ಕೂಡಿಗೆ, ಆ, ೧೫: ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಅರೆ ಮಲೆನಾಡು ಪ್ರದೇಶಗಳ ೫ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪೦ಕ್ಕೂ ಹೆಚ್ಚು ಉಪ ಗ್ರಾಮಗಳಲ್ಲಿ ಮಳೆ ಆಧಾರಿತವಾಗಿ ಹೆಚ್ಚು ಮೆಕ್ಕೆಜೋಳ ವನ್ನು ಬೆಳೆಸಲಾಗಿದೆ ಈ ಬೆಳೆಯು ಈಗಾಗಲೇ ತೆನೆ ಕಟ್ಟಲು ಆರಂಭ ಗೊಂಡಿದ್ದು, ರೈತರು ಗೊಬ್ಬರವನ್ನು ಹಾಕುವಲ್ಲಿ ತೊಡಗಿದ್ದಾರೆ.
ಕುಶಾಲನಗರ ತಾಲೂಕು ವ್ಯಾಪ್ತಿಯ ಸಿದ್ದಲಿಂಗಪುರ, ಅಳುವಾರ, ಸೀಗೆಹೊಸೂರು, ಆರನೇ ಹೊಸಕೋಟೆ, ಭುವನಗಿರಿ ಹೆಬ್ಬಾಲೆ, ಶಿರಂಗಾಲ ಚಿಕ್ಕತ್ತೂರು, ಗ್ರಾಮಗಳಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಸಲಾಗಿದೆ.