ಸೋಮವಾರಪೇಟೆ, ಆ. ೧೬: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಾರಗಡಿಗೆ, ಮಂಕ್ಯ, ಸೂರ್ಲಬ್ಬಿ ವ್ಯಾಪ್ತಿಯಲ್ಲಿ ಮರಿಯಾನೆಯನ್ನು ಒಳಗೊಂಡAತೆ ೪ ಕಾಡಾನೆಗಳು ಬೀಡುಬಿಟ್ಟಿದ್ದು, ಗ್ರಾಮಸ್ಥರು ಜೀವ ಭಯದಲ್ಲಿಯೇ ದಿನ ಕಳೆಯುವಂತಾಗಿದೆ.

ಕಾಡಾನೆಗಳ ಹಿಂಡು ಜನವಸತಿ ಮತ್ತು ಕೃಷಿ ಪ್ರದೇಶದಲ್ಲಿಯೇ ಓಡಾಡಿಕೊಂಡಿರುವುದರಿAದ ಶಾಲಾ ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳು, ಕೆಲಸ ಕಾರ್ಯಗಳಿಗೆ ಹೋಗುವ ಗ್ರಾಮಸ್ಥರು ಆತಂಕದಿAದಲೇ ಸಂಚರಿಸುವAತಾಗಿದೆ.

ಕಾಫಿ ತೋಟ, ಕಾಡು ಪ್ರದೇಶದಲ್ಲಿ ಕಾಡಾನೆಗಳು ಬೀಡುಬಿಟ್ಟಿದ್ದು, ಈಗಾಗಲೇ ಕಾಫಿ, ಏಲಕ್ಕಿ, ಬಾಳೆ ಕೃಷಿ ನಷ್ಟವಾಗಿದೆ. ಗದ್ದೆಗಳಿಗೆ ಲಗ್ಗೆಯಿಡುತ್ತಿರುವುದರಿಂದ ಕೃಷಿ ಕೈಗೊಳ್ಳಲು ಹಿಂದೇಟು ಹಾಕುವಂತಾಗಿದೆ. ಗ್ರಾಮದ ಚಾಮೇರ ಪಾಪಯ್ಯ, ಸಂತೋಷ್, ಧರ್ಮಪ್ಪ, ತಮ್ಮಯ್ಯ, ಅಕ್ಷಿತ್, ತಿಮ್ಮಯ್ಯ, ದೇವಯ್ಯ, ಸುಬ್ರಮಣಿ, ಮೇದುರ ಅಯ್ಯಣ್ಣ, ಕುಶಾಲಪ್ಪ, ಪೂವಯ್ಯ, ಮಿಟ್ಟು ಸೇರಿದಂತೆ ಇತರರಿಗೆ ಸೇರಿದ ಕಾಫಿ, ಏಲಕ್ಕಿ, ಬಾಳೆ ನಷ್ಟಗೊಂಡಿವೆ.

