕ್ಷಿಸಿ ಪ್ರೀತಿ, ಪ್ರೇಮ ಸಾಮರಸ್ಯವನ್ನು ಜೀವಾಳ ವಾಗಿರಿಸಿಕೊಂಡು ಸ್ತಿçà ರಕ್ಷಣೆ, ಸ್ತಿçà ಸ್ಥಾನಮಾನಕ್ಕೆ ಒತ್ತು ನೀಡಿದಾಗ ಮಾತ್ರ ತಮ್ಮ ಜೀವ ಮತ್ತು ಜೀವನವನ್ನು ಪಣವಾಗಿಟ್ಟು ಶ್ರಮಿಸಿ ಸ್ವಾತಂತ್ರö್ಯ ದೊರಕಿಸಿಕೊಟ್ಟ ದಿವ್ಯಾತ್ಮ ಗಳಿಗೆ ಮುಕ್ತಿ ದೊರಕಿಸಿಕೊಟ್ಟಂತಾ ಗುವುದು ಆ ಮೂಲಕ ಸ್ವಾತಂತ್ರö್ಯದ ಆಚರಣೆಗೆ ನ್ಯಾಯ ಒದಗಿಸಿಕೊಟ್ಟಂ ತಾಗುವುದು ಪ್ರಜೆಗಳು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು. ಸ್ವಾತಂತ್ರö್ಯ ಲಭಿಸಿ ವರ್ಷಗಳು ಉರುಳುತ್ತಿವೆ ಹೊರತು ದೇಶದಿಂದ ಪಿಡುಗುಗಳು ಮರೆಯಾಗುತ್ತಿಲ್ಲ. ತ್ರಿವರ್ಣ ಧ್ವಜವು ಕೆಂಪುಕೋಟೆಯ ಮೇಲೆ ಸ್ವಾತಂತ್ರö್ಯವಾಗಿ ರಾರಾಜಿಸಿ ದರೂ ಇನ್ನೂ ಭಾತರದ ಹಲವೆಡೆ ಸ್ವಾತಂತ್ರö್ಯ ಮರಿಚೀಕೆಯಾಗಿಯೇ ಉಳಿದಿದೆ ಎಂದು ಭಾಸವಾಗುತ್ತಿದೆ. ದೇಶದಲ್ಲಿ ಅಲ್ಲಲ್ಲಿ ದಿನನಿತ್ಯ ಕೊಲೆ ಸುಲಿಗೆ ಘಟನೆಗಳು ದೇಶದಲ್ಲಿನ ಸಾಮರಸ್ಯದ ಕೊರತೆಯನ್ನು ಎತ್ತಿ ತೋರಿಸುತ್ತಿದೆ. ದೇಶದ ಪ್ರತಿ ನಾಗರಿಕ ನಮ್ಮ ಕಾನೂನನ್ನು ಗೌರವಿಸುವಂತಾ ಗಬೇಕು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟು ಕೊಳ್ಳಬೇಕು. ಎಲ್ಲಾ ಧರ್ಮದ ಜನ ರನ್ನು ಗೌರವದಿಂದ ಕಾಣುವಂತಾ ಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ಕಿಗ್ಗಟ್ಟ್ನಾಡು ಹಿರಿಯ ನಾಗರಿಕ ವೇದಿಕೆಯ ಸ್ಥಾಪಕ ಅಧ್ಯಕ್ಷ ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಕರ್ನಾಟಕ ಮಾಜಿ ಸೈನಿಕರ ಸಂಘ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಕೊಟ್ಟುಕತ್ತಿರ ಪಿ. ಸೋಮಣ್ಣ ಸಭೆಯನ್ನು ಉದ್ದೇಶಿಸಿ ಮಾತನಾಡಿ ದರು. ವೇದಿಕೆಯಲ್ಲಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಪ್ರೀತಿ ಚಿಕ್ಕಮಾದು, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಂ.ಕೆ. ದೀನಾ, ಪ್ರಾಂಶುಪಾಲ ರಮೇಶ್, ಕಾಲೇಜಿನ ಉಪ ಪ್ರಾಂಶುಪಾಲರಾದ ಚಂಗಪ್ಪ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ಯತಿರಾಜ್, ಡಾ.ಶಾಂತೇಶ್, ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜ್ ಮುಂತಾದವರು ಹಾಜರಿದ್ದರು.
ಕಾರ್ಯಕ್ರಮದಲ್ಲಿ ಪೊನ್ನಂಪೇಟೆ ನಾಗರಿಕ ವೇದಿಕೆಯ ಪದಾಧಿಕಾರಿಗಳು, ಪೊನ್ನಂಪೇಟೆ ಠಾಣಾಧಿಕಾರಿ ನವೀನ್, ಗೋಣಿಕೊಪ್ಪ ಠಾಣಾಧಿಕಾರಿ ರೂಪ ಬೀರಾದರ್ ರೆವಿನ್ಯೂ ಅಧಿಕಾರಿಗಳಾದ ಸುಧೀಂದ್ರ ಸೇರಿದಂತೆ ಇತರ ಸಂಘ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಶಿಕ್ಷಕವೃಂದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಶಾಲಾ ಮೈದಾನದಲ್ಲಿ ಪೊಲೀಸ್ ಇಲಾಖೆ, ಎನ್ಸಿಸಿ ಘಟಕ ಹಾಗೂ ವಿದ್ಯಾರ್ಥಿಗಳಿಂದ ಹಮ್ಮಿಕೊಳ್ಳಲಾಗಿದ್ದ ಕವಾಯತ್ತಿನಲ್ಲಿ ತಾಲೂಕು ದಂಡಾಧಿಕಾರಿಗಳು ಹಾಗೂ ತಹಶೀಲ್ದಾರ್ ಪ್ರಶಾಂತ್ ಗೌರವ ವಂದನೆ ಸ್ವೀಕರಿಸಿದರು. ತೆರೆದ ವಾಹನದಲ್ಲಿ ತಾಲೂಕು ದಂಡಾಧಿಕಾರಿಗಳು ತೆರಳಿದರು. ಸಭಾ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜುನಾಥ್ ಸ್ವಾಗತಿಸಿ ವಂದಿಸಿದರು. ಶಿಕ್ಷಕರು ರೈತಗೀತೆ ಹಾಡಿ, ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸ್ಥಳೀಯ ಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟ ದೇಶಭಕ್ತಿ ಸಾರುವ ನೃತ್ಯ ಗಮನ ಸೆಳೆಯಿತು.