ಸುಂಟಿಕೊಪ್ಪ, ಆ. ೧೬: ಸಮೀಪದ ಹೆರೂರಿನ ಕಾಲೋನಿ ಯಲ್ಲಿ ಪತ್ನಿಯನ್ನು ಪತಿ ಕೊಲೆಗೈದ ಘಟನೆ ನಡೆದಿದೆ.
ಪತಿ ಪ್ರಶಾಂತ್ (೨೫) ಪತ್ನಿ ಮಲ್ಲಿಗೆ (೪೫) ಕಳೆದ ೭ ತಿಂಗಳಿನಿAದ ಮದುವೆಯಾಗಿ ತಾ.೧೫ರ ರಾತ್ರಿ ೭.೩೦ರ ಸಂದರ್ಭದಲ್ಲಿ ದಂಪತಿ ಪಾನಮತ್ತರಾಗಿದ್ದರು ಎನ್ನಲಾಗಿದೆ.
ಈ ಸಂದರ್ಭ ಪತ್ನಿಯ ಶೀಲ ಶಂಕಿಸಿ ಪತಿ ಜಗಳ ಆರಂಭಿಸಿದ್ದಾನೆ. ಮಾತಿಗೆ ಮಾತು ವಿಕೋಪಕ್ಕೆ ಹೋದ ಹಿನ್ನೆಲೆಯಲ್ಲಿ ಪತಿ ಪ್ರಶಾಂತ್ ಮಲ್ಲಿಗೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಘಟನೆ
ತಿಳಿದು
ಕೂಡಲೇ
ಪೊಲೀಸರು ಸ್ಥಳಕ್ಕೆ ತೆರಳಿ ಪತಿ ಪ್ರಶಾಂತ್‌ನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮೃತ ಮಲ್ಲಿಗೆಯು ಈ ಹಿಂದೆ ಇಬ್ಬರನ್ನು ವಿವಾಹವಾಗಿದ್ದು, ಈರ್ವರು ಮೃತರಾಗಿದ್ದಾರೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿಲ್ಲಾ ಹೆಚ್ಚುವರಿ ವರಿಷ್ಠಾಧಿಕಾರಿ ಸುಂದರ್‌ರಾಜ್, ಡಿವೈಎಸ್‌ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕರಾದ ಮಹೇಶ್ ಭೇಟಿ ನೀಡಿದರು. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.