ಕಾಡಾನೆಗಳು ತೋಟಗಳಲ್ಲಿ ಮನಸೋಯಿಚ್ಛೆ ಸಂಚರಿಸುತ್ತಿದ್ದು, ಬಾಳೆಯನ್ನು ನಿರ್ನಾಮಗೊಳಿಸಿವೆ. ಅರಣ್ಯ ಇಲಾಖಾ ಸಿಬ್ಬಂದಿಗಳು ಗ್ರಾಮಕ್ಕೆ ಬಂದು ಹೋಗುತ್ತಿದ್ದಾರೆ. ಆದರೆ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯ ಮಾತ್ರ ಮಾಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಪ್ರತಿ ವರ್ಷ ಹೆಚ್ಚು ಮಳೆಯಾಗುವ ಈ ಭಾಗದಲ್ಲಿ ಫಸಲು ನಷ್ಟದ ನಡುವೆಯೂ ಅಳಿದುಳಿದ ಕೃಷಿ ಫಸಲನ್ನು ಮಾರಾಟ ಮಾಡಿ ಬದುಕು ಸಾಗಿಸುತ್ತಿದ್ದೇವೆ. ಆದರೆ ಈ ವರ್ಷ ಕಾಡಾನೆಗಳ ಉಪಟಳ ಅಧಿಕವಾಗಿದ್ದು, ಹೆಚ್ಚುವರಿ ಎಂಬAತೆ ಫಸಲು ನಷ್ಟವಾಗಿದೆ. ತಕ್ಷಣ ಅರಣ್ಯ ಇಲಾಖೆಗೆ ಕೃಷಿ ಫಸಲು ನಷ್ಟಕ್ಕೆ ಗರಿಷ್ಠ ಪರಿಹಾರ ಒದಗಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗದ್ದೆಗಳಲ್ಲಿ ನಾಟಿ ಮಾಡಿದ್ದು, ಪೈರು ಬೆಳೆಯುವ ಹಂತದಲ್ಲಿಯೇ ಕಾಡಾನೆಗಳು ತಿಂದು, ತುಳಿದು ನಷ್ಟಪಡಿಸಿವೆ. ಕಾಫಿ ತೋಟದಲ್ಲಿ ಗಿಡಗಳನ್ನೂ ಹಾನಿ ಮಾಡಿವೆ. ಬಾಳೆ ಗಿಡಗಳನ್ನು ನಾಶಗೊಳಿಸಿವೆ. ಇವುಗಳನ್ನು ಅರಣ್ಯಕ್ಕೆ ಅಟ್ಟದಿದ್ದರೆ ಉಳಿದಿರುವ ಕೃಷಿಯೂ ಹಾನಿಯಾಗಲಿದ್ದು, ಗ್ರಾಮಸ್ಥರು ಗುಳೇ ಹೋಗಬೇಕಾಗಬಹುದು ಎಂದು ಗ್ರಾಮಸ್ಥರಾದ ಸಂತೋಷ್, ಪಾಪಯ್ಯ ಅವರುಗಳು ಆತಂಕ ವ್ಯಕ್ತಪಡಿಸಿದ್ದಾರೆ.

೩ ದಿನದಲ್ಲಿ ಕೂಂಬಿAಗ್ : ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆಗೆ ಮೂರು ದಿನದಲ್ಲಿ ಆರಂಭಿಸಲಾಗುವುದು. ಕೂಂಬಿAಗ್ ನಡೆಸುವುದಕ್ಕೂ ಮುನ್ನ ಸ್ಥಳೀಯರಿಗೆ ಮಾಹಿತಿ ನೀಡಲಾಗುವುದು ಎಂದು ವಲಯ ಅರಣ್ಯಾಧಿಕಾರಿ ಚೇತನ್ ಅವರು ‘ಶಕ್ತಿ’ಯೊಂದಿಗೆ ಹೇಳಿದ್ದಾರೆ.

ಗ್ರಾಮಸ್ಥರ ಸಮಸ್ಯೆ ಬಗ್ಗೆ ಅಧಿಕಾರಿಯ ಗಮನ ಸೆಳೆದ ಸಂದರ್ಭ ಮಾತನಾಡಿದ ಅವರು, ಒಂದು ಮರಿಯಾನೆಯನ್ನು ಒಳಗೊಂಡAತೆ ಒಟ್ಟು ೪ ಆನೆಗಳು ಈ ಭಾಗದಲ್ಲಿವೆ. ಕಾಜೂರು ಅರಣ್ಯದಿಂದ ಒಂಟಿ ಸಲಗವೊಂದು ತೆರಳಿದೆ. ಮಡಿಕೇರಿ ಅರಣ್ಯ ಭಾಗದಿಂದ ಮತ್ತೊಂದು ಆನೆ ಬಂದಿದ್ದು, ಇವುಗಳ ಚಲನವಲನದ ಮೇಲೆ ನಿಗಾ ಇರಿಸಲಾಗಿದೆ. ಹೊಳೆಯಲ್ಲಿ ನೀರಿನ ಹರಿವು ಹೆಚ್ಚಿದ್ದರಿಂದ ಮರಿಯಾನೆ ಹೊಳೆ ದಾಟಲು ಆಗುತ್ತಿರಲಿಲ್ಲ. ಇದೀಗ ಮಳೆ ಕಡಿಮೆಯಾಗಿದ್ದು, ಹೊಳೆಯಲ್ಲಿ ನೀರಿನ ಹರಿವು ತಗ್ಗಿದೆ. ಮುಂದಿನ ೩ ದಿನದೊಳಗೆ ಕೂಂಬಿAಗ್ ಆರಂಭಿಸಲಾಗುವುದು. ಗ್ರಾಮಸ್ಥರಿಗೆ ಮಾಹಿತಿ ನೀಡಿ ಆನೆಗಳನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.